ಹೆಸರು ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಸುಧಾರಿತ ಕ್ರಮಗಳು
ಮುಂಗಾರಿನಲ್ಲಿ ಜೂನ್ ತಿಂಗಳ ಕೊನೆಯವರೆಗೆ ಬಿತ್ತಬಹುದು ಬೀಜ: 5-6 ಕಿ.ಗ್ರಾಂ ಕೊಟ್ಟಿಗೆ/ಕಾಂಪೋಸ್ಟ್ ಗೊಬ್ಬರ : 3 ಟನ್ ಬೇಕಾಗುವ ಸಾಮಗ್ರಿಗಳು (ಪ್ರತಿ ಎಕೆರೆಗೆ) ರಾಸಾಯಿನಿಕ ಗೊಬ್ಬರ ಸಾರಜನಕ : 10 ಕಿ.ಗ್ರಾಂ ರಂಜಕ : 20 ಕಿ.ಗ್ರಾಂ ರೈಜೋಬಿಯಂ ಜೀವಾಣು : 200 ಗ್ರಾಂ ರಂಜಕ ಕರಗಿಸುವ ಗೊಬ್ಬರ : 200 ಗ್ರಾಂ ಸತುವಿನ ಸಲ್ಪೇಟ್ : 40 ಕಿ.ಗ್ರಾಂ
- ಬಿತ್ತುವ ಮುನ್ನ ಮೊದಲು ಎಕರೆಗೆ ಬೇಕಾಗುವ ಬೀಜವನ್ನು ಶಿಫಾರಸ್ಸು ಮಾಡಿದ ರೈಜೋಬಿಯಂ ಮತ್ತು ರಂಜಕ ಕರಗಿಸುವ ಜೀವಾಣುಗಳಿಂದ ಬೀಜೋಪಚಾರ ಮಾಡಿ, ನೆರಳಿನಲ್ಲಿ ಒಣಗಿಸ ಬಿತ್ತಬೇಕು.
- ಬಿತ್ತುವ ಮೂರು ವಾರಗಳ ಮುಂಚಿತವಾಗಿ ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನಲ್ಲಿ ಬೆರಸಬೇಕು. ಭೂಮಿ ಸಿದ್ದಮಾಡಿದ ಮೇಲೆ ಪೂರ್ತಿ ರಸಗೊಬ್ಬರವನ್ನು ಬಿತ್ತುವ ಸಮಯದಲ್ಲಿ ಹಾಕಿ ಬೀಜವನ್ನು ಸಾಲಿನಿಂದ ಸಾಲಿಗೆ 30 ಸೆಂ.ಮೀ ಮತ್ತು ಗಿಡದಿಂದ 10 ಸೆಂ.ಮೀ ಅಂತರದಲ್ಲಿ ಬಿತ್ತನೆ ತೆಗೆದುಕೊಳ್ಳಬೇಕು.
- ಬೆಳೆಯ ವಿವಿಧ ಹಂತಗಳಲ್ಲಿ ಕಂಡುಬರುವ ಬೆರಕೆ ಗಿಡಗಳನ್ನು ಬೆಳೆಯ ಸ್ವಬಾವ, ಕಾಯಿಯ ಮೇಲೆ ಇರುವ ರೋಮಗಳು ಕಾಯಿ ಬಣ್ಣ ಮತ್ತು ಇತ್ಯಾದಿ ಗುಣ ಆದಾರದ ಮೇಲೆ ಕಿತ್ತು ಹಾಕಬೇಕು
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್ ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
- Login to post comments
- 2232 reads