Skip to main content

ಹತ್ತಿಯಲ್ಲಿ ಬಿತ್ತನೆ

ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು

ಬಿತ್ತನೆ ಬೀಜ                                         ಕಿ.ಗ್ರಾಂ./ಹೆಕ್ಟೇರಿಗೆ

                                   ತಳಿ                                 ಹೈಬ್ರಿಡ್

ಕೂರಿಗೆ ಬಿತ್ತನೆ                  7.5-10.0                                  --

ಕೈಗಾಳು ಹಾಕುವುದು            5.0-6.0                              2.5-3.0

ಸೂಚನೆ : ಹತ್ತಿ ಬೀಜವನ್ನು ನಿಗರ್ುಂಜಿಗೊಳಿಸುವುದು: ಒಂದು ಕಿ.ಗ್ರಾಂ. ಹತ್ತಿ ಬೀಜವನ್ನು 100 ಮಿ.ಲೀ. ವಾಣಿಜ್ಯ ದಜರ್ೆಯ ಶೇ.2ರ ಗಂಧಕಾಮ್ಲದಲ್ಲಿ ಹತ್ತು ನಿಮಿಷಗಳವರೆಗೆ ಚೆನ್ನಾಗಿ ಕಲಿಸಿ ತದನಂತರ ಶೇ. 2ರ ಸುಣ್ಣದ ತಿಳಿ ನೀರಿನಲ್ಲಿ ಬೀಜವನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಈ ರೀತಿ ಗಂಧಕಾಮ್ಲದಿಂದ ಗುಂಜು ಬಿಡಿಸಿದ ಕಾಳುಗಳನ್ನು ಉಪಯೋಗಿಸುವುದರಿಂದ ಮೊಳಕೆ ಪ್ರಮಾಣ ಹೆಚ್ಚಿಸಬಹುದು

ಬಿತ್ತನೆ

ಬಿತ್ತನೆಗೆ ಎರಡು ವಾರಗಳ ಮೊದಲು ಕೊಟ್ಟಿಗೆ ಅಥವಾ ಕಾಂಪೋಸ್ಟ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಬೇಕು. ಮಳೆಯಾಶ್ರಿತ ಹತ್ತಿಗೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಎಲ್ಲ ರಸಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಆದರೆ ಉತ್ತಮ ಮಳೆಯಾಗುವ ಅರೆಮಲೆನಾಡು ಪ್ರದೇಶದಲ್ಲಿ ಅರ್ಧದಷ್ಟು ಸಾರಜನಕ, ಪೂತರ್ಿ ಪ್ರಮಾಣದ ರಂಜಕ ಮತ್ತು ಪೋಟ್ಯಾಷ್ ರಸಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಉಳಿದ ಶೇಕಡಾ 50 ರ ಸಾರಜನಕವನ್ನು ಬಿತ್ತನೆಯಾದ 60 ದಿನಗಳ ನಂತರ ಮೇಲು ಗೊಬ್ಬರವಾಗಿ ಕಳೆಗಳನ್ನು ಪೂತರ್ಿ ಹತೋಟಿಯಲ್ಲಿಟ್ಟುಕೊಂಡು ಹಾಕಬೇಕು. ನೀರಾವರಿ ಹತ್ತಿಯಲ್ಲಿ ಶೇ.50 ರಷ್ಟು ಸಾರಜನಕ, ಪೂತರ್ಿ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಉಳಿದ ಶೇಕಡಾ 50 ರ ಸಾರಜನಕವನ್ನು ಮೂರು ಸಮಭಾಗಗಳಲ್ಲಿ ಕ್ರಮವಾಗಿ ಬಿತ್ತನೆಯಾದ 50, 80 ಮತ್ತು 110 ದಿನಗಳಲ್ಲಿ ಮೇಲು ಗೊಬ್ಬರವಾಗಿ ಹಾಕಬೇಕು. ಹೆಚ್ಚಿನ ಮಳೆ ಬೀಳುವ ಮಲೆನಾಡು ಪ್ರದೇಶದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ ರಸಗೊಬ್ಬರಗಳನ್ನು3 ಸಮಭಾಗಗಳಲ್ಲಿ ಕ್ರಮವಾಗಿ ಬಿತ್ತುವಾಗ, ಬಿತ್ತನೆಯಾದ ನಂತರ 60 ಮತ್ತು 90 ದಿನಗಳಲ್ಲಿ ಕೊಡಬೇಕು. ಬಿತ್ತನೆಯಾದ 80 ದಿನಗಳ ನಂತರ 20 ದಿನಗಳಿಗೊಮ್ಮೆ ಎರಡು ಬಾರಿ ಶೇಕಡ 2ರ ಯೂರಿಯಾ ಅಥವಾ ಡಿ.ಎ.ಪಿ. ರಸಗೊಬ್ಬರವನ್ನು ಬೆಳೆಗೆ ಸಿಂಪರಿಸಬೇಕು. ಬೀಜದಿಂದ ಬೀಜಕ್ಕೆ ಕಡಿಮೆ ಅಂತರವಿರುವಾಗ ಮೇಲುಗೊಬ್ಬರವನ್ನು ಗಿಡದ ಪಕ್ಕದಲ್ಲಿ ಸಾಲು ಮಾಡಿ ಗೊಬ್ಬರ ಹಾಕಬೇಕು. ಬೀಜದಿಂದ ಬೀಜಕ್ಕೆ ಹೆಚ್ಚು ಅಂತರವಿರುವಾಗ ಬೀಜದ ಸುತ್ತ 5 ಸೆಂ.ಮೀ. ದೂರ ಮತ್ತು ಆಳದಲ್ಲಿ ರಸಗೊಬ್ಬರ ಹಾಕುವುದರಿಂದ ರಸಗೊಬ್ಬರಗಳು ಹಾನಿಯಾಗದೇ ಸದುಪಯೋಗವಾಗುತ್ತವೆ. ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶದಲ್ಲಿ ಒಣಭೂಮಿಯಲ್ಲಿ ಮಳೆ ಆಗುವುದಕ್ಕಿಂತ ಮೊದಲು ಬಿತ್ತಿದರೆ ಅಧಿಕ ಇಳುವರಿಯನ್ನು ಪಡೆಯಬಹುದಲ್ಲದೇ ಕಳೆಗಳನ್ನು ಹತೋಟಿಯಲ್ಲಿಡಬಹುದು. ಸೂಚನೆ : ವಲಯ 3ಕ್ಕೆ ನೀರಾವರಿ ಹತ್ತಿಯಲ್ಲಿ ಶೇಕಡಾ 25 ರಷ್ಟು ಸಾರಜನಕ ಮತ್ತು ಪೋಟ್ಯಾಷ್ ಪೂತರ್ಿ ರಂಜಕ ಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಶೇಕಡಾ 50 ರಷ್ಟು ಸಾರಜನಕ ಮತ್ತು ಪೋಟ್ಯಾಷ್ನ್ನು ಬಿತ್ತಿದ 30 ದಿನಗಳ ನಂತರ ಹಾಗೂ ಇನ್ನುಳಿದ ಶೇಕಡಾ 25ರಷ್ಟು ಸಾರಜನಕ ಮತ್ತು ಪೋಟ್ಯಾಷ್ನ್ನು ಬಿತ್ತಿದ 60 ದಿನಗಳ ನಂತರ ಪೂರೈಸಬೇಕು.

0
Your rating: None