ಭತ್ತದಲ್ಲಿ ಪೋಷಕಾಂಶಗಳ ನಿರ್ವಹಣೆ
ಕೂರಿಗೆ ಭತ್ತದಲ್ಲಿ
ರಂಗಿ ಭೂಮಿಯಲ್ಲಿ ಕೂರಿಗೆ ಭತ್ತಕ್ಕೆ ಕೊಟ್ಟಿಗೆ ಗೊಬ್ಬರದ ಬದಲು ಪ್ರತಿ ಹೆಕ್ಟೇರಿಗೆ 10 ಕಿ.ಗ್ರಾಂ ಸಣಬಿನ ಬೀಜಗಳನ್ನು ಭತ್ತದ ಬೀಜಗೊಂದಿಗೆ ಬೆರೆಸಿ ಬಿತ್ತಬೇಕು. ಬಿತ್ತನೆಯಾದ 40 ದಿನಗಳ ನಂತರ ಗದ್ದೆಯಲ್ಲಿ ಸಾಕಷ್ಟು ನೀರು ನಿಂತಾಗ ಎಡೆಕುಂಟೆ ಹೊಡೆದು, ಹೊಡೆತ ಮಾಡುವುದರಿಂದ (ದೋಣಿ ತಿಕ್ಕುವುದು), ಸೆಣಬು ಬೆಳೆ ಕೆಸರಿನಲ್ಲಿ ಸಿಕ್ಕು ಕೊಳೆಯುವುದು, ಇದರಿಂದ ಭತ್ತಕ್ಕೆ ಸಾವಯವ ಪದಾರ್ಥವಾಗಿ, ದೊರೆತು ಇಳುವರಿ ಹೆಚ್ಚುವುದಲ್ಲದೆ, ಮಣ್ಣೀನ ಫಲವತ್ತತೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುವುದು ಅಥವಾ ಹೆಚ್ಚಾಗುವುದು.
ಅಥವಾ
ಲಭ್ಯವಿರುವ ಗ್ಲಿರಿಸೀಡಿಯಾ (ಗೊಬ್ಬರದ ಗಿಡ) ಅಥವಾ ಯುಪಟೋರಿಯಂ/ಪಾಥರ್ೆನಿಯಂ/ಕ್ಯಾಸಿಯಾಗಳಂತಹ ಅನುಪಯುಕ್ತ ಕಳೆಗಳನ್ನು ಪ್ರತಿ ಹೆಕ್ಟೇರಿಗೆ 5 ಟನ್ ಹಸಿರು ಪದಾರ್ಥದ ಪ್ರಮಾಣದಲ್ಲಿ ರಂಗಿ ಭೂಮಿಯಲ್ಲಿ ಕೂರಿಗೆ ಭತ್ತದ ಸಾಲುಗಳಲ್ಲಿ ಎಡೆಕುಂಟೆ ಹೊಡೆದ ಮೇಲೆ ಹರಡಿ, "ಹೊಡೆತ" ಮಾಡುವುದರಿಂದ ಶಿಫಾರಿತ ರಸಗೊಬ್ಬರಗಳ ಶೇ.50ರಷ್ಟು ಮಾತ್ರ ಕೊಟ್ಟು ಇಳುವರಿಯನನು ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಳ್ಳಬಹುದು.
ನಾಟಿ ಭತ್ತದಲ್ಲಿ
- ನೀರಾವರಿಯಲ್ಲಿ ಭತ್ತನಾಟಿ ಮಾಡುವುದಕ್ಕೆ 8 ವಾರ ಮುಂಚೆ ಸೆಸ್ಬೇನಿಯಾ ರೊಸ್ಟ್ರೇಟಾ ಹಸಿರೆಲೆ ಗೊಬ್ಬರದ ಬೀಜಗಳನ್ನು ಹೆಕ್ಟೇರಿಗೆ 25 ಕಿ.ಗ್ರಾಂ. ಪ್ರಮಾಣದಲ್ಲಿ ಬಿತ್ತಿ, ಭತ್ತಕ್ಕೆ ಕೊಡಬೇಕಾದ ರಂಜಕವನ್ನು ಹಸಿರೆಲೆ ಬೆಳೆಗೆ ಒದಗಿಸಿ, ಹಸಿರೆಲೆ ಬಿತ್ತಿದ 7 ವಾರಗಳ ನಂತರ ಕೆಸರು ಗದ್ದೆ ಮಾಡುವಾಗ ಮುಗ್ಗು ಹೊಡೆದು, ಒಂದು ವಾರ ನಂತರ ಭತ್ತದ ಸಸಿಗಳನ್ನು ನಾಟಿ ಮಾಡಬೇಕು.
- ಹಸಿರೆಲೆ ಗೊಬ್ಬರದ ಜೊತೆಗೆ ಶಿಫಾರಿತ ಸಾರಜನಕವನನು ಒದಗಿಸುವುದರಿಂದ ಇಳುವರಿ ಹೆಚ್ಚಿಸಬಹುದು.
ಸಾರಜನಕವನ್ನು ಒದಗಿಸುವ ಕಾಲ
- ಭತ್ತದ ಬೆಳೆಗೆ ಕೊಡಬೇಕಾದ ಎಲ್ಲಾ ಸಾರಜನಕವನ್ನು ಒಂದೇ ಬಾರಿ ಕೊಡುವುದಕ್ಕಿಂತ ಎರಡು/ಮೂರು ಕಂತುಗಳಲ್ಲಿ ಕೊಡುವುದರಿಂದ ಬೆಳವಣಿಗೆಯ ವಿವಿಧಹಂತಗಳಲ್ಲಿ ಬೆಳೆಗೆ ಬೇಕಾದಷ್ಟು ಪ್ರಮಾಣದಲ್ಲಿ ಸಾರಜನಕವನನು ಒದಗಿಸಿದಂತಾವುದರ ಜೊತೆಗೆ ಪೋಲಾಗುವ ಸಾರಜನಕವನ್ನು ಕಡಿಮೆ ಮಾಡಬಹುದು.
- ಭತ್ತದ ಇಳುವರಿ ಹೆಚ್ಚಿಸಲು ಒಂದು ನಿಧರ್ಿಷ್ಟ ಕ್ಷೇತ್ರದಲ್ಲಿನ ತೆನೆಗಳ ಸಂಖ್ಯೆ ಹಾಗು ಪ್ರತಿ ತೆನೆಯಲ್ಲಿ ಗಟ್ಟಿ ಕಾಳುಗಳ ಸಂಖ್ಯೆ ಹೆಚ್ಚಾಗಬೇಕು. ಕೊನೆಗೆ ಕಾಳು ಜೊಳ್ಳಾಗದೆ ಗಟ್ಟಿ ಕಾಳಾಗಬೇಕು. ಹತ್ತು ಚ್ರದರ ಅಡಿ ಕ್ಷೇತ್ರದಲ್ಲಿ ಮಧ್ಯಮಾವಧಿ ತಳಿಗಳಲ್ಲಿ 400ಕ್ಕೂ ಹೆಚ್ಚು ಮರಿಗಳು ಇರುವುದಾದಲ್ಲಿ ಅದನ್ನು ಉತ್ತಮ ಬೆಳೆ ಎನ್ನಬಹುದು.
- ಸಾರಜನಕವನ್ನು ಒದಗಿಸುವ ಸಮಯ ಮತ್ತು ಪ್ರಮಾಣವನ್ನು ನಿರ್ಧರಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು.
- ಬೆಳೆ ಬೆಳವಣಿಗೆಯ ಪ್ರಾರಂಭದಲ್ಲಿ ಸಾರಜನಕವನ್ನು ಒದಗಿಸುವುದರಿಂದ ಮರಿಗಳು ಚೆನ್ನಾಗಿ ಬರುತ್ತವೆ.
- ತಡವಾಗಿ ಸಾರಜನಕವನ್ನು ಒದಗಿಸುವುದರಿಂದ ಮರಿಗಳ ಬೆಳವಣಿಗೆಯಾಗುವುದಿಲ್ಲವಾದರೂ ಅವುಗಳಿಂದ ಬರುವ ತೆನೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಕಾಳು ಕಟ್ಟುತ್ತದೆ.
- ತಡವಾಗಿ ಹಾಗೂ ತೆನೆ ಬರುವುದಕ್ಕೆ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಸಾರಜನಕವನ್ನು ಒದಗಿಸಿದಲ್ಲಿ ಕಾಳಿನಲ್ಲಿರುವ ಸಸಾರಜನಕದ ಅಂಶ ಹೆಚ್ಚುತ್ತದೆ. ಆದ್ದರಿಂದ ತಡವಾಗಿ ಸಾರಜನಕವನನು ಒದಗಿಸುವುದು ಸರಿಯಾದ ಪದ್ಧತಿಯಲ್ಲ. ಇದರಿಂದ ಬೆಳೆ ಇಳುವರಿ ಹೆಚ್ಚಾಗಲಾರದು.
ಸಾರಜನಕದ ನಿರ್ವಹಣೆ
- ಬೆಳೆಗೆ ಕೊಡಬೇಕಾದ ಸಾರಜನಕದ ಪ್ರಮಾಣ ಮತ್ತು ವಿಧಾನಗಳ ಅಳವಡಿಕೆಗೆ ಈ ಕೆಳಗಿನ ಅಂಶಗಳನನು ಅನುಸರಿಸುವುದು ಸೂಕ್ತ.
- ಸಾರಜನಕವನ್ನು ಅಮೋನಿಯಂ ಸಲ್ಫೇಟ್ ಅಥವಾ ಯೂರಿಯಾ ರೂಪದಲ್ಲಿ ಒದಗಿಸುವುದು ಸೂಕ್ತ.
- ನಾಟಿ ಸಮಯದಲ್ಲಿ ಕೊಡಬೇಕಾದ ಸಾರಜನಕವನ್ನು ಜಮೀನು ತಯಾರಿಕೆಯ ಕೊನೆಯ ಉಳುಮೆ ಹಂತದಲ್ಲಿ ಕೊಡುವುದು.
- ಮೇಲುಗೊಬ್ಬರ ಒದಗಿಸುವ 24 ಗಂಟೆಗಳ ಮುಂಚೆ ಗದ್ದೆಯಲ್ಲಿನ ನೀರು ಬಸಿದು ತೆಗೆದು, ಮೇಲು ಗೊಬ್ಬರ ಕೊಡುವುದು.
- ಮೇಲು ಗೊಬ್ಬರ ಕೊಟ್ಟ 24 ಗಂಟೆಗಳ ನಂತರ ಬೆಳೆಗೆ ನೀರು ಕೊಡುವುದು.
- ನಾಟಿ ಮಾಡಿದ ಮೂರು ಹಾಗೂ ಆರು ವಾರಗಳ ನಂತರ ಮತ್ತು ತೆನೆ ಬರುವ ಹಂತದಲ್ಲಿ ಹೆಕ್ಟೇರಿಗೆ 25 ಕಿ.ಗ್ರಾಂ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡುವುದು.
- ಮಣ್ಣಿನಲ್ಲಿ ಸಾರಜನಕವು "ಕಡಿಮೆ" ಕಂಡುಬಂದಾಗ ನಾಟಿ ಮಾಡುವಾಗ ಹೆಚ್ಚು ಸಾರಜನಕ ಕೊಡಬೇಕು.
- ಮಣ್ಣಿನಲ್ಲಿ ಸಾರಜನಕವು "ಹೆಚ್ಚು" ಪ್ರಮಾಣದಲ್ಲಿ ಕಂಡುಬಂದಾಗ ನಾಟಿ ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಸಾರಜನಕವನನು ಕೊಡಬೇಕು.
- ಮರಳು ಮಿಶ್ರಿತ ಮಣ್ಣಿನಲ್ಲಿ ಯಾವ ಹಂತದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕವನ್ನು ಕೊಡಬೇಕಾಗಿಲ್ಲ.
- ಕಡಿಮೆ ಮರಿಗಳನ್ನು ಕೊಡುವ ತಳಿಗಳಿಗೆ ಬೆಳೆಯ ಪ್ರಾರಂಭದಲ್ಲಿ ಹೆಚ್ಚು ಪ್ರಮಾಣದ ಸಾರಜನಕ ಕೊಡಬಾರದು.
- ಅಲ್ಪಾವಧಿ ತಳಿಗಳಿಗೆ ಬೆಳೆಯ ಪ್ರಾರಂಭದಲ್ಲಿ ಹೆಚ್ಚು ಪ್ರಮಾಣದ ಸಾರಜನಕ ಕೊಡಬೇಕು.
- ಧೀಘರ್ಾವಧಿ ತಳಿಗಳಿಗೆ ಮೇಲು ಗೊಬ್ಬರವಾಗಿ ಹೆಚ್ಚು ಪ್ರಮಾಣದ ಸಾರಜನಕ ಕೊಡುವುದು.
- ಬೆಳೆ ಪ್ರಾರಂಭದಲ್ಲಿ ತಂಪು ಹವಾಗುಣವಿದ್ದಲ್ಲಿ ಮೇಲು ಗೊಬ್ಬರವಾಗಿ ಹೆಚ್ಚು ಪ್ರಮಾಣದ ಸಾರಜನಕ ಕೊಡುವುದು.
- ಬೆಳೆಯಲ್ಲಿ ದುಂಡಾಣುರೋಗ ಬರುವ ಲಕ್ಷಣ ಕಂಡಲ್ಲಿ ಸಾರಜನಕವನ್ನು ಹೆಚ್ಚು ಕಂತುಗಳಲ್ಲಿ ಮೇಲುಗೊಬ್ಬರವಾಗಿ ಕೊಡುವುದು.
- ಹೆಚ್ಚು ವಯಸ್ಸಿನ ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ ಹೆಚ್ಚು ಸಾರಜನಕ ಒದಗಿಸಿ ಕಡಿಮೆ ಅಂತರದಲ್ಲಿ ನಾಟಿ ಸೂಕ್ತ ಮಾಡುವುದು.
- ಎಲೆ ಬಣ್ಣದ ಪಟ್ಟಿಯಿಂದ
- ಬೆಳೆಯಲ್ಲಿ ಎಲೆಗಳು ಹಳದಿಯಾದಾಗ ಸಾರಜನಕದ ಕೊರತೆಯೆಂದು ಪರಿಗಣಿಸಲಾಗುತ್ತದೆ. ಆದರೆ ಎಷ್ಟರ ಮಟ್ಟಿಗೆ ಎಲೆಗಳು ಹಳದಿಯಾದಾಗ ಸಾರಜನಕ ಕೊಡಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಈ ನಿಟ್ಟಿನಲ್ಲಿ "ಎಲೆ ಬಣ್ಣದ ಪಟ್ಟಿ" ಬಳಕೆ ಬಹಳ ಉಪಯುಕ್ತ ಜಪಾನ ದೇಶದಲ್ಲಿ ತಯಾರಿಸಲ್ಪಟ್ಟ ಎಲೆ ಬಣ್ಣದ ಪಟ್ಟಿಯ ಆಧಾರದ ಮೇಲೆ ಫಿಲಿಫೈನ್ಸ್ನ ಅಂತರ ರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಎಲೆ ಬಣ್ಣದ ಪಟ್ಟಿಯ ಸಹಾಯದಿಂದ ಸಾರಜನಕದ ನಿರ್ವಹಣೆ ಮಾಡುವಾಗ ಎಲ್ಲಾ ಮೂಲಗಳಿಂದ ಲಭ್ಯವಾಗುವ ಸಾರಜನಕವನ್ನು (ಮಣ್ಣು, ನೀರು ಸಾವಯವ ರಸಗೊಬ್ಬರಗಳಿಂದ ದೊರೆಯುವ ಮತ್ತು ವಾತಾವರಣದಿಂದ ಸ್ಥರೀಕರಿಸುವ ರಸಗೊಬ್ಬರಗಳ ಮೂಲಕ ಒದಗಿಸಲಾದ) ಹಾಗೂ ಎಲ್ಲಾ ರೀತಿಯಿಂದ ವ್ಯಯವಾಗುವ ಸಾರಜನಕವನನು (ಬೆಳೆ/ಕಳೆಗಳ ಬಳಕೆ, ಆವಿಯಾಗುವಿಕೆ, ಬಸಿಯುವಿಕೆ, ಹರಿಯುವ ನೀರಿನೊಂದಿಗೆ ಪೋಲಾಗುವುದು ಹಾಗೂ ಮಣ್ಣಿನಲ್ಲಿಯ ಜೀವ ಕ್ರಿಯೆಯಿಂದಾಗಿ ಸಾವಯವವು ರೂಪಕ್ಕೆ ಪರಿವತರ್ಿಸಲ್ಪಡುವುದು) ಪರಿಗಣಿಸಲಾಗುವುದು. ಇದರಿಂದಾಗಿ ಬೆಳೆಯ ನಿಜವಾದ ಅವಶ್ಯಕತೆಗನುಗುಣವಾಗಿ ಸಾರಜನಕ ಪೂರೈಸಲು ಸಾಧ್ಯವಾಗುವುದು.
- ಎಲೆ ಬಣ್ಣದ ಪಟ್ಟಿಯಲಲಿ 7 ಹಸಿರು ಛಾಯೆಗಳಿದ್ದು, (ಛಾಯಾ ಚಿತ್ರದಲ್ಲಿ ತೋರಿಸಿರುವಂತೆ) ತಿಳಿ ಹಳದಿ ಹಸಿರುವ ಬಣ್ಣಕ್ಕೆ ಒಂದು ಸಂಖ್ಯೆಯನ್ನು ದಟ್ಟ ಹಸಿರು ಬಣ್ಣಕ್ಕೆ 7 ಸಂಖ್ಯೆಯನ್ನು ಕೊಡಲಾಗಿದ್ದು, ಇವುಗಳ ನಡುವ ಬರುವ ಬಣ್ಣದ ಛಾಯೆಗಳಿಗೆ 2-6 ಸಂಖ್ಯೆಯನ್ನು ಅನುಕ್ರಮವಾಗಿ ಕೊಡಲಾಗಿದೆ.
ಎಲೆ ಬಣ್ಣದ ಪಟ್ಟಿಯ ಬಳಕೆಗೆ ಸೂಚನೆಗಳು
- ಎಲೆಯಬಣ್ಣದ ಅಳತೆಗಾಗಿ ಪೂರ್ಣ ಬಿಚ್ಚಿದ ರೋಗರಹಿತ ಹೊಸ ಎಲೆಯನ್ನು ಆರಿಸಬೇಕು. ಪ್ರತಿ ಹೊಲದಲ್ಲಿ ಇಂತ 10 ಎಲೆಗಳ ಬಣ್ಣದ ಅಳತೆ ಮಾಡಬೇಕು.
- ಆಯ್ಕೆ ಮಾಡಿದ ಎಲೆಯ ಮಧ್ಯಭಾಗವನ್ನು ಸರಿ ಹೊಂದುವ ಬಣ್ಣದ ಛಾಯೆಯ ಮೇಲಿಟ್ಟು ಹೋಲಿಸಿ ನೋಡಿ ಅದರ ಬಣ್ಣದ ಅಳತೆಯನ್ನು ನಿರ್ಧರಿಸಬೇಕು.
- ಅಳತೆ ಮಾಡುವಾಗ ಎಲೆಯ ಮೇಲೆ ದೇಹದ ನೆರಳು ಬೀಳದಂತೆ ನೋಡಿಕೊಳ್ಳಬೇಕು. ಪ್ರತಿದಿನ ನಿಧರ್ಿಷ್ಟ ಸಮಯದಲ್ಲಿ ಒಬ್ಬರೇ ಎಲೆಯ ಬಣ್ಣದ ಅಳತೆ ಮಾಡುವುದು ಸೂಕ್ತ.
- ಎಲೆಯ ಬಣ್ಣ ಎರಡು ಬಣ್ಣದ ಛಾಯೆಗಳ ನಡುವೆ ಬರುವಂತಿದ್ದರೆ, ಆ ಎರಡೂ ಸಂಖ್ಯೆಗಳ ಸರಾಸರಿಯನ್ನು ತೆಗೆದುಕೊಳ್ಳಬೇಕು.
- ನಾಟಿ ಮಾಡಿದ 14 ಅಥವಾ ಬಿತ್ತನೆಯಾದ 21 ದಿನಗಳಿಂದ ಆರಂಭಿಸಿ, ಮೊದಲ ಹೂವು ಕಾಣುವವರೆಗೆ, ಪ್ರತಿ 7-10 ದಿನಗಳಿಗೊಮ್ಮೆ ಎಲೆಯ ಬಣ್ಣದ ಅಳತೆ ಮಾಡಬೇಕು.
- ಸಾರಜನಕ ಕೊಡಲು ಸೂಕ್ತವಾದ ಎಲೆ ಬಣ್ಣದ ಅಳತೆ (ಕ್ರಿಟಿಕಲ್ ಎಲ್.ಸಿ.ಸಿ. ಸಂಖ್ಯೆ) ತಳಿಯಿಂದ ತಳಿಗೆ ಬದಲಾಗುತ್ತದೆ. ಕೂರಿಗೆ ಭತ್ತ ಇಂಟಾನ್ ತಳಿಗೆ ಸಾರಜನಕದ ನಿರ್ವಹಣೆಗೆ ಸೂಕ್ತವಾದ ಎಲೆ ಬಣ್ಣದ ಅಳತೆಯನನು ಮೂರು ಮತ್ತು ನಾಲ್ಕು ಹಾಗೂ ನೀರಾವರಿಯಲ್ಲಿ ನಾಟಿ ಮಾಡಿದ ಸೋನಾ ಮಸೂರಿ ತಳಿಗೆ ಐದು ಎಂದು ನಿರ್ಧರಿಸಿದೆ.
- ಹತ್ತು ಎಲೆಗಳ ಬಣ್ಣದ ಅಳತೆಯ ಸರಾಸರಿ. ಆ ತಳಿಗೆ ಶಿಫಾರಸ್ಸು ಮಾಡಿದ ಸೂಕ್ತ ಎಲೆ ಬಣ್ಣದ ಅಳತೆಗಿಂತ ಕಡಿಮೆಯಾದಾಗ, ತಕ್ಷಣ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು. ಹತ್ತು ಎಲೆಗಳ ಸರಾಸರಿ ತೆಗೆಯುವ ಬದಲು ಐದಕ್ಕಿಂತ ಹೆಚ್ಚು ಎಲೆಗಳು ಶಿಫಾರಿತ ಎಲೆ ಬಣ್ಣದ ಅಳತೆಗಿಂತ ಕಡಿಮೆ ಅಳತೆ ತೋರಿಸಿದಾಗಲೂ ಸಾರಜನಕವನನು ಮೇಲು ಗೊಬ್ಬರವಾಗಿ ಕೊಡಬಹುದು.
ಯೂರಿಯಾ ಹದ ಮಾಡುವ ಕ್ರಮ
ಹತ್ತು ಕಿ.ಗ್ರಾಂ. ಯೂರಿಯಾವನ್ನು 50-100 ಕಿ.ಗ್ರಾಂ. ಗೋಡು ಮಣ್ಣಿನೊಡನೆ ಬೆರೆಸಿ, ತೇವವಾಗುವಷ್ಟು ನೀರನ್ನು ಚಿಮುಕಿಸಿ, 24 ಗಂಟೆಗಳ ಕಾಲ ಇಡಬೇಕು. ಗದ್ದೆಯಲ್ಲಿರುವ ನೀರನ್ನೇಲ ಬಸಿದು ಮಣ್ಣಿನಲ್ಲಿ ಬೆರೆಸಿಟ್ಟ ಈ ಯೂರಿಯಾ ಮಿಶ್ರಣವನ್ನು ಗದ್ದೆಯಲ್ಲಿ ಹರಡಿ, 24 ಗಂಟೆಗಳ ನಂತರ ನೀರು ಕೊಡಬೇಕು.
ಬೇವಿನ ಹಿಂಡಿ ಲೇಪಿಸಿದ ಯೂರಿಯಾ ತಯಾರಿಕೆ ಕ್ರಮ
ಮೂವತ್ತು ಕಿ.ಗ್ರಾಂ. ಬೇವಿನ ಹಿಂಡಿಯನ್ನು 100 ಕಿ.ಗ್ರಾಂ. ಯೂರಿಯಾದೊಂದಿಗೆ ಬೆರೆಸಿ ಜೊತೆಗೆ 1ಕಿ.ಗ್ರಾಂ. ಕೋಲ್ಟಾರ್ ಮತ್ತು 2 ಲೀಟರ್ ಸೀಮೆ ಎಣ್ಣೆಯನ್ನು ಇದರೊಡನೆ ಸೇರಿಸಿ ಉಪಯೋಗಿಸಬೇಕು.
ರಂಜಕ ಮತ್ತು ಪೋಟ್ಯಾಷ್ ಪೋಷಕಾಂಶಗಳ ಬಳಕೆ
- ಬೆಳೆಯು ಸಾರಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿ ಕೊಳ್ಳಬೇಕಾದರೆ ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಂಜಕ ಪೋಷಕಾಂಶವು ಇರಲೇಬೇಕು.
- ರಂಜಕದ ಕೊರತೆ ಇರುವಲ್ಲಿ ಸಾರಜನಕ ಮತ್ತು ಪೊಟ್ಯಾಷ್ ಒದಗಿಸುವುದರಿಂದ ನಿರೀಕ್ಷಿಸಿದಷ್ಟು ಉಪಯೋಗವಾಗುವುದಿಲ್ಲ.
ನಿರಂತರವಾಗಿ ನೀರಿಲ್ಲದ ಕ್ಷೇತ್ರಗಳಿಗೆ ಬೆಳೆಗಳಿಗೆ ಒದಗಬಹುದಾದ ರಂಜಕವು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನಲ್ಲಿ ಸ್ಥಿರೀಕರಣಗೊಳ್ಳುವುದು. - ಆದ್ದರಿಂದ, ನಾಟಿಯ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರಜನಕವನ್ನು ಒದಗಿಸುವುದರಿಂದ ಹೆಚ್ಚಿನ ಮಟ್ಟದಲ್ಲಿ ರಂಜಕದ ಉಪಯೋಗವಾಗುವುದು. ಭತ್ತದ ಬೆಳೆಯು, ಪ್ರಾರಂಭದ ಬೆಳೆ ಹಂತಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕವನನು ಬಳಸಿಕೊಳ್ಳುವುದು.
- ಮರುಳು ಮಣ್ಣಿನ ಕ್ಷೇತ್ರಗಳಲ್ಲಿ ಭತ್ತದ ಬೆಳೆಯು ಸಾರಜನಕ ಮತ್ತು ರಂಜಕಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪೊಟ್ಯಾಷಿಯಂ ಪೋಷಕಾಂಶವನ್ನು ಒದಗಿಸಬೇಕು. ಬೆಳೆಗೆ ಕೊಡಬೇಕಾದ ರಂಜಕ ಮತ್ತು ಪೊಟ್ಯಾಷಿಯಂ ಪ್ರಮಾಣವನ್ನು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ನಿರ್ಧರಿಸಬೇಕು.
ಲಘು ಪೋಷಕಾಂಶಗಳ ಬಳಕೆ
ನಾಟಿ ಮಾಡುವಾಗ ಸಸಿಗಳ ಬೇರು ಭಾಗವನ್ನು ಶೇ.1ರ ಸತುವಿನ ಸಲ್ಫೇಟ್ ದ್ರಾವಣದಲ್ಲಿ 1 ನಿಮಿಷ ಅದ್ದಿ ನಾಟಿ ಮಾಡಬೇಕು. (1ಕಿ.ಗ್ರಾಂ. ಸತುವಿನ ಸಲ್ಫೇಟ್ನ್ನು 10 ಲೀ. ನೀರಿನಲ್ಲಿ ಕರಗಿಸಿ, ಇದೇ ರೀತಿ 1 ಕಿ.ಗ್ರಾಂ. ಸುಣ್ಣವನ್ನು 10 ಲೀ. ನೀರಿನಲ್ಲಿ ಕರಗಿಸಿ, ಸುಣ್ಣದ ತಿಳಿಯನನು ಒಂದು ಪ್ರತ್ಯೇಕವಾದ ಮರದ ಅಥವಾ ಮಣ್ಣಿನ ಪಾತ್ರೆಗೆ ಬಸಿದು ಜೊತೆಗೆ ಸತುವಿನ ಸಲ್ಫೇಟ್ ದ್ರಾವಣವನ್ನು ಸೇರಿಸಿ, ನಂತರ 80 ಲೀ. ನೀರಿನಲ್ಲಿ ಬೆರೆಸಬೇಕು. ಇದು ಶೇ.1 ರ ಸತುವಿನ ಸಲ್ಫೇಟ್ ದ್ರಾವಣವಾಗುತ್ತದೆ. ಸುಣ್ಣದ ತಿಳಿ ಬೆರೆಸುವುದರಿಂದ ಗರಿಗಳ ಮೇಲೆ ಸುಟ್ಟಂತಾಗುವ ಲಕ್ಷಣಗಳು ತಪ್ಪುತ್ತವೆ.
ಅಥವಾ
- ಪ್ರತಿ ಹೆಕ್ಟೇರಿಗೆ 20 ಕಿ.ಗ್ರಾಂ. ಸತುವಿನ ಸಲ್ಫೇಟ್ನ್ನು 3 ಬೆಳೆಗಳ ನಂತರ ಒಮ್ಮೆ ಭೂಮಿಗೆ ಹಾಕಬೇಕು.
- ಹೆಚ್ಚು ಇಳುವರಿಗೆ ಸೂಚನೆಗಳು
- 25 ದಿವಸಗಳಿಗಿಂತ ಹೆಚ್ಚು ವಯಸ್ಸಿನ ಸಸಿಗಳನ್ನು ನಾಟಿಗೆ ಬಳಸಬಾರದು.
- 5 ಸೆಂ.ಮೀ. ಗಿಂತ ಹೆಚ್ಚು ಅಳವಾಗಿ ಸಸಿ ನಾಟಿ ಮಾಡಬಾರದು.
- ಕೂರಿಗೆ ಬಿತ್ತನೆ ಮಾಡಿದ ಗದ್ದೆಯಲ್ಲಿ 35-40 ದಿವಸಗಳ ನಂತರ "ಹೊಡೆತ" ಪದ್ಧತಿಯನ್ನು ಅನುಸರಿಸಬೇಕು. (ಸಾಕಷ್ಟು ಮಳೆಯಾಗಿ ನೀರು ನಿಂತಾಗ ಎಡಕುಂಟೆ ಹೊಡೆದು ದೋಣಿ ತಿಕ್ಕುವುದು)
- ಮುಂಗಾರಿನಲ್ಲಿ ಹೆಚ್ಚು ಮಳೆಯಾಗಿ ಸಕಾಲದಲ್ಲಿ ಬಿತ್ತನೆ ಮಾಡಲು ಆಗದಿದ್ದರೆ ಕೆಸರುಗಳೆ ಮಾಡಿ ಮೊಳಕೆ ತರಿಸಿದ ಬೀಜವನ್ನು ನೇರವಾಗಿ ಡ್ರಮ್ ಸೀಡರ್ನಿಂದ ನೀರಿನ ಮೇಲೆ ಹತೋಟಿ ಇರುವ ಗದ್ದೆಗಳಲ್ಲಿ ಬಿತ್ತಬಹುದು.
- ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಬದಲಾಯಿಸಿಕೊಳ್ಳಬೇಕು.
- ನೀರಾವರಿ ಸೌಲಭ್ಯವಿರುವ ಕೂರಿಗೆ ಬಿತ್ತನೆ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್ಗೆ ಶೇ. 33 ರಷ್ಟು ಹೆಚ್ಚು ಬೀಜ ಮತ್ತು ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಒದಗಿಸುವ ರಾಸಾಯನಿಕ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಸತುವಿನ ಸಲ್ಫೇಟ್ನೊಂದಿಗೆ ಹಾಕುವುದರಿಂದ ಭತ್ತದ ಇಳುವರಿಯನ್ನು ಹೆಚ್ಚಿಸಬಹುದು.
- ಪ್ರತಿ ಚದರ ಮೀಟರ್ ಕ್ಷೇತ್ರದಲ್ಲಿ 66 ಗುಣಿಗಳಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿ ಪ್ರತಿ ಹೆಕ್ಟೇರಿಗೆ 200 ಕಿ.ಗ್ರಾಂ. ಸಾರಜನಕ, 100 ಕಿ.ಗ್ರಾಂ ರಂಜಕ ಮತ್ತು 100ಕಿ.ಗ್ರಾಂ. ಪೊಟ್ಯಾಷ್ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ/ಸಾವಯವ/ಹಸಿರೆಲೆ ಗೊಬ್ಬರ (13 ಟನ್/ಹೆ) ಹಾಕುವುದರಿಂದ ಸ್ಥಿರ ಹಾಗೂ ಅಧಿಕ ಇಳುವರಿಯನ್ನು ಪಡೆಯುವುದಲ್ಲದೇ, ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು.
- Login to post comments
- 2678 reads