:
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ)
ಬೀಜ 25-30 ಕಿ.ಗ್ರಾಂ
ಬಿತ್ತನೆ
ಬಿತ್ತನೆಗೆ ಭೂಮಿ ಹದ ಮಾಡಿದ ನಂತರ ಶಿಫಾರಸಿದ ಎಲ್ಲ ರಸಗೊಬ್ಬರಗಳನ್ನು 45 ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತುವ ಕೂರಿಗೆಯ ಸಹಾಯದಿಂದ ಮಣ್ಣಿನಲ್ಲಿ ಬೆರೆಸಿ, ರಾಸಾಯನಿಕ ಗೊಬ್ಬರದ ಸಾಲಿನಿಂದ 7.5 ಸೆಂ.ಮೀ. ದೂರದಲ್ಲಿ ಬೀಜದಿಂದ ಬೀಜಕ್ಕೆ 7.5 ಸೆಂ.ಮೀ. ದಿಂದ 10 ಸೆಂ.ಮೀ. ಅಂತರದಲ್ಲಿ ಬೀಜವನ್ನು ಬಿತ್ತಬೇಕು ಬೀಜವನ್ನು ಬಿತ್ತನೆಗೆ ಮೊದಲು ರೈಜೋಬಿಯಂ ಜೀವಾಣುಗಳಿಂದ ಉಪಚರಿಸಬೇಕು.