:
ಸಸಿ ನಾಟಿ ಮಾಡಿದ 40 ರಿಂದ 50 ದಿನಗಳ ನಂತರ ಹಸಿರು ಕಾಯಿಗಳನ್ನು ಪಡೆಯಬಹುದು. ಒಣ ಮೆಣಸಿನಕಾಯಿಗೆ ಸಸಿ ನಾಟಿಮಾಡಿದ 70 ರಿಂದ 80 ದಿನಗಳ ನಂತರ ಕೊಯ್ಲು ಮಾಡಬಹುದು.
ಕೊಯ್ಲು ನಂತರ ಸಂಸ್ಕರಣೆ
ಸೌರ ಶಾಖ ಪೆಟ್ಟಿಗೆ (ಸೋಲಾರ ಟನಲ್ ಮಾದರಿ):
ಸೌರ ಶಾಖ ಪೆಟ್ಟಿಗೆಯನ್ನು (ಸೋಲಾರ ಟನಲ್ ಮಾದರಿ) ಉಪಯೋಗಿಸಿ ಸುಮಾರು ಒಂದು ಟನ್ ಮೆಣಸಿನಕಾಯಿಯನ್ನು 53-54 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ 43 ಗಂಟೆಗಳಲ್ಲಿ ಒಣಗಿಸಿ ಉತ್ತಮ ಗುಣಮಟ್ಟದ ಒಣಮೆಣಸಿನಕಾಯಿಯನ್ನು ಪಡೆಯಬಹುದು. ಈ ಸುಧಾರಿತ ವಿಧಾನದಿಂದ ಒಣಗಿಸಲು ಬೇಕಾಗುವ ಸಮಯದಲ್ಲಿ ಶೇ. 40 ರಿಂದ 55 ರಷ್ಟು ಕಡಿತ ಮಾಡಬಹುದು. ಇದರ ಅಂದಾಜು ಬೆಲೆ ರೂ. 1,00,000
ಶೇಖರಣೆ
ಗಾಳಿ ಇಲ್ಲದ ಚೀಲಗಳಲ್ಲಿ ಶೇಖರಣೆ : ಒಣ ಮೆಣಸಿನಕಾಯಿಗಳನ್ನು ಮತ್ತು ಮೆಣಸಿನಕಾಯಿ ಪುಡಿಯನ್ನು ಗಾಳಿ ಇಲ್ಲದ (ವ್ಯಾಕ್ಯೂಮ್) ಚೀಲಗಳಲ್ಲಿ ಬಣ್ಣ ಮತ್ತು ಖಾರದ ಗುಣಮಟ್ಟ ಕೆಡದಂತೆ 24 ತಿಂಗಳು ಶೇಖರಣೆ ಮಾಡಬಹುದು.
ಒಣ ಮೆಣಸಿನಕಾಯಿ ಪುಡಿ:
ಒಣ ಮೆಣಸಿನಕಾಯಿಗಳನ್ನು ಪುಡಿ ಮಾಡಲು ಸಾಮಾನ್ಯವಾಗಿ ಖಾರ ಕಟ್ಟುವ ಯಂತ್ರ (ಪೌಂಡಿಂಗ್ ಮಷಿನ್) ಅಥವಾ ಖಾರ ಪುಡಿ ಮಾಡುವ ಯಂತ್ರವನ್ನು (ಪಲ್ವರೈಸರ್) ಉಪಯೋಗಿಸುತ್ತಾರೆ. ಆದರೆ, ನೀರಿನ ಕವಚ ಹೊಂದಿದ ಪುಡಿಮಾಡುವ ಯಂತ್ರವನ್ನು ಉಪಯೋಗಿಸಿದರೆ ಕಡಿಮೆ ತಾಪಮಾನದಲ್ಲಿ ಪುಡಿ ಮಾಡಬಹುದಾಗಿದ್ದು, ಮೂಲವಸ್ತುವಿನ ಗುಣಲಕ್ಷಣಗಳನ್ನು (ಬಣ್ಣ, ಖಾರ ಮತ್ತು ಆಸ್ಕೋರ್ಬಿಕ್ ಆಮ್ಲ) ಕಾಪಾಡಿಕೊಂಡು ಕಡುಗೆಂಪು ಬಣ್ಣ ಹೊಂದಿರುವ ಉತ್ಕøಷ್ಟ ಗುಣಮಟ್ಟದ ಮೆಣಸಿನಕಾಯಿ ಪುಡಿಯನ್ನು ಪಡೆಯಬಹುದು.