Submitted by naipictuasdharwad on Tue, 09/02/2010 - 11:48
Posted in
ಭತ್ತದಲ್ಲಿ ದುಂಡಾಣು ಮಚ್ಚೆ ರೋಗದ ಹಾನಿ ಮತ್ತು ಲಕ್ಷಣಗಳು
ರೋಗಣುಗಳಿಗೆ ಸೂಕ್ತವಾದ ವಾತಾವರಣ:
- ಒತ್ತಾಗಿ ನಾಟಿ ಮಾಡುವುದು
- ಹೆಚ್ಚಿನ ಪ್ರಮಾಣದಲ್ಲಿ ಸಾರಜನಕಯುಕ್ತ ಗೊಬ್ಬರಗಳನ್ನು ಕೊಡುವುದು
- ಮೋಡಕವಿದ ವಾತಾವರಣ
- ರೋಗಾಣುಗಳ ಆಶ್ರಯ ತಾಣ: ಬೀಜ, ಮಣ್ಣು ಅಥವಾ ಕೊಳೆತ ಗಿಡಗಳು ಮತ್ತು ಪಾರ್ಯಾಯ ಬೆಳೆಗಳು
ರೋಗದ ವಿವರ:
- ಬರುವ ಕಾಲ: ತೆಂಡೆ ಹೊಡಿಯುವ ಹಂತದಿಂದ ಕಾಳು ಕಟ್ಟುವ ಹಂತದವರೆಗೆ
- ಹಾನಿಯಾ ಪ್ರಮಾಣ: ಶೇ. 6-60 %
- ಪಾರ್ಯಾಯ ಬೆಳೆಗಳು: ಹುಲ್ಲು (ಲೀರ್ಸಿಯ ಸ್ಪಿಸಿಸ್ ಮತ್ತು ಸೈಪರಸ್ ರೊಟಾಂಡಸ್)
ರೋಗದ ಲಕ್ಷಣಗಳು:
- ಈ ಹಾನಿಯೂ ಎರಡು ಅಂತದಲ್ಲಿ ಬರುತ್ತದೆ
1. ಸೊರಗು ಹಂತ ಅಥವಾ ಕ್ರೆಸೆಕ್
- ತೆಂಡೆ ಹೊಡೆಯುವ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ
- ತೆಂಡೆಗಳು ಸಾಯುತ್ತವೆ ಮತ್ತು ಈ ಲಕ್ಷಣಗಳು ಕಾಂಡ ಕೊರೆಕದಿಂದ ಅದಂತೆ ಕಾಣುತ್ತದೆ
ಸೊರಗು ಹಂತ ಅಥವಾ ಕ್ರೆಸೆಕ್ ಲಕ್ಷಣಗಳು
2. ದುಂಡಾಣು ಮಚ್ಚೆ ಹಂತ
- ಎಲೆಯ ತುದಿಗೆ ಹಸಿರು ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತೆ
- ಚುಕ್ಕೆಗಳು ದೊಡ್ಡದಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ
- ಅಲೆಯಾಕಾರದ ತುದಿಗಳು
- ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು
- ಗರಿಗಳು ಒಣಗಿ ತುದಿ ಹೆಡೆಯಂತೆ ಬಾಗಿರುತ್ತದೆ
- ತೆನೆಗಳು ಒಣಗಿ ಕಾಳು ಕಟ್ಟುವುದಿಲ್ಲ
ದುಂಡಾಣು ಮಚ್ಚೆ ಹಂತ ಲಕ್ಷಣಗಳು
- Login to post comments
- 2085 reads