:
ಸಾವಯವ ಗೊಬ್ಬರ
25 ಟನ್ ಕೊಟ್ಟಿಗೆ ಗೊಬ್ಬರ ಅಥವಾ
2.5 ಟನ್ ಎರೆಹುಳು ಗೊಬ್ಬರ ಅಥವಾ
12.5 ಟನ್ ಮಳ್ಳಿಗೊಬ್ಬರ (ಪ್ರೆಸ್ಮಡ್ ಕಾಂಪೋಸ್ಟ್)
ಸೂಚನೆ: ಸಾವಯವ ಗೊಬ್ಬರದಲ್ಲಿ 10 ಕಿ.ಗ್ರಾಂ ಅಜೋಸ್ಪಿರಿಲಂ + 10 ಕಿ.ಗ್ರಾಂ ರಂಜಕ ಕರಗಿಸುವ ಸೂಕ್ಷ್ಮಾಣುಜೀವಿಗಳನ್ನು ಬೆರೆಸಿ, 2 ರಿಂದ 3 ವಾರ ಮೊದಲು ಮಣ್ಣಿಗೆ ಹಾಕುವ್ರದು ಉತ್ತಮ.
ಹಸಿರೆಲೆ ಗೊಬ್ಬರ
ನಾಟಿ ಮಾಡುವ ಪೂರ್ವದಲ್ಲಿ ಸಾಲು ಬಿಟ್ಟು ಸಾಲಿನ ಎರಡು ಮಗ್ಗಲು ಸೆಣಬನ್ನು ಅಥವಾ ಡೈಂಚಾ ಅಥವಾ ನವಧಾನ್ಯಗಳ (ಹೆಸರು, ಅಲಸಂದಿ, ಸೋಯಾಅವರೆ, ಉದ್ದು, ಕಡಲೆ, ಗುರೆಳ್ಳು, ಬಿಳಿಎಳ್ಳು, ರಾಜಗಿರಿ ಮತ್ತು ಕೋತಂಬರಿ) ಮಿಶ್ರಣವನ್ನು ಬಿತ್ತಿ, ಬೆಳೆ 45 ರಿಂದ 50 ದಿನಗಳಾದ ಮೇಲೆ ಮುರಿದು ಸಾಲಿನಲ್ಲಿ ಹಾಕಿ ಬೋದು ಹೊಡೆದು ಮುಚ್ಚಬೇಕು. ಸಾಧ್ಯವಾದರೆ ಇದೇ ರೀತಿ ಮತ್ತೊಂದು ಹಸರೆಲೆ ಬೆಳೆ ತೆಗೆದುಕೊಳ್ಳುವ್ರದು ಉತ್ತಮ. ಹೆಕ್ಟೇರಿಗೆ 60 ಕಿ.ಗ್ರಾಂ ಬೀಜ ಬೇಕಾಗುತ್ತವೆ.
ರಾಸಾಯನಿಕ ಗೊಬ್ಬರ
ಸಾರಜನಕ 250 ಕಿ.ಗ್ರಾಂ
ರಂಜಕ 75 ಕಿ.ಗ್ರಾಂ
ಪೋಟ್ಯಾಷ್ 190 ಕಿ.ಗ್ರಾಂ
ಸೂಚನೆ
1. ಸಾರಜನಕ ಶೇ. 10, ಪೂರ್ತಿ ರಂಜಕ ಮತ್ತು ಪೋಟ್ಯಾಷ್ ಗೊಬ್ಬರವನ್ನು ನಾಟಿ ಮಾಡುವಾಗ ಸಾಲುಗಳು ಮಧ್ಯದಲ್ಲಿ ಒದಗಿಸಬೇಕು.
2. ಉಳಿದ ಸಾರಜನಕವನ್ನು ಮೇಲುಗೊಬ್ಬರವಾಗಿ ನಾಟಿಮಾಡಿದ
6 ನೇ ವಾರಕ್ಕೆ ಶೇ. 20
10 ನೇ ವಾರಕ್ಕೆ ಶೇ. 30
14 ನೇ ವಾರಕ್ಕೆ ಶೇ. 40 (ಬೋದು ಒಡೆಯುವಾಗ)
ಉ. ಲಘುಪೋಷಕಾಂಶಗಳ ಬಳಕೆ
ಮಣ್ಣು ಪರೀಕ್ಷೆಗನುಸಾರವಾಗಿ ಕೊರತೆಯ ಲಕ್ಷಣ ಕಂಡುಬಂದಾಗ ಈ ಕೆಳಗಿನ ಲಘುಪೋಷಕಾಂಶಗಳನ್ನು ಉಪಯೋಗಿಸಬೇಕು.
ಪೋಷಕಾಂಶ
|
ರಸಗೊಬ್ಬರ
|
ಮಣ್ಣಿಗೆ ಕಿ.ಗ್ರಾಂ/ಹೆ.
|
ಸಿಂಪರಣೆ
|
ಕಬ್ಬಿಣ
|
ಕಬ್ಬಿಣದ ಸಲ್ಫೇಟ್
|
20-25
|
ಶೇ. 0.25-0.5 ರ ದ್ರಾವಣ
|
ಸತುವ್ರ
|
ಸತುವಿನ ಸಲ್ಫೇಟ್
|
20-25
|
ಶೇ. 0.2-0.5 ರ ದ್ರಾವಣ
|
ತಾಮ್ರ
|
ತಾಮ್ರದ ಸಲ್ಫೇಟ್
|
10-15
|
ಶೇ. 0.1-0.2 ರ ದ್ರಾವಣ
|
ಮಾಲಿಬ್ಡಿನಂ
|
ಅಮೋನಿಯಂ ಮೊಲಿಬ್ಡೇಟ್
|
1-2
|
ಶೇ. 0.02-0.05 ರ ದ್ರಾವಣ
|
ಮ್ಯಾಂಗನೀಸ್
|
ಮ್ಯಾಂಗನೀಸ್ ಸಲ್ಫೇಟ
|
10-15
|
ಶೇ. 0.2-0.5 ರ ದ್ರಾವಣ
|
ಬೋರಾನ್
|
ಬೋರ್ಯಾಕ್ಸ್
|
1.5
|
ಶೇ. 0.1-0.2 ರ ದ್ರಾವಣ
|