Submitted by naipictuasdharwad on Thu, 04/02/2010 - 16:28
Posted in
ನಾಟಿ ಮಾಡುವ ಪ್ರದೇಶ ಸಿದ್ದಪಡಿಸುವುದು
- ನಾಟಿ ಮಾಡುವುದಕ್ಕೆ 3 ವಾರ ಮುಂಚೆ ಹೆಕ್ಟೇರಿಗೆ 5-7 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಅಥವಾ 1 ಟನ್ ಕೋಳಿ ಗೊಬ್ಬರವನ್ನ ಮಣ್ಣಿನಲ್ಲಿ ಬೆರೆಸಬೇಕು.
- ಹಸಿರೆಲೆ ಗೊಬ್ಬರವನ್ನು ಒದಗಿಸುವುದಾದಲ್ಲಿ ಹೆಕ್ಟೇರಿಗೆ 10 ಟನ್ ಎಲೆ ಮತ್ತು ಎಳೆ ಕಾಂಡಗಳನ್ನು ಮಾತ್ರ ನಾಟಿಗೆ 3 ವಾರಗಳ ಮುಂಚೆ ಮಣ್ಣಿನಲ್ಲಿ ಬೆರೆಸಬೇಕು. ಹೆಚ್ಚು ಬಲಿತಿರುವ ಕಡ್ಡಿಗಳನ್ನು ಬೇರ್ಪಡಿಸಬೇಕು.
- ಜವಳು ಮಣ್ಣಿನ ಕ್ಷೇತ್ರಗಳಲ್ಲಿ ನೀರು ಬಸಿದು ಹೋಗಲು ಬಸಿಗಾಲುವೆ ತೆಗೆಯಬೇಕು.
- ಗೊಬ್ಬರಗಳನ್ನು ಹಾಕಿದ ಮೇಲೆ ನೀರು ಒಂದು ಮಡಿಯಿಂದ ಇನ್ನೊಂದು ಮಡಿಗೆ ಹೋಗದಂತೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು.
- Login to post comments
- 1910 reads