:
ತಳಿಗಳು
1.ಪೂಸಾ ಸದಾಬಹಾರ್: ಬೇಸಿಗೆ ಕಾಲಕ್ಕೆ ಸೂಕ್ತವಾದ ತಳಿ. ಬಿತ್ತನೆಯಾದ 45 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದು ನೆಟ್ಟಗೆ ಬೆಳೆಯುವಂತಹ ತಳಿಯಾಗಿದೆ. ಇದರ ಕಾಯಿಗಳು ಹಸಿರು ಬಣ್ಣದ್ದಾಗಿದ್ದು 12 ಸೆಂ.ಮೀ. ಉದ್ದವಿರುತ್ತವೆ. ಕಾಯಿಗಳು ಎಳಸಾಗಿ ನಾರು ರಹಿತವಾಗಿರುತ್ತವೆ.
2.ಪೂಸಾ ಮೌಸಮಿ: ಇದು ಒಂದು ಕವಲು ಒಡೆಯುವಂತಹ ದೀರ್ಘಾವಧಿ ತಳಿಯಾಗಿದೆ (65-80 ದಿನಗಳು). ಈ ತಳಿಯು ಮಳೆಗಾಲಕ್ಕೆ ಸೂಕ್ತವಾಗಿದೆ. ಇದರ ಕಾಯಿಗಳು ಮೃದುವಾಗಿ, ಹಸಿರು ಬಣ್ಣ ಹೊಂದಿದ್ದು 10 ಸೆಂ.ಮೀ. ಉದ್ದವಾಗಿದೆ.
3.ಪೂಸಾ ನೌಬಹಾರ್: ಇದು ಪೂಸಾ ಸದಾಬಹಾರ್ ಮತ್ತು ಪೂಸಾ ಮೌಸಮಿ ತಳಿಗಳ ಸಂಕರಣ ತಳಿಯಾಗಿದೆ. ಇದರ ಗಿಡಗಳು ಪೂಸಾ ಸದಾಬಹಾರ್ ತಳಿ ಹೋಲುತ್ತವೆಯಲ್ಲದೆ ಕಾಯಿಗಳ ಗುಣಮಟ್ಟ ಪೂಸಾ ಮೌಸಮಿಯ ತರಹವಿದೆ. ಈ ತಳಿಯು ಬೇಸಿಗೆ ಮತ್ತು ಮಳೆಗಾಲಕ್ಕೆ ಸೂಕ್ತವಾಗಿದೆ.