Skip to main content

Please note that this site in no longer active. You can browse through the contents.

ಶೇಂಗಾ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಸುಧಾರಿತ ಕ್ರಮಗಳು

ಶೇಂಗಾ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಸುಧಾರಿತ ಕ್ರಮಗಳು

  • ಬಿತ್ತನೆಗೆ ಸುಧಾರಿತ ತಳಿಗಳನ್ನು ಉಪಯೋಗಿಸುವ್ರದು.
  • ಮರಳು ಮಿಶ್ರಿತ ಕೆಂಪು ಮಣ್ಣು ಬಹು ಸೂಕ್ತ.
  • ಬೇರೆ ತಳಿಗಳಿಂದ ಕನಿಷ್ಟ ಮೂರು ಮೀಟರ್‌ಗಳ ಪ್ರತ್ಯೇಕತಾ  ಅಂತರ ಕಾಪಾಡಬೇಕು.
  • ಪ್ರತಿ ಹೇಕ್ಟರಿಗೆ 125-150 ಕಿ.ಗ್ರಾಂ ಉತ್ತಮ ಗುಣಮಟ್ಟದ ಬೀಜವನ್ನು ಬಿತ್ತನೆಗೆ ಉಪಯೋಗಿಸಿ.
  • ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬೀಜಕ್ಕೆ 3 ಗ್ರಾಂ ಕಾರ್ಬಡೈಜಿಮ್‌ ಅಥವಾ 4 ಗ್ರಾಂ. ಟ್ರೈಕೋಡರ್ಮ ದಿಂದ ಬೀಜೋಪಚಾರ ಮಾಡಿ ನಂತರ 3 ಗ್ರಾಂ ನಂತೆ ರೈಜೋಬಿಯಂ ಜೀವಾಣುವಿನಿಂದ    ಉಪಚರಿಸಿ ನೇರಳಿನಲ್ಲಿ ಒಣಗಿಸಿ ಬಿತ್ತಬೇಕು.
  • ಪ್ರತಿ ಹೇಕ್ಟರಿಗೆ 25 ಕಿ.ಗ್ರಾಂ ಸಾರಜನಕ, 75 ಕಿ.ಗ್ರಾಂ ರಂಜಕ ಮತ್ತು 25 ಕಿ.ಗ್ರಾಂ ಪೊಟ್ಯಾಶ್‌  ಗೊಬ್ಬರ ವನ್ನು ಬಿತ್ತನೆ ಸಮಯದಲ್ಲಿ ಕೊಡಬೇಕು.
  • ಬಿತ್ತಿದ 30 ದಿನಗಳ  ನಂತರ ಪ್ರತಿ ಹೇಕ್ಟರಿಗೆ 500 ಕಿ.ಗ್ರಾಂ ಜಿಪ್ಸಂ ಕೊಡಬೇಕು.
  • ಬಿತ್ತಿದ 30 ದಿನಗಳವರೆಗೆ ನೀರು ಹಾಯಿಸಬಾರದು.
  • ಸಮಗ್ರ ಕೀಟ  ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವ್ರದು.
  • ¨ÉùUÉ ಹಂಗಾಮಿನಲ್ಲಿ ಬೆಳೆದ ಶೇಂಗಾ ಕಾಯಿಗಳನ್ನು ಹೆಚ್ಚು ಸಮಯ ಸುಡು ಬಿಸಿಲಿನಲ್ಲಿ  ಒಣಗಿಸಿಬಾರದು ಮತ್ತು ನೇರ½ನಲ್ಲಿ ಒಣಗಿಸಬೇಕು. ಅಥವಾ ಕಾಯಿ ಕಿತ್ತ 3 ನೇ ದಿನದಿಂದ ಕಾಯಿ ಬಿಡಿಸಿದ ನಂತರ ಕಿತ್ತ ಶೇಂಗಾ ಗಿಡದ ಕಾಯಿಗಳ ಮೇಲೆ ಇನ್ನೋಂದು ಗಿಡದ ತಪ್ಪಲ  ಮುಚ್ಚಿ ಒಂದೇ ಪದರದಲ್ಲಿ ಹೊಲದಲ್ಲಿ ಒಣಗಿಸಿ ನಂತರ ಕಾಯಿಗಳನ್ನು ಬಿಡಿಸಿ ನೆರಳಿನಲ್ಲಿ  ಒಣಗಿಸಬೇಕು.
  • ಕಾಯಿಗಳನ್ನು ಘಲ್‌ ಘಲ್‌ ಶಬ್ದಬರುವಂತೆ (ಶೇ. 7 ರಷ್ಟು ತೇವಾಂಶವಿರುವಂತೆ) ಒಣಗಿದ ನಂತರ  300 ಗೇಜನ ಪಾಲಿಧೀನ್‌ ಪದರವ್ರಳ್ಳ ಗೋಣಿಚೀಲದಲ್ಲಿ ಶೇಖರಿಸುವ್ರದರಿಂದ ಉತ್ತಮ ಗುಣ  ಮಟ್ಟವನ್ನು ಕಾಪಾಡಿಕೊಳ್ಳಬಹುದು.

 


                Source:   ಡಾ. ಬಸವೇಗೌಡಮತ್ತುಶ್ರೀ.ಜಿ.ವೈ.ಲೋಕೇಶ್
               ಬೀಜಆಧಿಕಾರಿಗಳುಕೃಷಿವಿಶ್ವವಿದ್ಯಾಲಯ, ರಾಯಚೂರುಮತ್ತುಕೃಷಿಸಚಿವಾಲಯ, ಭಾರತಸರ್ಕಾರ
0
Your rating: None