Skip to main content

Please note that this site in no longer active. You can browse through the contents.

ಸಂಕರಣ ಸೂರ್ಯಕಾಂತಿ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಸುಧಾರಿತ ಕ್ರಮಗಳು

ಸಂಕರಣ  ಸೂರ್ಯಕಾಂತಿ  ಬೀಜೋತ್ಪಾದನೆಯಲ್ಲಿ  ಅನುಸರಿಸಬೇಕಾದ  ಸುಧಾರಿತ  ಕ್ರಮಗಳು

  • ಚೆನ್ನಾಗಿ ನೀರು ಬಸಿದು ಹೋಗುವ ಭೂಮಿ ಬೀಜೋತ್ಪಾದನೆಗೆ ಉತ್ತಮ ಮತ್ತು  ಬೀಜೋತ್ಪಾದನೆಯನ್ನು ಹಿಂದಿನ ಬೆಳೆಯು ಸೂರ್ಯಕಾಂತಿ ಬೆಳೆದ ಭೂಮಿಯಲ್ಲಿ ತೆಗೆದುಕೊಳ್ಳಬಾರದು.
  • ಸೂರ್ಯಕಾಂತಿ ತಾಕುಗಳಿಂದ ಇರಬೇಕಾದ ಕನಿಷ್ಠ ಅಂತರ ಸೂರ್ಯಕಾಂತಿ  ಬೆಳೆಯು ಪರಕೀಯ ಪರಾಗಸ್ಪರ್ಷ ಬೆಳೆಯಾಗಿದ್ದು, ಹೆಚ್ಚಾಗಿ ಜೇನು ಹುಳುಗಳಿಂದ ಸುಮಾರು 1000 ಮೀಟರ್‌ ವರೆಗೆ ಹೊವಿನ ಪರಾಗ ರೇಣುಗಳು ಜೇನು ಹುಳುಗಳ  ಮುಖಾಂತರ ಚಲಿಸಿ ಬೀಜೋತ್ಪಾದನೆ ಕ್ಷೇತ್ರದ ತಳಿಶುದ್ಧತೆ ಹಾಳಾಗುವ ಸಾಧ್ಯತೆಯಿದೆ,  ಆದ್ದರಿಂದ ಬೀಜೋತ್ಪಾದನಾ ಕ್ಷೇತ್ರಕ್ಕೂ ಹಾಗೂ ಬೇರೆ ಸೂರ್ಯಕಾಂತಿ ತಳಿಯ ಮಧ್ಯೆ  ಅದು ತಳಿವರ್ಧಕ ಬೀಜೋತ್ಪಾದನೆಯಾಗಿದ್ದಲ್ಲಿ ಕನಿಷ್ಠ 1000 ಮೀಟರ್‌ ಮೂಲ  ಬೀಜೋತ್ಪಾದನೆಯಲ್ಲಿ ಕನಿಷ್ಠ 600 ಮೀಟರ್‌ ಮತ್ತು ಪ್ರಮಾಣಿತ ಬೀಜೋತ್ಪಾದನೆಯಲ್ಲಿ  400 ಮೀಟರ್‌ ಪ್ರತ್ಯೇಕತಾ ಅಂತರವಿರಬೇಕು.
  • ಅಧಿಕೃತ ಬೀಜೋತ್ಪಾದಕರು ವಿತರಸಿದ ಮೂಲ ಬೀಜವನ್ನು ಮಾತ್ರ ಬೀಜೋತ್ಪಾದನೆಗೆ ಬಳಸಬೇಕು.
  • ಬೀಜ ಬಿತ್ತುವ್ರದಕ್ಕೆ ಮೊದಲ ಒಂದು ಕಿ.ಗ್ರಾಂ. ಬೀಜಕ್ಕೆ ಇಮಿಡಾಕ್ಲೋಪ್ರಿಡ್‌  ಕೀಟನಾಶಕದಿಂದ (5 ಗ್ರಾಂ/ಕಿ.ಗ್ರಾಂ ಬೀಜಕ್ಕೆ) ಬೀಜೋಪಚಾರ ಮಾಡಬೇಕು.
  • ಹೆಣ್ಣು ಮತ್ತು ಗಂಡಿನ ಸಾಲಿನ ಪ್ರಮಾಣ ಅನುಕ್ರಮವಾಗಿ 3:1 ರಷ್ಟು ಇರುವಂತೆ 15 ಹೆಣ್ಣು ಸಾಲುಗಳಿಗೆ 5 ಗಂಡು ಇರುವಂತೆ ಬ್ಲಾಕ್‌ ವಿಧಾನದಲ್ಲಿ ಬಿತ್ತುವ್ರದು ಸೂಕ್ತ.
  • ಸಂಕರಣ ಆರ್‌ ಎಸ್‌.ಎಫ್‌.ಹೆಚ್‌-130 ಬೀಜೋತ್ಪಾದನೆಯಲ್ಲಿ ಎಲ್ಲಾ ಹೆಣ್ಣು ಬೀಜವನ್ನು ಗಂಡು ಸಾಲುಗಳನ್ನು ಬಿತ್ತುವ 5-6 ದಿನಗಳ ಮುಂಚೆ ಬಿತ್ತನೆ ಮಾಡಬೇಕು.
  • ಆದರೆ ಹಿಂಗಾರು/ಬೇಸಿಗೆಯಲ್ಲಿ ಬೀಜದ ಗುಣಮಟ್ಟವ್ರ ಚೆನ್ನಾಗಿರುತ್ತದೆ. ಮುಂಗಾರಿನಲ್ಲಿ ಬೀಜೋತ್ಪಾದನೆ ಕೈಗೊಂಡಲ್ಲಿ ಹೂ ಬಿಡುವ ಹಂತವ್ರ ಮಳೆಗೆ ಸಿಗದಂತೆ ಬಿತ್ತನೆ ಸಮಯವನ್ನು ಹೊಂದಿಸಿಕೊಳ್ಳಬೇಕು.
  • ಭೂಮಿಯನ್ನು ಹದ ಮಾಡಿದ ನಂತರ ಅರ್ಧಭಾಗ ಸಾರಜನಕ, (31 ಕಿ.ಗ್ರಾಂ/ಹೇಕ್ಟರ್‌) ಪೂರ್ತಿ ರಂಜಕ (62.5 ಕಿ.ಗ್ರಾಂ/ಹೇಕ್ಟರ) ಹಾಗೂ ಪೂರ್ತಿ ಪೊಟ್ಯಾಷ್‌ (62.5 ಕಿ.ಗ್ರಾಂ/ಹೇಕ್ಟರ್‌) ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು ಮತ್ತು ಪೂರ್ತಿ ಜಿಪ್ಸಂ  (100 ಕಿ.ಗ್ರಾಂ/ಹೇಕ್ಟರ್‌) ಮಣ್ಣಿನಲ್ಲಿ ಬೆರೆಸಿ, ಉಳಿದರ್ಧ ಸಾರಜನಕವನ್ನು (31 ಕಿ.ಗ್ರಾಂ/ಹೆ) ಮೇಲು ಗೊಬ್ಬರವನ್ನಾಗಿ ಬಿತ್ತಿದ 30 ದಿನಗಳ ನಂತರ ನಿಡಬೇಕು.
  • ನಂತರ ಹೆಣ್ಣು ಮತ್ತು ಗಂಡು ಬೀಜವನ್ನು ಸಾಲಿನಿಂದ ಸಾಲಿಗೆ 60 ಸೆಂ.ಮೀ.  ಅಂತರವಿರುವ ಬೋದುಗಳಲ್ಲಿ ಗಿಡದಿಂದ ಗಿಡಕ್ಕೆ 30 ಸೆಂ.ಮೀ. ಅಂತರದಲ್ಲಿ ಕೈಯಿಂದ  ಬೀಜವನ್ನು ಊರಿಸಬೇಕು 3 ಹೆಣ್ಣು ಮತ್ತು 1 ಗಂಡು ಪ್ರಮಾಣದಲ್ಲಿ ಹೆಣ್ಣು ಮತ್ತು ಗಂಡು ಬೀಜಗಳನ್ನು ಬೇರೆ ಬೇರೆಯಾಗಿ ಬ್ಲಾಕ್‌ ವಿಧಾನದಲ್ಲಿ ಬಿತ್ತಬೇಕು.
  •  ಹೆಣ್ಣು ಮತ್ತು ಗಂಡು ಸಾಲುಗಳೆರೆಡರಲ್ಲು ಅನ್ಯ ಜಾತಿಯ ಬೆರೆಕೆ ಗಿಡಗಳು ಹಾಗೂ  ರೋಗ ಪೀಡಿತ ಗಿಡಗಳನ್ನು ಒಂದು ಬಿಡದೆ ಕಿತ್ತು ದೂರ ಹಾಕಬೇಕು. ಹಾಗೆಯೇ ಹೂವಿನ ಹಂತದಲ್ಲಿ ಹೆಣ್ಣು ಸಾಲಿನಲ್ಲಿ ಪರಾಗ ವಿಸರಣೆ ಮಾಡುವ (ಪೊಲನ್‌ ಶೆಡರ್‌)  ಗಿಡಗಳು ಕಂಡು ಬಂದಲ್ಲಿ ಪ್ರತಿ ದಿನವೂ ತಪ್ಪದೇ ಅವ್ರ ಹೂ ಬಿಡುವ ಮೊದಲೇ ಬೇರು  ಸಹಿತ ಕಿತ್ತು ದೂರ ಹಾಕಬೇಕು. ಇತರೇ ಗಿಡಗಳಿಗಿಂತ ಅತೀ ಎತ್ತರ, ಹೆಣ್ಣು ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚು ಹೂವ್ರಳ್ಳ ಗಿಡಗಳಿದ್ದರೆ ಕಿತ್ತು ಹಾಕಬೇಕು.
  • ಹೂವಿನ ಹಂತದಲ್ಲಿ ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಗಂಡು ಸಾಲಿನ ಹೂಗಳಿಂದ ಪರಾಗವನ್ನು ಸಂಗ್ರಹಿಸಿ ಕೈಗೆ ತೆಳುವಾದ ಬಟ್ಟೆಸುತ್ತಿಕೊಂಡು  ಪ್ಲಾಸ್ಟಿಕ್‌ಡಬ್ಬಿಗಳಲ್ಲಿ ಪರಾಗವನ್ನು ಶೇಖರಿಸಿ ನಂತರ ಹೆಣ್ಣು ಹೂವಿನ ಅರಳಿರುವ ಭಾಗದಲ್ಲಿ ಮೃದುವಾಗಿ ಪರಾಗಸ್ಪರ್ಷ ಮಾಡಬೇಕು. ಈ ಕಾರ್ಯವನ್ನು ಸುಮಾರು 10 ರಿಂದ 12 ದಿನಗಳು ಮಾಡಬೇಕು.

                               

                                                  ಪರಾಗ ಸ್ಪರ್ಷ ಮಾಡುತ್ತಿರುವ್ರದು

  • ತೆನೆಯ ಹಿಂಬಾಗ ನಿಂಬೆ ಹಳದಿ ಬಣ್ಣಕ್ಕೆ ತಿರುಗಿರುವಾಗ ಕಟಾವಿಗೆ ಸೂಕ್ತ ಸಮಯ  ಸಂಕರಣ ಬೀಜೋತ್ಪಾದನೆ ಕ್ಷೇತ್ರದಲ್ಲಿ ಮೊದಲು ಗಂಡು ಸಾಲಿನ ತೆನೆಯನ್ನು ಕಟಾವ್ರ ಮಾಡಿದ ನಂತರ ಪ್ರತ್ಯೇಕವಾಗಿ ಹೆಣ್ಣು ಸಾಲಿನ ತೆನೆಗಳನ್ನು ಕಟಾವ್ರ ಮಾಡಬೇಕು ಮತ್ತು ಯಾವೂದೇ ಹಂತದಲ್ಲಿ ಹೆಣ್ಣು ಮತ್ತು ಗಂಡು ಸಾಲಿನ ಬೀಜಗಳು ಬೆರೆಕೆಯಾಗದಂತೆ ಎಚ್ಚರವಹಿಸಬೇಕು.
  • ಬೆಳೆ ಕಟಾವ್ರ ಮಾಡಿದ ಮೇಲೆ ತೆನೆಗಳನ್ನು ಕೈಯಿಂದ ಒಕ್ಕಣೆಯ ಜರಡಿಯ ಮೇಲೆ ತಿಕ್ಕುವ್ರದರಿಂದ ಬೀಜಗಳನ್ನು ಬೇರ್ಪಡಿಸಬಹುದು. ಬೀಜದ ತೇವಾಂಶ ಶೇಕಡಾ 8ರ ವರೆಗೆ ಒಣಗಿಸಿ ಶಿಫಾರಸ್ಸು  ಮಾಡಿದ ಬೀಜ ಸಂಸ್ಕರಣ ಕೇಂದ್ರಕ್ಕೆ ಬೀಜದ ಸಂಸ್ಕರಣೆಗೆ  ಕಳುಹಿಸಿ ಕೊಡಬಹುದು.

  


 

Source:    ಡಾ. ಬಸವೇಗೌಡ   ಮತ್ತು ಶ್ರೀ.ಜಿ.ವೈ.ಲೋಕೇಶ್‌
                ಬೀಜ ಆಧಿಕಾರಿಗಳು  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ, ಭಾರತ ಸರ್ಕಾರ
0
Your rating: None