Submitted by naipictuasdharwad on Fri, 09/04/2010 - 12:41
Posted in
ಭತ್ತದಲ್ಲಿ ಸೈನಿಕ ಹುಳುವಿನ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು
- ಈ ಕೀಡೆಯು ವರ್ಷದ ಹೆಚ್ಚು ಮಳೆ ಬರುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮರಿ ಹುಳುಗಳು ಗಿಡವನ್ನು ಸಂಪೂರ್ಣವಾಗಿ ತಿಂದು ಹಾಳು ಮಾಡುತ್ತದೆ
- ಶೇ. 60 ರಷ್ಟು ಹಾನಿ ಉಂಟು ಮಾಡುತ್ತದೆ
ಕೀಟದ ವಿವರ :
- ತತ್ತಿ: ಎಲೆಯ ಮತ್ತು ಕಾಂಡದ ಮೇಲೆ ಒಂದರ ಮೇಲೊಂದು ಸಾಲುಗಳಲ್ಲಿ ಇಡುತ್ತೆ.
- ಮರಿ ಹುಳು: ಹಸಿರು ಬಣ್ಣದ ದೇಹ ಜೊತೆಗೆ ಉದ್ದನೆಯ ಗೆರೆಯು ಹೊಂದಿರುತ್ತೆ.
- ಕೋಶಾವಸ್ಥೆ: 13 ರಿಂದ 20 ಮಿ.ಮೀ. ಕಪ್ಪು ಬಣ್ಣ ಹೊಂದಿರುತ್ತೆ.
- ಪ್ರೌಢ: ಕೆಂಪು, ಕಂದು ಬಣ್ಣ ಹೊಂದಿರುತ್ತೆ.
ಮರಿ ಹುಳು ಕೋಶಾವಸ್ಥೆ ಅಪ್ಸರೆ ಕೀಟ
ಹಾನಿಯ ಲಕ್ಷಣಗಳು:
ಹಾನಿಯ ಹಂತ: ಮರಿಹುಳು
ರಾತ್ರಿಯ ಸಮಯದಲ್ಲಿ ಎಲೆಯನ್ನು ಮತ್ತು ತೆನೆಯ ದೇಟನ್ನು ತಿನ್ನುತ್ತದೆ.
ಹಗಲಿನಲ್ಲಿ ಸಸಿಗಳ ಬುಡದಲ್ಲಿ ಅವಿತಿರುತ್ತದೆ.
ಮರಿಹುಳು ಎಲೆಯನ್ನು ಕತ್ತರಿಸಿ ತಿಂದಿರುವುದು
- Login to post comments
- 1812 reads