ಬೆಲೆ ಮುನ್ನೋಟ ಮತ್ತು ಮಾರುಕಟ್ಟೆ ತಯಾರಿ
ನಮ್ಮ ದೇಶದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಕೊಟ್ಟಿರುವಂತಹ ಮಹತ್ವವನ್ನು ಅವುಗಳ ಮಾರಾಟಕ್ಕೆ ನೀಡಿರುವದಿಲ್ಲ. ಹಾಗಾಗಿ ಬೆಳೆಯು ಕಟಾವಿಗೆ ಬರುವವರೆಗೆ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ರೈತನಿಗೆ ಬೆಳೆಯನ್ನು ಮಾರಾಟಕ್ಕೆ ತರುವಾಗ ಬೆಲೆ ಏನಾಗುವದೋ ಎಂಬ ಆತಂಕ ಸದಾ ಇರುತ್ತದೆ. ಇಂತಹ ಅಯೋಮಯ ಪರಿಸ್ಥಿತಿಯನ್ನು ಹೋಗಲಾಡಿಸಲು ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಕೃಷಿ ವ್ಯವಹಾರ ನಿರ್ವಹಣಾ ವಿಭಾಗದಲ್ಲಿ ಸ್ಥಾಪಿತವಾದ ದೇಶೀಯ ಹಾಗೂ ರಫ್ತು ಮಾರಾಟ ಮಾಹಿತಿ ಕೇಂದ್ರ ಸದಾ ಶ್ರಮಿಸುತ್ತಿದೆ.
ಉತ್ತರ ಕರ್ನಾಟಕದ ಎಲ್ಲ ಪ್ರಮುಖ ಬೆಳೆಗಳಿಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮುಂಬರುವ ತಿಂಗಳುಗಳಲ್ಲಿ ಇರಲಿರುವ ಬೆಲೆಯನ್ನು ವೈಜ್ಞಾನಿಕವಾಗಿ ಸಂಖ್ಯಾಶಾಸ್ತ್ರದ ವಿವಿಧ ಕಾಲಸರಣಿ ವಿಧಾನಗಳ ಮುಖಾಂತರ ಕಂಡು ಹಿಡಿದು, ಇನ್ನೂ ಅನೇಕ ವಿಧಾನಗಳ ಮೂಲಕ ಪರಿಶೀಲಿಸಿ ಅಂತಿಮವಾಗಿ ಮುನ್ನೋಟ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಈ ರೀತಿ ಅಂತಿಮಗೊಳಿಸಿದ ಮುನ್ನೋಟ ಬೆಲೆಯನ್ನು ವೃತ್ತಪತ್ರಿಕೆಗಳು,ರೇಡಿಯೋ,ದೂರದರ್ಶನ,ಮೊಬೈಲ ಸಂದೇಶಗಳು,ಕೃಷಿ ವಿಜ್ಞಾನ ಕೇಂದ್ರಗಳು, ಎ.ಪಿ.ಎಂ.ಸಿ ಮಾರುಕಟ್ಟೆಗಳು, ಕೃಷಿ ಇಲಾಖೆ ಮುಂತಾದ ಮಾಧ್ಯಮಗಳ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ಕಾಲಕಾಲಕ್ಕೆ ಪ್ರಕಟವಾಗುವ ಈ ಮಾಹಿತಿಯನ್ನು ನಿಖರತೆಯ ಪರೀಕ್ಷೆಗೆ ಒಳಪಡಿಸಿದಾಗ ಶೇಕಡಾ 94 ರಷ್ಟು ನಿಖರತೆ ಮುನ್ನೋಟ ಬೆಲೆ ಹಾಗೂ ನಿಜವಾದ ಬೆಳೆಯ ಮಧ್ಯ ಇರುವದು ತಿಳಿದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.
- bpkoti's blog
- Login to post comments
- 1424 reads