ಗೊಬ್ಬರದ ಬಳಕೆ
ಸಾವಯವ ಗೊಬ್ಬರಗಳು :
ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರ ಪ್ರತಿ ಹೆಕ್ಟೇರಿಗೆ
ನೀರಾವರಿಯಲ್ಲಿ 10 ಟನ್
ಖುಷ್ಕಿಯಲ್ಲಿ 5 ಟನ್
ಜೈವಿಕ ಗೂಬ್ಬರ
ಅಜೋಸ್ಪಿರಿಲಂ ಅಣುಜೀವಿ 500 ಗ್ರಾಂ
ರಂಜಕ ಕರಗಿಸುವ ಬ್ಯಾಕ್ಟೀರಿಯಾ 500 ಗ್ರಾಂ
ಸೂಚನೆ:1.ನೀರಾವರಿಯಲ್ಲಿ ಕೊಟ್ಟಿಗೆ ಗೊಬ್ಬರದ ಬದಲಾಗಿ ಕೋಳಿ ಗೊಬ್ಬರವನ್ನು ಪ್ರತಿ ಹೆಕ್ಟೇರಿಗೆ 2 ಟನ್ ಉಪಯೋಗಿಸಬಹುದು.
2. ಜೈವಿಕ ಗೊಬ್ಬರವನ್ನು ಬಳಸುವದರಿಂದ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರದಲ್ಲಿ 20 ಕಿ.ಗ್ರಾಂ ಸಾರಜನಕ ಮತ್ತು 10 ಕಿ.ಗ್ರಾಂ ರಂಜಕ ಉಳಿತಾಯ ಮಾಡಬಹುದು.
3. ನೀರಾವರಿ ಹಾಗೂ ಮಲೆನಾಡು ಪ್ರದೇಶದಲ್ಲಿ ಎರಡು ಸಾಲುಗಳ ಮಧ್ಯ ಸಣಬು ಬೆಳೆದು, ಬಿತ್ತಿದ 30 ದಿನಗಳ ನಂತರ ಮಣ್ಣಿನಲ್ಲಿ ಸೇರಿಸುವುದರಿಂದ (ಮುಗ್ಗು ಹೊಡೆಯುವುದು) ಭೂಮಿಯ ಫಲವತ್ತತೆ ಹೆಚ್ಚಾಗುವದಲ್ಲದೇ ಪ್ರಾರಂಭದಲ್ಲಿ ಕಳೆನಿಯಂತ್ರಣವಾಗಿ ಅಧಿಕ ಇಳುವರಿ ಪಡೆಯಬಹುದು.
4. ಬಿತ್ತನೆಗೆ 2 ರಿಂದ 3 ವಾರಗಳ ಮೊದಲು ಪ್ರತಿ ಹೆಕ್ಟೇರಿಗೆ 3 ಟನ್ ಕೊಟ್ಟಿಗೆ ಗೊಬ್ಬರ ಹಾಗೂ 2 ಟನ್ ಸಸ್ಯಾವಶೇಷಗಳನ್ನು ಮಣ್ಣಿನಲ್ಲಿ ಬೆರೆಸಿ ಬಿತ್ತುವದಕ್ಕೆ ಮೊದಲು 1 ಟ ನ್ ಎರೆಹುಳು ಗೊಬ್ಬರವನ್ನು ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರದೊಡನೆ ಮಣ್ಣಿಗೆ ಸೇರಿಸಿ ಬಿತ್ತನೆ ಮಾಡುವದರಿಂದ ಬೆಳೆಯ ಇಳುವರಿಯನ್ನು ಹೆಚ್ಚಿಸಬಹುದು.
ರಾಸಾಯನಿಕ ಗೊಬ್ಬರಗಳು
ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣ
ಪ್ರದೇಶ ಶಿಫಾರಸು ಮಾಡಿದ ಪೋಷಕಾಂಶಗಳ
1. ಮಳೆಯಾಶ್ರಿತ ತಳಿ ಸಾರಜನಕ ರಂಜಕ ಪೋಟ್ಯಾಷ್
ಅ. ಮಳೆಯಾಶ್ರಿತ ಖುಷ್ಕಿ ಪ್ರದೇಶ 30 15 15
(ವಲಯ 2,3)
ಆ. ಅರೆಮಲೆನಾಡು ಪ್ರದೇಶ (ವಲಯ 8) 40 25 25
2. ಮಳೆಯಾಶ್ರಿತ ಹೈಬ್ರಿಡ್
ಅ. ಮಲೆನಾಡು ಪ್ರದೇಶ (ವಲಯ 9) 100 100 100
ಆ. ಅರೆಮಲೆನಾಡು ಪ್ರದೇಶ (ವಲಯ 8) 80 40 40
3. ನೀರಾವರಿ ಹತ್ತಿ
ಅ. ಹೈಬ್ರಿಡ್ :ವಿಜಾತಿ 150 75 75
ಸಜಾತಿ 120 60 60
ಆ. ತಳಿಗಳು 80 40 40
4. ಬೇಸಿಗೆಯ ಹತ್ತಿ
ಅ. ತಳಿಗಳು 80 40 40
ಆ. ಹೈಬ್ರಿಡ್ (ಸಜಾತಿ) 120 60 60
- Login to post comments
- 3207 reads