ಮೆಣಸಿನಕಾಯಿ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ
ಕೀಟ / ರೋಗದ ಹೆಸರು |
ಹಾನಿಯ ಲಕ್ಷಣಗಳು |
ಕೀಟ / ರೋಗ ಗುರುತಿಸುವಿಕೆ |
ಹತೋಟಿ ಕ್ರಮಗಳು |
ಸಿರ್ಟೋಥ್ರಿಪ್ಸ್ ಡಾರ್ಸ್ಯಾಲಿಸ್ |
ಎಲೆಗಳು ಮೇಲೆ ಮುದುಡಿಕೊಂಡು ತಿರುಚಿ ಕೊಳ್ಳುತ್ತದೆ. ಗಿಡದ ಬೆಳವಣಿಗೆ ಕುಂಠಿತಗಳ್ಳುತ್ತದೆ. |
|
ಬೀಜೋಪಚಾರ (ಪ್ರತಿ ಕೆ. ಜಿ. ಬೀಜಕ್ಕೆ ):10 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲು.ಎಸ್. 0.2 ಮಿ. ಲೀ ಇಮಿಡಾಕ್ಲೋಪ್ರಿಡ್ 17.8 ಎಸ್. ಎಲ್ ಅಥವಾ 1.0 ಮಿ.ಲೀ. ಫಿಪ್ರೋನಿಲ್ 5 ಎಸ್. ಸಿ. ಸಿಂಪಡಿಸಬೇಕು. |
ಮೈಟ್ ನುಶಿ, ಫಾಲೀಫ್ಯಾಗೋಟಾರ್ಸೋನಾಮ್ಸ್ ಲ್ಯಾಟ್ಸ್
|
ನುಶಿಯ ಬಾಧಿತ ಎಲೆಗಳ ದೇಟು ಉದ್ದವಾಗಿ, ಬಿರುಸಾಗಿ ಕಪ್ಪು ಹಸಿರು ಬಣ್ಣಕ್ಕೆ ತಿರುಗಿ ಒಳಗಡೆ ಮುದುಡಿಕೊಳ್ಳುತ್ತವೆ. ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತೆ. |
|
2.0 ಮಿ.ಲೀ. ಫೆನಜಕ್ವಿನ್ 10 ಇ.ಸಿ. ಅಥವಾ 0.3 ಮಿ. ಲೀ. ವರ್ಟಿಮೆಕ್ 1.9 ಇ.ಸಿ. ಅಥವಾ 2.50 ಮಿ.ಲೀ. ಡೈಕೊಫಾಲ್ 18.5 ಇ.ಸಿ. ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಸಿಂಪಡಿಸಬೇಕು. |
ಚಿಬ್ಬು ರೋಗ |
ಹಣ್ಣುಗಳ ಮೇಲೆ ವೃತ್ತಾಕಾರದ, ತಗ್ಗಾದ ಕಪ್ಪನೆಯ ಚುಕ್ಕೆಗಳನ್ನು ಕಾಣಬಹುದು |
|
0.2 ಗ್ರಾಂ ಕ್ಯಾಪಟ್ಫಾಲ್ ಸಿಂಪಡಿಸಿದ ನಂತರ 0.25 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.1 ಗ್ರಾಂ ಕಾರ್ಬೆಂಡೈಜಿಮ್ |
ಬೂದಿ ರೋಗ |
ಮೊದಲ ಹಂತದಲ್ಲಿ ಎಲೆಗಳ ಮೇಲೆ ಬೂದಿ ಬಣ್ಣದ ಮಚ್ಛೆಗಳು ಕಂಡು ಬಂದು ನಂತರ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಎಲೆಯನ್ನು ಸಂಪೂರ್ಣವಾಗಿ ಆವರಿಸುತ್ತದೆ |
|
1 ಮಿ.ಲೀ ಡೈಯನೊಕ್ಯಾಪ್ ಅಥವಾ 2 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಹೂ ಬಿಡುವ ಮುಂಚೆ ಪ್ರತಿ ಎಕರೆಗೆ 8-10 ಕೆಜಿ ಗಂಧಕವನ್ನು ಧೂಳಿಕರಿಸಬೇಕು |
ಎಲೆ ಮುಟುರು ರೋಗ |
ಚಿಗುರು ಎಲೆಗಳು ಕೀಟ ಮತ್ತು ನಂಜಾಣು ಹಾವಳಿಯಿಂದ ಎಲೆಗಳು ಮುಟುರು ಗೊಳ್ಳುತ್ತದೆ |
|
1.5 ಮಿ.ಲೀ. ಮೋನೋಕ್ರೋಟೊಪಾಸ್ ಅಥವಾ 2 ಮಿ.ಲೀ ಡೈಮಿಥೋಯೇಟ್ ಅಥವಾ 2 ಮಿ.ಲೀ. ಅಸಿಫೇಟ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು |
- Login to post comments
- 1530 reads