1.
|
ಕುಸುಬೆ ಹೇನು
|
ಹೇನುಗಳು ಕಾಂಡ, ಎಲೆ ಮತ್ತು ತೊಂಡಿಲುಗಳಿಂದ ರಸ ಹೀರುವುದರಿಂದ ಎಲೆಗಳು ಬಾಡಿದಂತಾಗಿ ಮುದುರಿ ಕೊಳ್ಳುತ್ತವೆ. ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬೂಷ್ಟು ಬೆಳೆಯುತ್ತದೆ. ಕೀಟದ ಬಾಧೆ ತೀವ್ರ ವಾದಲ್ಲಿ ಗಿಡಗಳು ಸಂಪೂರ್ಣವಾಗಿ ಒಣಗುತ್ತವೆ. ಇದರ ಬಾಧೆಯಿಂದ ಶೇ. 30-40 ರಷ್ಟು ಬೆಳೆಗೆ ಹಾನಿಯುಂಟಾಗುವುದು. ಆರ್ಥಿಕ ನಷ್ಟದ ರೇಖೆ 35-40 ಹೇನುಗಳು ಪ್ರತಿ 2 ಇಂಚು ಕಾಂಡದ ತುದಿಗೆ.
|
ಬಿತ್ತಿದ 40 ದಿನಗಳ ನಂತರ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಶೇ. 1ರ ಹತ್ತಿಕಾಳು ಎಣ್ಣೆ (ಶೇ.0.2 ಸೋಪಿನ ದ್ರಾವಣದೊಂದಿಗೆ ಬೆರೆಸಿ) ಹಾಗೂ 60 ದಿನಗಳ ನಂತರ ಡೈಮಿಥೊಯೇಟ್ 30 ಇ.ಸಿ. (1.7 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ) ಬೆಳೆಗೆ ಸಿಂಪಡಿಸಬೇಕು. ಅಥವಾ ಬಿತ್ತಿದ 40 ಮತ್ತು 60 ದಿನಗಳ ನಂತರ 0.2 ಗ್ರಾಂ ಥೈಯಾಮಿಥಾಕ್ಸಾಮ್ 25 ಡಬ್ಲು.ಜಿ. ಅಥವಾ 1 ಗ್ರಾಂ ಆಸಿಫೇಟ್ 75 ಎಸ್.ಪಿ. ಅಥವಾ 1.7 ಮಿ.ಲೀ. ಡೈಮಿಥೊಯೇಟ್ 30 ಇ.ಸಿ. ಅಥವಾ 1 ಮಿ.ಲೀ. ಮೊನೊಕ್ರೊಟೋಫಾಸ್ 36 ಎಸ್.ಎಲ್.ಒಂದು ಲೀಟರ್ ನೀರಿಗೆ ಬೆರೆಸಿ ಬಎಳೆಗೆ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 500 ಲೀ. ಸಿಂಪರಣಾ ದ್ರಾವಣವನ್ನು ಬಳಸಬೇಕು. ಪ್ರತಿ ಹೆಕ್ಟೇರಿಗೆ 500 ಲೀ. ಸಿಂಪರಣಾ ದ್ರಾವಣವನ್ನು ಬಳಸಬೇಕು. ನೀರಿನ ಅಭಾವವಿದ್ದಲ್ಲಿ ಹೆಕ್ಟೇರಿಗೆ 20-25 ಕಿ.ಗ್ರಾಂ ನಂತೆ ಕ್ವಿನಾಲ್ಫಾಸ್ ಶೇ. 1.5 ರ ಪುಡಿ ಅಥವಾ ಮೆಲಾಥಿಯನ್ ಶೇ. 5ರ ಪುಡಿಯನ್ನು ಬೆಳೆಯ ಮೇಲೆ ಬೆಳಗಿನ ಜಾವ ಧೂಳೀಕರಿಸುವುದು ಉತ್ತಮ.
|