ಕ್ರ.ಸಂ |
ಪೀಡೆ |
ಲಕ್ಷಣ ಮತ್ತು ಹಾನಿ |
ನಿರ್ವಹಣಾ ಕ್ರಮಗಳು |
ಅ.
|
ಕೀಟಗಳು |
|
|
1.
|
ಅಗ್ರೋಮೈಜಿಡ್ ನೊಣ |
ಈ ನೊಣವ್ರ ಎಳೆಯದಾದ ಭಾಗಗಳಲ್ಲಿ ಮೊಟ್ಟೆಯಿಡುತ್ತದೆ ಮರಿಗಳು ಕಾಂಡ ಕೊರೆಯುತ್ತವೆ. ಕೊರೆದ ಕಾಂಸ ಬಾಡುತ್ತದೆ.
ಎಳೆಯ ಗಿಡಗಳಿಗೆ ಹೆಚ್ಚು ನಷ್ಟವಾಗುತ್ತದೆ.
|
ಮುಂಚಿತವಾಗಿ ಬಿತ್ತನೆ ಮಾಡುವ್ರದು, ಬಾಡುತ್ತಿರುವ ಸಸಿಗಳನ್ನು ಕಿತ್ತು ನೆಲದಲ್ಲಿ ಹೂಲಿದರೆ ಮುಂದಿನ ಪೀಳಿಗೆಯನ್ನು ತಡೆಗಟ್ಟಬಹುದು. ಪ್ರತಿ ಲೀಟರ್ ನೀರಿನಲ್ಲಿ 0.2 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾಂ ಥೈಯಾಮಿಥಾಕ್ಯಾಮ್ 25 ಡಬ್ಲೂಜಿ ಅಥವಾ 1.7 ಮಿ.ಲೀ. ಡೈಮಿಥೊಯೇಟ್ 30 ಇ.ಸಿ. ಅಥವಾ 0.5 ಮಿ.ಲೀ. ಫಾಸ್ಫಾಮಿಡಾನ್ ೮೫ ಡಬ್ಲೂ.ಎಸ್.ಸಿ. ಬೆರೆಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 500 ಲೀ. ಸಿಂಪರಣಾ ದ್ರಾವಣ ಬಳಸಬೇಕು. |
2. |
ಹೇನು ಹಾಗೂ ಥ್ರಿಪ್ಸ್ |
ಚಿಗುರೆಲೆ ಮತ್ತು ಕಾಯಿಗಳಿಂದ ರಸ ಹೀರುತ್ತವೆ. ಕಾಯಿಗಳು ಜೊಳ್ಳಾಗಿರುತ್ತವೆ. |
ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಅಥವಾ 1 ಮಿ.ಲೀ. ಮೊನೊಕ್ರೋಟೊಫಾಸ್ 36 ಎಸ್. ಎಲ್. ಅಥವಾ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು. |
3. |
ಎಲೆ ತಇನ್ನುವ ಹುಳು |
ಎಲೆಗಳನ್ನು ತಿಂದು ನಾಶಪಡಿಸುತ್ತದೆ. |
ಮೇಲಿನ ಕೀಟನಾಶಕಗಳಲ್ಲಿ ಯಾವ್ರದಾದರೊಂದನ್ನು ಸಿಂಪಡಿಸಬೇಕು. |
4. |
ಕಾಯಿ ಕೊರೆಯುವ ಹುಳು |
ಕಾಯಿ ಕೊರೆದು ಮೊಟ್ಟೆಯನ್ನಿಡುತ್ತವೆ. ಮರಿ ಹುಳುಗಳು ಬೀಜವನ್ನು ತಿನ್ನುತ್ತದೆ. |
ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ. ಫೆನವಲರೇಟ್ 20 ಇ.ಸಿ. ಅಥವಾ 2 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ. ಬೆರೆಸಿ ಸಿಂಪರಿಸಬೇಕು. ಹೆಕ್ಟೇರಿಗೆ 500 ಲೀಟರ್ ಸಿಂಪರಣಾ ದ್ರಾವಣ ಬಳಸುವ್ರದು |
5. |
ಮೂತಿ ಹುಳು |
ಹುಳದ ಮರಿಹುಳು ಕಾಳುಗಳನ್ನು ತಿನ್ನುವ್ರದರಿಂದ ಇಳುವರಿ ಕಡಿಮೆಯಾಗುವ್ರದು. |
-ಸದರ- |
6. |
ಕೊಂಬಿನ ಹುಳು |
ಈ ಕೀಡೆಯು ಹಸಿರು ಬಣ್ಣದಿದ್ದು ಮೈಯ ಹಿಂಭಾಗದಲ್ಲಿ ಚಿಕ್ಕದಾದ ಕೊಂಬನ್ನು ಹೊಂದಿರುತ್ತದೆ. ಇವ್ರ ಸಾಮಾನ್ಯವಾಗಿ ಹೆಸರು, ಎಳ್ಳು, ಉದ್ದು, ಬೆಳೆಗಳಲ್ಲಿ ಎಲೆಗಳನ್ನು ತಿಂದು ಹಾನಿ ಮಾಡುತ್ತವೆ. ಹಾನಿ ಅತೀಯಾದಾಗ ಎಲ್ಲಾ ಎಲೆಗಳನ್ನು ತಿಂದು ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. |
ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಬೇಕು. ದೊಡ್ಡ ದೊಡ್ಡ ಕೀಡೆಗಳನ್ನು ಆರಿಸಿ ನಾಶಪಡಿಸಬೇಕು. ಈ ಕೀಡೆಗಳು ಕಂಡ ತಕ್ಷಣ 4.ಗ್ರಾಂ ಕಾರ್ಬರಿಲ್ 50 ಡಬ್ಲೂ.ಪಿ ಅಥವಾ 2 ಮಿ.ಲೀ. ಕ್ಲೋರ್ಪೈರಿಫಾಸ್ 20 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ನೀರಿನ ಅಭಾವವಿದ್ದ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 20 ಕಿ.ಗ್ರಾಂ ನಂತೆ ಶೇ. 1.5 ರ ಕ್ವಿನಾಲ್ಫಾಸ್ ಅಥವಾ ಶೇ. 0.4ರ ಫೆನವಲರೇಟ್ನ್ನು ಧೂಳೀಕರಣ ಮಾಡಬೇಕು. |