Submitted by naipictuasdharwad on Sat, 13/02/2010 - 16:14
Posted in
ಭತ್ತದಲ್ಲಿ ಮುಳ್ಳು ಚಿಪ್ಪು ಹುಳುವಿನ ಕೀಟದ ವಿವರ ಮತ್ತು ಲಕ್ಷಣಗಳು
ಕೀಟದ ವಿವರ:
- ಮರಿ ಹುಳು: ಚಿಕ್ಕದಾಗಿದ್ದು ಕಂದು ಬಣ್ಣ ಹೊಂದಿದ್ದು ವೃತ್ತಾಕಾರದಲ್ಲಿರುತ್ತವೆ.
- ಪ್ರೌಢ ಕೀಟ: ಕಪ್ಪು ಬಣ್ಣದಾಗಿದ್ದು, ಮೈ ಮೇಲೆ ಮುಳ್ಳುಗಳಿರುತ್ತವೆ.
- ತತ್ತಿ: ಒಂದು ತತ್ತಿ ಎಲೆಯ ತುದಿಯ ಮೇಲು ಭಾಗದಲ್ಲಿರುತ್ತದೆ. ಬಿಳಿ ಬಣ್ಣದ ತತ್ತಿ.
ಮುಳ್ಳುಗಳಿರುವ ಕಪ್ಪು ಬಣ್ಣದ ದುಂಬಿ
ಹಾನಿ:
- ಹಾನಿಯ ಹಂತ: ಪ್ರೌಢ ಮತ್ತು ಮರಿ ಹುಳು
- ನಾಟಿ ಮಾಡಿದ ಪ್ರಾರಂಭಿಕ ಹಂತದಲ್ಲಿ ಹಾನಿ ಮಾಡುತ್ತದೆ.
- ಎಲೆಯನ್ನು ಕೆರೆದು ತಿನ್ನುತ್ತದೆ.
- ಮರಿಹುಳು ಎಲೆಯಲ್ಲಿ ಸುರಂಗ ಮಾಡಿ ತಿನ್ನುತ್ತೆ.
ಲಕ್ಷಣ:
- ಎಲೆಯ ಮೇಲೆ ಬಿಳಿಯ ಪಟ್ಟಿಗಳು
- ಹಳದಿ ಬಣ್ಣದ ಸುರಂಗಗಳನ್ನು ಕಾಣಬಹುದು.
ಕೀಟ ಭಾದಿತ ಹೊಲ
- Login to post comments
- 1997 reads