ಸಾವಯವ ತರಕಾರಿ ಬೀಜೋತ್ಪಾದನಾ ತಂತ್ರಜ್ಞಾನ
ರಾಕೇಶ್. ಚ. ಮಠದ
ಸಹಾಯಕ ಪ್ರಾಧ್ಯಾಪಕರು-ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಬೀಜ ಘಟಕ, ಕೃ.ವಿ.ವಿ., ರಾಯಚೂರು
ಭಾರತ ತರಕಾರಿ ಉತ್ಪಾದನೆಯಲ್ಲಿ ವಿಶ್ವದ ಎರಡನೆ ಅತಿದೊಡ್ಡ ರಾಷ್ಟ್ರವಾಗಿದ್ದು ಈ ಸಾದನೆ ಉತ್ತಮ ಬೀಜದಿಂದ ಮತ್ತು ಬೀಜೋತ್ಪಾದನೆಯಿಂದ ಮಾತ್ರ ಸಾದ್ಯವಾಗಿದೆ. ಭಾರತ ಅದರಲ್ಲು ದಕ್ಷಿಣ ಭಾರತದಲ್ಲಿ ಕರ್ನಾಟಕ ತರಕಾರಿ ಬೀಜೋತ್ಪಾದನೆಗೆ ಎಷಿಯಾ ಖಂಡದಲ್ಲಿಯೇ ಪ್ರಸಿದ್ಧವಾಗಿದೆ. ಸಮತಿತೋಷ್ಣ ವಲಯದ ತರಕಾರಿಗಳಾದ ಮೆಣಸಿನಕಾಯಿ, ಬದನೆ, ಟೊಮ್ಯಾಟೋ, ಕಲ್ಲಂಗಡಿ, ಹಾಗಲಕಾಯಿ, ಸೋರೇಕಾಯಿ, ಕುಂಬಳ, ಬೆಂಡಿ, ಸವತೆಕಾಯಿ, ಹಿರೇಕಾಯಿ ಮುಂತಾದ ತರಕಾರಿಗಳನ್ನು ಇಲ್ಲ ಬೆಳೆಯಲಾಗುತ್ತದೆ. ಈ ತರಕಾರಿಗಳ ಬೀಜಗಳನ್ನು ರಾಸಾಯನಿಕ ಪದ್ಧತಿಯಲ್ಲಿ ಬೆಳೆಯಲಾಗುತ್ತಿದ್ದು ಭಾರತದಿಂದ 40% ರಷ್ಟು ಬೀಜಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತದೆ. ಭಾರತವನ್ನೊಳಗೊಂಡು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರಕ್ಕಾಗಿ ಅತಿಹೆಚ್ಚು ಗಮನಕೊಡಲಾಗುತ್ತಿದೆ. ಸಾವಯವ ಆಹಾರೊತ್ಪಾದನೆಗೆ ಸಾವಯವವಾಗಿ ಉತ್ಪಾದಿಸಿದ ಬೀಜ ಬಹುಮುಖ್ಯವಾಗಿದೆ. ರಾಸಾಯನಿಕ ರಹಿತವಾಗಿ ಉತ್ತಮ, ಸದೃಡ, ಮತ್ತು ಆರೋಗ್ಯಕರ ಬೀಜೋತ್ಪಾದನೆ ಮಾಡಬಹುದು. ಈ ರೀತ ಬೆಳೆದ ಬೀಜಗಳನ್ನು ರೈತರು ಪ್ರತಿ ವರ್ಷ ಉಳಿಸಿಕೊಂಡು ಹೋಲಗಳಲ್ಲಿ, ಹಿತ್ತಲಗಳಲ್ಲಿ ಬೆಳೆಯಬಹುದು. ಇತ್ತಿಚಿಗೆ ಮಾಳಿಗೆಯ ಮೇಲೆಯೂ ತರಕಾರಿಗಳನ್ನು ಬೆಳೆಯಬಹುದು ಸಾವಯವ ಬೀಜೋತ್ಪಾದನೆಯಲ್ಲಿ ಅನೇಕ ಹಂತಗಳಲ್ಲಿ ಕೆಲ ಸರಳ ತಂತ್ರಜ್ಞಾನಗಳನ್ನು ಬಳಸಿ ಬೀಜೋತ್ಪಾದನೆ ಮಾಡಬಹುದು ವಿವಿಧ ಹಂತಗಳಲ್ಲಿ ಸಾವಯವ ತಂತ್ರಜ್ಞಾನ ಈ ಕೆಳಗಿನಂತಿದೆ.
1) ಭೂಮಿ ತಯಾರಿಕಾ ಹಂತ:ಈ ಹಂತದಲ್ಲಿ ಭೂಮಿಯನ್ನು ಬೀಜ-ಬೆಳೆಯನುಸಾರವಾಗಿ ತಯಾರಿಸಬೇಕು ಈ ಹಂತದಲ್ಲಿ ಉತ್ತಮ ರೀತಿಯಲ್ಲಿ ಕೊಳೆತ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಹಸಿರೆಲೆಗೊಬ್ಬರಗಳನ್ನು ಉಪಯೋಗಿಸಬಹುದು. ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಎಕರೆಗೆ 2-3 ಟ್ರಾಕ್ಟರ್ ಲೋಡ ಹಾಕಬೇಕು. ಇದರಿಂದ ಮಣ್ಣಿನ ಶಕ್ತಿ ಹೆಚ್ಚಾಗುತ್ತದೆ. ಈ ಗೊಬ್ಬರ ಬೀಜ ಬೆಳೆಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಬೆಳೆಗೆ ತಕ್ಷಣ ದೊರೆಯಬಹುದಾದ ಸಾರಜನಕ ಇರುತ್ತದೆ. ಉತ್ತಮವಾಗಿ ಕಳೆತಿದ್ದರೆ ಯಾವುದೇ ತರಹದ ಮಣ್ಣಿನಿಂದ ಬರುವ ಕೀಟ ಹಾಗೂ ಶಿಲೀಂದ್ರಗಳು ಕಡಿಮೆ ಪ್ರಮಾನದಲ್ಲಿ ಇರತ್ತವೆ. ಕೊಟ್ಟಿಗೆ ಗೊಬ್ಬರ ಉಪಕಾರಿ ಅಣುಜೀವಿಗಳಾದ ಟ್ರೈಕೊಡರ್ಮಾ, ಸಿಡೋಮೆನಾಸ್ ಬೆಳೆಯ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ. ಹಸಿರೆಲೆಗೊಬ್ಬರ ಬೆಳೆಗಳಾದ ಸೆಣಬು, ಪಿಳಿಪೆಸರು ಮತ್ತು ಡೈಯೆಂಚಾ ಮುಂತಾದವುಗಳನ್ನು ಮಣ್ಣಿನಲ್ಲಿ ಸೇರಿಸುವದಿರಂದ ಉತ್ತಮ ಪೋಷಕಾಂಶಗಳು ದೊರೆಯುತ್ತವೆ. ಎರೆಹುಳು ಗೊಬ್ಬರವನ್ನು ಭೂಮಿ ತಯಾರಿಕೆಗೆ ಹಾಕುವಷ್ಟು ಸಿಗದೇ ಇರಬಹುದು, ಆದ್ದರಿಂದ ಬಿತ್ತನೆಯನಂತರ ಹಾಕುವುದೊಳ್ಳೆಯದು.
2) ಬಿತ್ತನೆಯ ಹಂತದಲ್ಲಿ:ಬಿತ್ತನೆಯ ಹಂತದಲ್ಲಿ ಕಲ್ಲಂಗಡಿ, ಸವತೆ, ಸೋತೆಕಾಯಿ, ಕುಂಬಳ ಮುಂತಾದವುಗಳಲ್ಲಿ ಬೀಜದಲ್ಲಿ ಸಕ್ಕರೆ ಮತ್ತು ಪ್ರೊಟೀನಿನ ಅಂಶ ಹೆಚ್ಚಾಗಿರುವುದರಿಂದ ಇಲಿ ಮತ್ತು ಮಿಡತೆಗಳ ಹಾವಳಿಯಿಂದ ಬೀಜನಷ್ಟವಾಗುವ ಸಾದ್ಯತೆಇರುತ್ತದೆ. ಈ ಸಂದರ್ಬದಲ್ಲಿ ಈ ಬೀಜಗಳನ್ನು ಬಿತ್ತನೆಮಾಡುವಾಗ ದಪ್ಪ ಪೇಪರಿನಲ್ಲಿ ಮಾಡಿದ ಚಹಾಕಪ್ಪುಗಳನ್ನು - ಬೀಜ ಬಿತ್ತನೆ ಮಾಡಿ ಅವುಗಳ ಮೇಲೆ ಹಾಕಿ ಮುಚ್ಚಬೇಕು. ಬೀಜ ಮೊಳಕೆಯೊಡೆದ ನಂತರ ಕಪ್ಪುಗಳನ್ನು ತೆಗೆದರಾಯಿತು. ಬೀಜಮೊಳಕೆಯಾದ ನಂತರ ಇಲಿ ಮತ್ತಿತರ ಕೀಟಗಳಿಂದಾದ ಉಪಟಳ ಕಡಿಮೆ ಚಹಾಕಪ್ಪುಗಳ ಬದಲಿಗೆ ತೆಂಗಿನ ಒಣಗಿದ ಬೆಪ್ಪುಗಳನ್ನೂ ಬಳಸಬಹುದು. ಬಿತ್ತನೆಯ ಮುಂಚೆ ಬೀಜಗಳಿಗೆ ಸಾವಯವ ಬೀಜೋಪಚಾರವನ್ನು ಕೂಡ ಮಾಡಬಹುದು. ತರಕಾರಿ ಬೀಜಗಳನ್ನು ಶೇ. 10 ರಷ್ಟು ಶಕ್ತಿಯಿರುವ ಬೇವಿನೇಣ್ಣೆ ಉಪಯೋಗಿಸಿದಾಗ ಸಸಿಕೊಳೆರೋಗ, ಬೀಜಕ್ಕೆ ಬರುವ ಮಣ್ಣಿನ ರೋಗಗಳನ್ನು ತಡೆಯಬಹುದು. ಬೀಜಗಳಿಗೆ ಗಜ್ಜರಿ ಬೇಜದೆಣ್ಣೆ, ಲವಂಗದ ಎಣ್ಣೆ, ನಿಂಬೆಹಣ್ಣಿನ ತೊಗಟೆಯ ಎಣ್ಣೆ, ಬೆಳ್ಳುಳ್ಳಿ ಎಣ್ಣೆ ಮತ್ತು ಸೊಯಾಬಿನ ಎಣ್ಣೆಗಳನ್ನು ಉಪಯೋಗಿಸಬಹುದು. ಬೀಜ ಸಸಿಮಡಿಗಳನ್ನು ಮಾಡಿದರೆ ಸಸಿಗಳನ್ನು ಹಚ್ಚುವ ಮೊದಲು ಟ್ರೆಕೋಡರ್ಮಾದ ದ್ರಾವಣದಲ್ಲಿ ಎದ್ದಿ ಹಚ್ಚಿದರೆ ಸಸಿಗಳ ಕೊಳೆರೋಗದಿಂದ - ಸಾಯುವುದನ್ನು ತಡೆಯಬಹುದು. ಬೀಜೋಪಚಾರಕ್ಕೆ ಟ್ರೈಕೊಡರ್ಮಾ ಜೀವಾಣುವನ್ನು 4 ಗ್ರಾಮ/ಕೆ.ಜಿ. ಪ್ರಮಾಣದಲ್ಲಿ ಉಪಯೋಗಿಸಬಹುದು.
3) ಸಸಿಗಳ ಬೆಳವಣಿಗೆ ಹಂತ:ಈ ಹಂತದಲಿ ಸಸಿಗಳಿಗೆ ಉತ್ತಮ ಪೋಷಕಾಂಶಗಳು ದೊರೆಯುವುದು ಅವಶ್ಯಕ. ಸಸಿಗಳು ಸದೃಡವಾದ ಗಿಡಗಳಾಗಿ ಪರಿವರ್ತಿಸಲು ಎರೆಹುಳುಗೊಬ್ಬರ, ಕೋಳಿಗೊಬ್ಬರ, ಕುರಿಗೊಬ್ಬರ, ಮೀನಿನಗೊಬ್ಬರ, ಹಂದಿಗೊಬ್ಬರ ಮುಂತಾದವುಗಳನ್ನು ಹಾಕಬೇಕು. ಈ ಹಂತದಲ್ಲಿ ಗಿಡಗಳು ಸದೃಡವಾದರೆ ಉತ್ತಮ ರೀತಿಯಲ್ಲಿ ಹೂಬಿಡುವಿಕೆ ಮತ್ತು ಬೀಜ ಕಟ್ಟುವಿಕೆ ಸಾದ್ಯಯವಾಗುತ್ತದೆ. ಮಣ್ಣಿನಿಂದ ಬರಬಹುದಾದ ಕೀಟ ಹಾಗೂ ರೋಗಗಳನ್ನು ತಪ್ಪಿಸಲು ಗಿಡಗಳ ಕೆಳಗಿನ ಎಲೆಗಳನ್ನು ತೆಗೆದುಹಾಕಬೇಕು. ಈ ಎಲೆಗಳು ಮಣ್ಣಿನ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು ಗಿಡಗಳ ಕೆಳಗಿನ ಎಲೆಗಳ ಜೊತೆಗೆ ಉತ್ತಮವಾಗಿರುವ ಕೇವಲ ಎರಡು ಟೊಂಗೆಗಳನ್ನು ಬಿಟ್ಟು ದಾರದಿಂದ ಕಟ್ಟುವುದೊಳ್ಳೆಯದು. ಬಳ್ಳಿಯ ತರಕಾರಿಗಳಾದ ಕಲ್ಲಂಗಡಿ, ಹಿರೇಕಾಯಿ, ಸವತೆ ಮುಂತಾದವುಗಳಲ್ಲಿ ಕೇವಲ ಎರಡು ಮುಖ್ಯ ಬಳ್ಳಿ ಅಥವಾ ಟೊಂಗೆಗಳನ್ನು ಬಿಟ್ಟು ಮಿಕ್ಕಿದವುಗಳನ್ನು ತೆಗೆದು ಹಾಕಬೇಕು. ಇದರಿಂದ ಕಡಿಮೆ ಸಂಖ್ಯೆಯಲ್ಲಿ ಸದೃಡವಾದ ಕಾಯಿಗಳಲ್ಲಿ ಉತ್ತಮ ಬೀಜಗಳು ಕಟ್ಟುತ್ತವೆ. ಸಸಿಗಳ ಗುಂಡಿಗಳಲಿ ಸೆಗಣಿಯ ದ್ರಾವಣವನ್ನು ಪ್ರತಿವಾರಕ್ಕೊಮ್ಮೆ ನೀರಿನೊಡನೆ ಹಾಕಬೇಕು. ಈ ಗುಂಡಿಗಳ ಮೇಲೆ ತೆಂಗಿನನಾರು ಅಥವಾ ಒಣಗಿದ ಎಲೆಗಳನ್ನು ಹಾಕಿದಲ್ಲಿ ಉತ್ತಮ ನೀರಿನ ನಿರ್ವಹಣೆಯನ್ನೂ ಮಾಡಬಹುದು.
4) ಗಿಡಗಳು ಹೂ ಬಿಡುವ ಮತ್ತು ಬೀಜಕಟ್ಟುವ ಹಂತ:ಹೂಬಿಡುವ ಮತ್ತು ಬೀಜಕಟ್ಟುವ ಹಂತ ಅತಿ ಮುಖ್ಯವಾಗಿದ್ದು - ಬೀಜದ ಇಳುವರಿ ಮತ್ತು ಗುಣಮಟ್ಟ ನಿರ್ದಾರಿತವಾಗುತ್ತದೆ. ಇಲ್ಲಿ ಪೋಷಕಾಂಶಗಳ ನಿರ್ವಹಣೆಗೆ ಸಸಿಗಳ ಗುಂಡಿಗಳಿಗೆ ವರ್ಮಿವಾಷ್, ಆಕಳ ಸೆಗಣಿ ಮತ್ತು ಗೋಮೂತ್ರದ ಮಿಶ್ರಣ, ಪಂಚಗವ್ಯ, ಬೂದಿಗಳನ್ನು ನೀರಿನೊಡನೆ ಗಿಡಗಳಿಗೆ ಹಾಕಬೇಕು. ಈ ಹಂತದಲ್ಲಿ ರೋಗ ಹಾಗೂ ಕೀಟಗಳ ನಿಯಂತ್ರಣ ಅವಶ್ಯಕವಿರುತ್ತದೆ. ಈ ಕೀಟ ಹಾಗೂ ರೋಗಗಳನ್ನು ಈ ಕೆಳಗಿನಂತೆ ನಿಯಂತ್ರಿಸಬಹುದು.
i. ಮೆಣಸಿನಕಾಯಿ, ಟೊಮ್ಯಾಟೋ, ಬೆಂಡಿ ಮುಂತಾದವುಗಳಲ್ಲಿ ಕಾಯಿಕೊರಕ ಹುಳುವಿನ ಹತೋಟಿ ಅತಿಹೆಚ್ಚು ಮುಖ್ಯವಾಗಿದೆ. ಈ ಹುಳುವಿನ ಹತೋಟಿಗೆ ಟೈಕೋಡರ್ಮಾ ಜೀವಾಣು (1.5 ಲಕ್ಷ ಜೀವಾಣು ಪ್ರತಿ ಎಕರೆಗೆ)ಗಳನ್ನು ಉಪಯೋಗಿಸಬಹುದು. ಇದರ ಜೊತೆಗೆ ಎನ್.ಪಿ.ವಿ. ನಂಜಾಣು 250ಎಲ್.ಇ/ಎಕರೆಗೆ ಬಳಿಸಬಹುದು.
ii. ಬದನೆ ಮತ್ತು ಬೆಂಡಿಯಲ್ಲಿ ಬದನೆ ಕುಡಿ ಮತ್ತು ಕಾಯಿಕೊರೆಕ ಅತಿಮುಖ್ಯ ಕೀಟವಾಗಿದ್ದು ಅತಿಹೆಚ್ಚು ಬಾಧೆ ತರುವಂತಾಗಿದ್ದು. ಇದನ್ನು ಮೋಹಕ ಬೆಲೆಗಳನ್ನು ಎಕರೆಗೆ 2 ರಿಂದ 4 ಗೊಂದರಂತೆ ಹಾಕಬೇಕು.
iii. ಬಿಳಿನೊಣಗಳನ್ನು ನಿಯಂತ್ರಿಸಲು ಅಂಟು ಬಲೆಗಳನ್ನು ಎಕರೆಗೆ 10 ರಂತೆ ಹಾಕಬೇಕು.
iv. ಕಾಯಿ ಅಥವಾ ಹಣ್ಣು ನೋಣಗಳನ್ನು ನಿಯಂತ್ರಸಲು ಕೂಡ ಬಲೆಗಳನ್ನು ಇಡಬಹುದು.
v. ಸ್ಪೊಡೋಪ್ಟರಾ ಕಾಯಿಕೊರಕವನ್ನು ನಿಯಂತ್ರಿಸಲು ಬಲೆ-ಬೆಳೆಗಲಾದ ಔಡಲ ಗಿಡಗಳನ್ನು ಪ್ರತಿ ಎಕರೆಗೆ 50 ರಂತೆ ಬಿತ್ತಬೇಕು ಭೂಮಿಗೆ ನೀರು ಹಾಯಿಸಿದಾಗ ಮರಿಹುಳಗಳು ಹೊರಬರುತ್ತವೆ.
vi. ಸಸ್ಯ ಹೇನಿ/ಥ್ರೀಪ್ಸ ಬಾದೆ, ಎಲೆಚುಕ್ಕಿರೋಗ, ಕಂದುರೋಗಗಳ, ದುಂಡಾಣು ಸೊರಗುರೋಗಗಳ ನಿಂತ್ರಣಕ್ಕೆ ಬೆಳ್ಳುಳ್ಳಿ ಗಡ್ಡೆಯ ಸಾರ ಮತ್ತು ಬೇವಿನ ಸಾರದ ಸಿಂಪರಣೆ ಮಾಡಬಹುದು.
vii. ದುಂಡಾಣು ಸೊರಗುರೋಗದ ನಿಯಂತ್ರಣಕ್ಕೆ ಪರ್ಯಾಯ ಬೆಳೆಯಾಗಿ ಗೋವಿನಜೋಳ ಬೆಳೆದರೆ ಈ ರೋಗವನ್ನು ನಿಯಂತ್ರಿಸಬಹದುದು.
viii. ಬೇರು ಗಂಟಿನ ಜಂತು ರೋಗದ ನಿಯಂತ್ರಣಕ್ಕೆ ಗಿಡಗಳನ್ನು ಕಿತ್ತು ನೋಡಬೇಕು. ಸಣ್ಣ ಮತ್ತು ದಪ್ಪನೆಯ ಗಂಟುಗಳಾಗಿದ್ದಲ್ಲಿ ಅಂತರಹ ಗಿಡಗಳನ್ನು ಕಿತ್ತೊಗೆಯಬೇಕು. ಬಿತ್ತನೆಯ ಮುಂಚೆ ಭೂಮಿಯನ್ನು ಆಳವಾಗಿ ಉಳುಮೆಮಾಡಿ ಮಣ್ಣನ್ನು ಬಿಸಿಲಿಗೆ ಒಡ್ಡುವದರಿಂದ ಜಂತುಹುಳುವಿನ ಮೊಟ್ಟ ಮತ್ತು ಮರಿಜಂತುಗಳನ್ನು ಸಾಯಿಸಬಹುದು. ಸಸಿಗಳನ್ನು ನಾಟಿ ಮಾಡುವ 2-3 ವಾರಗಳ ಮುಂಚಿತವಾಗಿ ಎಕರೆಗೆ 2-3 ಕ್ವಿಂಟಾಲ್ ಬೇವಿನ ಹಿಂಡಿಯನ್ನು ಹಾಕಿದರೆ ಒಳ್ಳೆಯದು.
ix. ಟೊಮ್ಯಾಟೋ, ಬದನೆ ಮೆಣಸಿನಕಾಯಿಯಲ್ಲಿ ಎಲೆ ಮುದುಡು ನಂಜುರೋಗ ತೆಡೆಗೆ ಸಸಿ ಮಡಿಗೆ ನೈಲಾನ್ ನೆಟ್ ಬಳಸಿ ರೋಗ ವಾಹಕಗಳಾದ ಬಿಳಿನೊಣಗಳನ್ನು ನಿಯಂತ್ರಿಸಬಹುದು.
x. ಬೆಂಡಿಯ ಹಳದಿ ನಂಜುರೋಗ ಮತ್ತು ಬಳ್ಳಿಯ ತರಕಾರಿಗಳಲ್ಲಿ ಬರುವ ಬೂದಿರೋಗಗಳನ್ನು ನಿಯಂತ್ರಸಲು ಅವುಗಳನ್ನು ಕಿತ್ತುಹಾಕಿ ಬೇವಿನೆಣ್ಣೆಯ ಸಿಂಪರಣೆ ಮಾಡಬಹುದು.
xi. ಕೆಲವು ಸಸ್ಯಗಳಾದ ತುರಕಬೇವು, ಹೊಂಗೆ, ಕಿತ್ತಾಳೆಗಿಡ, ತಂಬಾಕು ಮುಂತಾದವುಗಳಿಂದ ಸಾರ ಅಥವಾ ಎಣ್ಣೆಯ ಮಿಶ್ರಣವನ್ನು ಸಿಂಪರಣೆ ಮಾಡಿ ಮುಖ್ಯವಾದ ಕೀಟ ಅಥವಾ ರೋಗಗಳನ್ನು ನಿಯಂತ್ರಿಸಬಹುದು.
ಕೀಟ ನಿಯಂತ್ರಣ ಜೊತೆಗೆ ಬೀಜ ಬೆಳೆಯಲ್ಲಿ ಉತ್ತಮವಾದ ಹೂವುಗಳನ್ನು ಬಿಟ್ಟರೆ ಅವು ಮುಂದೆ ಉತ್ತಮ ಬೀಜೋತ್ಪಾದನೆಗೆ ಸಹಾಯಕಾರಿ. ಬೀಜೋತ್ಪಾದನೆಯಲ್ಲಿ ಕೆಲಸಮಯಗಳಲ್ಲಿ ಬೀಜ ಬೆಳೆಗಳಲ್ಲಿ ಹೂವುಗಳ ಪ್ರಮಾಣ ಕಡಿಮೆಯಾಗಬಹುದು. ಅಥವಾ ರೋಗ ಮತ್ತಿತರ ಕಾರಣಗಳಿಂದ ಹೂಗಳು ಉದುರಬಹುದು. ಹೂ ಬುಡುವುದು ಶಾಖ ಮತ್ತು ಬೆಳೆಕಿನ ಮೇಲೆ ಅವಲಂಬಿತವಾಗಿದೆ. ಆದಾಗ್ಯೂ ಕೆಲ ಸಾವಯವ ವಸ್ತುಗಳನ್ನು ಸಿಂಪರಣೆ ಅಥವಾ ಗೊಬ್ಬರ ಮೂಲಕ ಗಿಡಗಳಿಗೆ ಹಾಕುವದರಿಂದ ಹೂಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಪಂಚಗವ್ಯ ಅಥವಾ ವರ್ಮಿವಾಷ್ ಮುಂತಾದವುಗಳನ್ನು ಶೇ. 3. ರ ಪ್ರಮಾಣದಲ್ಲ ಹೂಬಿಡುವ 15 ದಿವಸಗಳ ಮೊದಲು ಸಿಂಪರಣೆ ಮಾಡಬೇಕು. ಉಪಕಾರಿ ಸೂಕ್ಷ್ಮಾಣುಗಳು ಇ.ಎಮ್.-ದ್ರಾವಣವನ್ನು ಕೂಡ ಸಿಂಪರಣೆ ಮಾಡಬಹುದು.
5. ಬೀಜ ಮಾಗುವಿಕೆ ಹಂತ: ಈ ಹಂತದಲ್ಲಿ ಮೇಲೆ ತಿಳಿಸಿದ ಆಕಳ ಸೆಗಣೆಯ ಮಿಶ್ರಣ, ವರ್ಮಿವಾಷ್ ಮುಂತಾದವುಗಳನ್ನು ಹಾಕಬೇಕು. ಈ ಹಂತದಲ್ಲಿ ಹಣ್ಣುಗಳನ್ನು ಪರೀಕ್ಷಿಸಿ ಉತ್ತಮವಾದ ಹಣ್ಣುಗಳನ್ನು ಇಡಬೇಕು ಸಿರಯಾಗಿ ಬೆಳೆಯದ ಮತ್ತು ರೋಗದ ಹಣ್ಣುಗಳನ್ನು ತೆಗೆದುಹಾಕಬೇಕು. ಸದೃಡ ಬೆಳೆಗಳಲ್ಲಿ ಇಡಬಹುದಾದ ಗರಿಷ್ಟ ಸಂಖ್ಯೆಯ ಕಾಯಿಗಳನ್ನು ಈ ಕೆಳಗಿನ ಕೊಷ್ಠಕ ದಲ್ಲಿ ಕೊಡಲಾಗಿದೆ.
ಬೆಳೆ ಗರಿಷ್ಠಸಂಖ್ಯೆಯಕಾಯಿಗಳು (ಪ್ರತಿಗಿಡ/ಬಳ್ಳಿಗೆ)
ಕಲ್ಲಂಗಡಿ 01
ಸವತೆಕಾಯಿ - 2-3
ಹಾಗಲಕಾಯಿ - 6-8
ಸೋರೇಕಾಯಿ - 2-4
ಹಿರೇಕಾಯಿ - 1
ದೊಡ್ಡಮೆಣಸಿನಕಾಯಿ - 4-10
ಮೆಣಸಿನಕಾಯಿ - 40-50
ಟೊಮ್ಯಾಟೋ - 15-25
ಬೆಂಡಿ - 10-15
ಬದನೆ - 15-20
6. ಬೀಜ ತೆಗೆಯುವ ಮತ್ತು ಶೇಖರಣೆಯ ಹಂತ: ಈ ಹಂತದಲ್ಲಿ ಕಾಯಿಗಳು ಹಣ್ಣುಗಳಾಗಿ ಮಾಗಿದಾಗ ಬೀಜ ತೆಗೆಯುವಾಗ ಕೆಲ ತತ್ವಗಳನ್ನು ಅನುಸರಿಸಿ ಉತ್ತಮ ಹಾಗೂ ಸದೃಡ ಬೀಜಗಳನ್ನು ಪಡೆಯಬಹುದು. ಬಳ್ಳಿತರಕಾರಿಗಳ ಹಣ್ಣುಗಳಿಗೆ (ಉದಾ: ಕಲ್ಲಂಗಡಿ) ಸುಣ್ಣದ ಲೇಪನೆ ಮಾಡಿದರೆ ಸದೃಡ ಬೀಜಗಳನ್ನು ಪಡೆಯಬಹುದು. ಬೀಜ ತೆಗೆದನಂತರ ಹನ್ಣಿನ ಸಾರದ ಜೊತೆಗೆ ಕನಿಷ್ಠ 12-24 ಗಂಟೆಗಳ ಕಾಲ ಕೊಳೆಸಬೇಕು. ಇದರಿಂದ ಬೀಜ ಜನ್ಯ ರೋಗಗಳನ್ನು ನಿಯಂತ್ರಿಸಬಹುದು. ಇಲ್ಲಿ ಹಣ್ಣುಗಳನ್ನು ಬಡೆದು ನೀರನನು ಮುಟ್ಟಿಸದೇ ಹಾಗೆಯೇ ಗುಂಟೆಗಳಲ್ಲಿ ಬಿಡಬೇಕು. ಮರುದಿವಸ ಹಣ್ಣಿನ ಸಾರ ಮತ್ತು ಬೀಜ ಬೇರೆ ಬೇರೆ ಯಾಗುತ್ತವೆ. ನಂತರ ಭೂಮಿಯಿಂದ ಎತ್ತರದಲ್ಲಿ ಕಟ್ಟಿದ ನೈಲಾನ್ ನೆಟ್ನಲ್ಲಿ ಬೀಜಗಳನ್ನು ಒಣಗಿಸಬೇಕು. ಬೀಜಗಳನ್ನು ಆದಷ್ಟು ನೆರೆಳಿನಲಿ ಒಣಗಿಸಬೇಕು. ಇದರಿಂದ ಬೀಜ ಮೊಳಕೆ ಉತ್ತಮವಾಗಿರುತ್ತದೆ.
ಬೀಜಗಳನ್ನು ಒಣಗಿಸಿದ ನಂತರ ಮುಂದಿನ ವರ್ಷಕ್ಕೆ ಬಿತ್ತನೆಗೆ ಉಪಯೋಗಿಸಲು ಶೇಖರಣೆ ಅಗತ್ಯ. ಒಂದು ವರ್ಷದ ವರೆಗೆ ಬೀಜಗಳನ್ನು ಬಜೆ ಅಥವಾಶುಂಠಿಯ, ಬೇವಿನೆಲೆಯ ಪುಡಿ, ಸಿತಾಫಲದ ಬೀಜದ ಪುಡಿಗಳ ಗೊತೆಗೆ ಮಿಶ್ರಣ ಮಾಡಿ ಇಟ್ಟರೆ ಬಹಾಳದಿರಸದವರೆಗೆ ಇಡಬಹುದು. ಎರಡನೆ ಮತ್ತು ಮೂರನೆ ವರ್ಷದ ನಂತರ ಬೀಜಗಳನ್ನು ಮತ್ತೆ ಬಿತ್ತಿ ಹೆಚ್ಚಿಸುವುದು ಅವಶ್ಯ. ಬೀಜ ಬ್ಯಾಂಕ ಅಥವಾ ಬೀಜ ವಿನಿಮಯ ಕೂಡ ಉತ್ತಮ ವಿಧಾನ.
- Rakesh C Mathad's blog
- Login to post comments
- 3821 reads