:
ತಳಿಗಳು
ಬಳ್ಳಾರಿ ರೆಡ್: ಈ ತಳಿಯ ಗಡ್ಡೆಗಳು ಸಾಧಾರಣ ಗಾತ್ರದಿಂದ ಕೂಡಿದ್ದು ಅಧಿಕ ಇಳುವರಿ ಕೊಡುತ್ತದೆ. ಇದು ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯುವ ತಳಿ. ಗಡ್ಡೆಗಳನ್ನು ಹೆಚ್ಚು ದಿನ ಕೆಡದಂತೆ ಶೇಖರಿಸಬಹುದು.
ಪೂಸಾ ರೆಡ್: ಗಡ್ಡೆಗಳು ಸಾಧಾರಣ ಗಾತ್ರದ್ದಾಗಿದ್ದು ಕೆಂಪು ಬಣ್ಣ ಮತ್ತು ಕಡಿಮೆ ಖಾರದಿಂದ ಕೂಡಿವೆ.
ಅರ್ಕಾ ಪ್ರಗತಿ: ಗಡ್ಡೆಗಳು ದುಂಡನೆಯ ಆಕಾರ ಹೊಂದಿದ್ದು ಸಾಧಾರಣ ಗಾತ್ರದಿಂದ ಕೂಡಿರುತ್ತವೆ. ಹೆಚ್ಚು ದಿನ ಸಂಗ್ರಹಿಸಿಡಬಹುದು.
ಅರ್ಕಾ ನಿಕೇತನ್: ಕೆಂಪು ಬಣ್ಣದ ಗಡ್ಡೆಗಳು ಗಟ್ಟಿಯಾಗಿದ್ದು, ಸಾಧಾರಣ ಗಾತ್ರದಿಂದ ಕೂಡಿದ್ದು ಹೆಚ್ಚು ದಿನ ಶೇಖರಿಸಿಡಬಹುದು. ಗಡ್ಡೆಗಳು ಒಡೆಯದಿರುವ್ರದು ಈ ತಳಿಯ ವಿಶೇಷ ಲಕ್ಷಣ. ಒಣ ಪದಾರ್ಥ ಹೆಚ್ಚಾಗಿರುತ್ತದೆ.
ಅರ್ಕಾ ಕಲ್ಯಾಣ: ಈ ತಳಿ ಆಕರ್ಷಕ ಕೆಂಪು ಬಣ್ಣದ ದುಂಡನೆಯ ಗಡ್ಡೆಗಳನ್ನು ಹೊಂದಿದ್ದು. ಗಡ್ಡೆ ರಸವತ್ತಾಗಿ ತೊಟ್ಟು ಚಿಕ್ಕದಾಗಿರುತ್ತದೆ. ಸಾಧಾರಣ ಶೇಖರಣಾ ಗುಣಮಟ್ಟ ಹೊಂದಿದೆ.
ಎನ್-53: ಇದು ಆಕರ್ಷಕ ಕೆಂಪು ಬಣ್ಣದ ದುಂಡು ಗಡ್ಡೆಗಳನ್ನು ಹೊಂದಿರುವ್ರದಲ್ಲದೇ ಹೆಚ್ಚು ದಿನ ಶೇಖರಿಸಿಡಬಹುದು. ಮುಂಗಾರಿಗೆ ಸೂಕ್ತ ತಳಿ.ತೆಲಗಿ ಕೆಂಪು ಮತ್ತು ತೆಲಗಿ ಬಿಳಿ : ಸ್ಥಳೀಯ ಜನಪ್ರಿಯ ತಳಿಗಳೂ
ಅರ್ಕಾ ಪಿತಾಂಬರ: ಹಳದಿ ಬಣ್ಣದ ಮಧ್ಯಮ ಗಾತ್ರದ ಗಡ್ಡೆಗಳನ್ನು ಹೊಂದಿದ್ದು, ಎಲೆ ಸುಡುರೋಗ, ಥ್ರಿಪ್ಸ್ ನುಶಿ ಮತ್ತು ಬುಡ ಕೊಳೆ ರೋಗ ನಿರೋಧಕ ಶಕ್ತಿ ಹೊಂದಿದೆ.
ಅರ್ಕಾ ಬಿಂದು: ಗುಲಾಬಿ ಕೆಂಪು ಬಣ್ಣದ ಸಣ್ಣ ಗಾತ್ರದ ಗಡ್ಡೆಗಳನ್ನು ಹೊಂದಿದ್ದು ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದೆ.