ಮಾವಿನ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ
ಕೀಟ / ರೋಗದ ಹೆಸರು |
ಹಾನಿಯ ಲಕ್ಷಣಗಳು |
ಕೀಟ / ರೋಗ ಗುರುತಿಸುವಿಕೆ |
ಹತೋಟಿ ಕ್ರಮಗಳು |
ಜಿಗಿ ಹುಳು (ಆಮ್ರಿಟೋಡೆಸ್ ಅಟ್ಕಿನ್ಸೋನಿ, ಇಡೀಯೋಸ್ಕೋಪೆಸ್ ನೀವಿಯೋಸ್ಪಾರಸ್ ಮತ್ತು ಇಡೀಯೋಸ್ಕೋಪೆಸ್ ಪಿಯಾಲಿಸ್) |
ಹೂ ಗೊಂಚಲು ಒಣಗುವುದು ಮತ್ತು ಕಪ್ಪಾಗುವಿಕೆ |
|
ಪ್ರತಿ ಲೀಟರ್ ನೀರಿನಲ್ಲಿ 0.25 ಗ್ರಾಂ. ಥಯೋಮೆಥಾಕ್ಸಂ ಅಥವಾ 4 ಗ್ರಾಂ. ಕಾರ್ಬರಿಲ್ ಬೆರೆಸಿ ಸಿಂಪರಣೆ ಮಾಡಬೇಕು (ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು.) ಸಿಂಪರಣೆಯನ್ನು ಎರಡು ವಾರಕೊಮ್ಮೆ ಪುನಾರವರ್ತನೆ ಮಾಡಬೇಕು |
ಹಿಟ್ಟು ತಿಗಣೆ (ಡ್ರೊಸ್ಕಿಕಾ ಮೇಂಜಿಫೆರೆ) |
ಹೂ ಗೊಂಚಲು ಒಣಗುವಿಕೆ ಮತ್ತು ಕಪ್ಪಾಗುವಿಕೆ |
|
ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ( ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು) |
ಹೂವಿನ ಜೇಡ |
ಹೂ ಗೊಂಚಲಿನ ಮೇಲೆಲ್ಲಾ ಬಿಳಿ ಹಿಟ್ಟಿನ ಪದರು |
|
ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ( ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು) |
ಬೂದಿ ರೋಗ
|
ಎಲೆ ಮತ್ತು ಹೂಗೊಂಚಲಿನ ಮೇಲೆ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆಯಾಗುತ್ತದೆ |
|
0.2 ಗ್ರಾಂ ಸಲ್ಪೇಕ್ಸ್ ಅಥವಾ 0.2 ಗ್ರಾಂ ವೆಟ್ಟಾಸಲ್ ಅಥವಾ 0.1 ಗ್ರಾಂ ಬಾವಿಸ್ಟಿನ್ ಅಥವಾ 0.1 ಗ್ರಾಂ ಕ್ಯಾಲಿಕ್ಸಿನ್ 15 ದಿನದ ಹಂತರದಲ್ಲಿ ಸಿಂಪಡಿಸಬೇಕು |
- Login to post comments
- 1137 reads