:
ಪ್ರಭೇದಗಳು ಮತ್ತು ತಳಿಗಳು
1. ಕಾಕಡ (ಜಾಸ್ಮಿನಮ್ ಮಲ್ಟಿಪ್ಲೋರಮ್): : ಗಿಡಗಳು ಪೊದೆಯಾಕಾರದಲ್ಲಿದ್ದು ವರ್ಷವಿಡೀ ಹೂ ಬಿಡುತ್ತವೆ. ಬೇಸಿಗೆಯಲ್ಲಿ ಕಡಿಮೆ ಹೂ ಬಿಡುತ್ತವೆ. ಸುವಾಸನೆ ರಹಿತವಾದ ಈ ತಳಿಯ ಹೂಗಳು ಹೆಚ್ಚು ಕಾಲ ಬಾಡುವ್ರದಿಲ್ಲ. ಐ.ಐ.ಎಚ್.ಆರ್. ಸಂಸ್ಥೆಯ ಅರ್ಕ ಅರ್ಪಣ್ ಸುವಾಸನೆಯುಳ್ಳದ್ದಾಗಿದೆ.
2. ಗುಂಡು / ದುಂಡು ಮಲ್ಲಿಗೆ (ಜಾಸ್ಮಿನಮ್ ಸಾಂಬ್ಯಾಕ್: ಇದನ್ನು ಮೈಸೂರು ಅಥವಾ ಬಳ್ಳಾರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದರಲ್ಲಿ ಒಂದು, ಎರಡು ಮತ್ತು ಅನೇಕ ಸುತ್ತಿನ ಹೂದಳಗಳಿರುವ ಹೂವಿನ ವಿಧಗಳಿವೆ. ಗಿಡಗಳು ಪೊದೆಯಾಕಾರದಲ್ಲಿದ್ದರೂ ಅದನ್ನು ಸರಿಯಾಗಿ ಸವರಿ ಬಳ್ಳಿಯಂತೆ ಬೆಳೆಸಬಹುದಾಗಿದೆ. ಹೂಗಳು ಸುವಾಸನೆ ಭರಿತವಾಗಿದ್ದು, ಮೊಗ್ಗುಗಳು ದೊಡ್ಡ ಗಾತ್ರ ಹೊಂದಿ ಗುಂಡಗಿರುತ್ತವೆ. ಬೇಸಿಗೆ ಮತ್ತು ಮಳೆಗಾಲಗಳಲ್ಲಿ (ಮಾರ್ಚ್ನಿಂದ ಅಕ್ಟೋಬರ್ ತಿಂಗಳವರೆಗೆ) ಹೂ ಕೊಡುತ್ತದೆ. ಈ ಮಲ್ಲಿಗೆಯ ಇತರ ತಳಿಗಳೆಂದರೆ ಅರ್ಕ ಆರಾಧನಾ, ಮೋಗ್ರ, ರಾಮನಾಥಪುರಂ, ರಾಮಬಾಣಂ, ಏಳುಸುತ್ತಿನ ಮಲ್ಲಿಗೆ, ಕಸ್ತೂರಿ ಮಲ್ಲಿಗೆ, ಬೇಲಾ, ವಿರೂಪಾಕ್ಷಿ ಇತ್ತಾದಿ.
3. ವಸಂತ ಮಲ್ಲಿಗೆ (ಜಾಸ್ಮಿನಮ್ ಆರಿಕ್ಯುಲೇಟಮ್: ಪೊದೆ ಜಾತಿಯ ಈ ತಳಿ ವರ್ಷದಾದ್ಯಂತ ಹೂ ಕೊಡುತ್ತದೆ. ಆದರೆ ಮುಂಗಾರಿನಲ್ಲಿ ಹೆಚ್ಚು ಇಳುವರಿ ಕೊಡುತ್ತದೆ. ಹೂಗಳು ಸುವಾಸನೆ ಭರಿತವಾಗಿದ್ದು ಹೆಚ್ಚಿನ ಪ್ರಮಾಣದ ಸುಗಂಧದ್ರವ್ಯ ಕೊಡಬಲ್ಲವ್ರ (ಶೇ. 0.28 ರಿಂದ 0.36). ಹುಗಳನ್ನು ಬಿಡಿ ಹೂವಾಗಿ ಒಳಾಂಗಣ ಅಂದಗೊಳಿಸಲು ಮತ್ತು ಸುಗಂಧದ್ರವ್ಯ ತೆಗೆಯಲು ಬಳಸುತ್ತಾರೆ. ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾಗಿರುವ ಪಾರಿಮುಲ್ಲೈ, ಸಿ.ಓ.-1 ಮುಲ್ಲೈ ಹಾಗೂ ಸಿ.ಓ.-2 ಮುಲ್ಲೈ ಮತ್ತು ಅಂಬೂರ್ ಮಲ್ಲಿಗೆಗಳು ಈ ಮಲ್ಲಿಗೆಯ ಮುಖ್ಯ ತಳಿಗಳು.
4. ಜಾಜಿ ಮಲ್ಲಿಗೆ (ಜಾಸ್ಮಿನಮ್ ಗ್ರ್ಯಾಂಡಿಪ್ಲೋರಮ್): ಬಳ್ಳಿಯಂತೆ ಬೆಳೆಯುವ ಇದು ಸುವಾಸನೆಭರಿತ ಹೂಗಳನ್ನು ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಕೊಡುತ್ತದೆ. ಅಧಿಕ ಸುಗಂಧ ಎಣ್ಣೆಯನ್ನೊಳಗೊಂಡಿರುವ ಇದರ ಹೂಗಳನ್ನು ಹೆಚ್ಚಾಗಿ ಸುಗಂಧದ್ರವ್ಯ ತಯಾರಿಕೆಗೆ ಹಾಗೂ ಬಿಡಿ ಹೂವಾಗಿ ಕೂಡ ಉಪಯೋಗಿಸುತ್ತಾರೆ. ಹೂಗಳಲ್ಲಿ ಸುಗಂಧ ಎಣ್ಣೆಯ ಪ್ರಮಾಣ ಶೇ. 0.24 ರಿಂದ 0.42 ರಷ್ಟು ಇರುತ್ತದೆ. ಐ.ಐ.ಎಚ್.ಆರ್. ನಿಂದ ಅರ್ಕ ಸುರಭಿ, ತಮಿಳುನಾಡು ಕೃಷಿ ವಿಶ್ವವಿದ್ಯಾನಿಯಲದಿಂದ ಸಿ.ಓ.-1 ಪಿಚ್ಚಿ, ಸಿ.ಓ.-2 ಪಿಚ್ಚಿ ತಳಿಗಳು ಮುಖ್ಯವಾದವ್ರ.
ಉಡುಪಿ ಮಲ್ಲಿಗೆ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಉತ್ತಮವಾಗಿ ಬೆಳೆಯಬಹುದಾದ ಈ ತಳಿಯು ಜಾಸ್ಮಿನಮ್ ಸಾಂಬಾಕ್ ಪ್ರಭೇದಕ್ಕೆ ಸೇರಿದೆ. ಸಾಮಾನ್ಯವಾಗಿ ಪೊದೆಯಾಕಾರದಲ್ಲಿ ಬೆಳೆದು ಉದ್ದನೆಯ ಚೂಪಾದ ಒಂದು ಸುತ್ತಿನ ಸುಗಂಧಭರಿತ ಸಣ್ಣಗಾತ್ರದ ಹೂಗಳನ್ನು ಜನವರಿಯಿಂದ ನವೆಂಬರ್ ತಿಂಗಳವರೆಗೂ ಬಿಡುತ್ತದೆ. ಇದರ ಮೊಗ್ಗುಗಳು ಕೊಯ್ಲಿಗೆ ನಂತರ 10-12 ಗಂಟೆಗಳವರೆಗೂ ಅರಳುವ್ರದಿಲ್ಲ ಮತ್ತು ಬಾಡುವ್ರದಿಲ್ಲ.