Skip to main content

ಬೀಜ ಸಂಗ್ರಹಣೆ, ಶೇಖರಣೆ ಮತ್ತು ಅವುಗಳ ಸಂರಕ್ಷಣೆ

ಬೀಜ ಸಂಗ್ರಹಣೆ, ಶೇಖರಣೆ ಮತ್ತು ಅವುಗಳಸಂರಕ್ಷಣೆ

ರಾಕೇಶ್. . ಮಠದ

ಸಹಾಯಕ ಪ್ರಾಧ್ಯಾಪಕರು-ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಬೀಜ ಘಟಕ, ಕೃ.ವಿ.ವಿ., ರಾಯಚೂರು

     ಬೀಜ ಮತ್ತು ಧಾನ್ಯಗಳ ಸಂರಕ್ಷಣೆ ಕೃಷಿಯ ಒಂದು ಪ್ರಮುಖ ಭಾಗವಾಗಿದೆ.  ಬೀಜ ಸಂಗ್ರಹಣೆ ರೈತರಿಗೆ ಮುಂದಿನ ಬೆಳೆಯನ್ನು ಉತ್ತಮರೀತಿಯಲ್ಲಿ ಬೆಳೆಯಲು ಸಹಾಯಮಾಡಿದರೆ ಅವುಗಳ ಸಂಗ್ರಹಣೆ ಅವರಿಗೆ ಮುಂದಿನ ಋತುವಿನಲ್ಲಿ ಬಿತ್ತನೆಗೆ ಅನುಕೂಲವಾಗುತ್ತದೆ. ಇನ್ನು ಧಾನ್ಯಗಳ ಸಂಗ್ರಹಣೆ ರೈತರಿಗೆ ಮತ್ತು ಅವರ ಕುಟುಂಬದವರಿಗೆ ವರ್ಷವಿಡೀ ಆಹಾರ ಭದ್ರತೆಯನ್ನು ನೀಡುತ್ತದೆ. ಸಾಮಾನ್ಯವಾಗಿ ರೈತರು ಬೀಜ ಮತ್ತು ಧಾನ್ಯ ಸಂರಕ್ಷಣೆಗಾಗಿ ಕೆಲ ಸಾವಯವ ಮತ್ತು ಅತಿ ಕಡಿಮೆ ಖರ್ಚಿನ ವಿಧಾನಗಳನ್ನು ಅನುಸರಿಸುತ್ತಾರೆ. ಕಡಿಮೆ ಖರ್ಚಿನ ಜೊತೆಗೆ ಈ ವಿಧಾನಗಳ ಅತಿ ಉಪಯುಕ್ತವಾಗಿವೆ. ಈ ಸಾಂಪ್ರದಾಯಕ ಮತ್ತು ಸಾವಯವ ವಿಧಾನಗಳನು ಈ ಕೆಳಗೆ ವಿವರಿಸಲಾಗಿದೆ.

ಕ್ರ.ಸಂ. ಬೆಳೆ  ಶೇಖರಣೆ / ಸಂರಕ್ಷಣಾ ವಿಧಾನ (ಬೀಜ)

1.          ಜೋಳ ಜೋಳದ ಬೀಜಗಳನ್ನು ಆಕಳ ಸಗಣಿಯ ಪುಡಿಯ ಜೊತೆ ಮಿಶ್ರಣ ಮಾಡಿ ಮುಂದಿನ ಬಿತ್ತನೆಗೆ ಇಡಲಾಗುತ್ತದೆ. ಸೆಗಣಿಯ ಹುಡಿ ಜೋಳದಲ್ಲಿರುವ ಹೆಚ್ಚುವರಿ ನೀರಿನ ಅಂಶವನ್ನು ಹೀರಿಕೊಂಡು ಸಂರಕ್ಷಿಸುತ್ತದೆ.

2.         ಕಡಲೆ ಕಡಲೆ ಬೀಜಗಳನ್ನು ಹುರಳಿಬೀಜದ ಮಿಶ್ರಣದಲ್ಲಿ ಇಟ್ಟರೆ (1:10) ಮುಂದಿನ ಬಿತ್ತನೆಯವರಿಗೆ ಸಂರಕ್ಷಿಸಬಹುದು.

3.         ತೊಗರಿ     ತೊಗರಿಬೀಜಗಳನ್ನು ಊರಿನ ಕೆರೆಯ ಮಣ್ಣಿನಿಂದ ಲೇಪನೆಮಾಡಿ ಇಟ್ಟರೆ ಬಹಳದಿನದವರೆಗೆ ಕೆಡದೆ ಇಡಬಹುದು 10 ಕೆಜಿ ಬೀಜಕ್ಕೆ 1 ಕೆಜಿ ಮಣ್ಣು ಬೇಕಾಗುತ್ತದೆ. ಲೇಪನೆಮಾಡಿದ ನಂತರ ಚೆನ್ನಾಗಿ ಒಣಗಿಸುವುದು ಉತ್ತಮ

4.         ದ್ವಿದಳ ಧಾನ್ಯಗಳ ಬೀಜ    ಈ ಬೀಜಗಳನ್ನು ಮಣ್ಣಿನ ಮಡಿಕೆಗಳಲ್ಲಿ ಬೂದಿ ಮತ್ತು ಬೇವಿನ ಎಲೆಗಳು ಅಥವಾ ಪುದಿನಾ ಸೊಪ್ಪು ಅಥವಾ ಬಜೆಯ ಬೇರಿಗಳ ಜೊತೆಗಿಟ್ಟಾಗ ಬಹಳ ದಿನಗಳವರೆಗೆ ಸಂರಕ್ಷಿಸಬಹುದು.

5.         ಜೋಳ / ಭತ್ತ     ಜೋಳ ಅಥವಾ ಭತ್ತದ ಬೀಜಗಳನ್ನು ಸೆಣಬಿನ ಚೀಲದಲ್ಲಿ ಗಂಟುಕಟ್ಟಿ ಬಣವೆಯ ಮಧ್ಯದಲ್ಲಿ ಇಟ್ಟರೆ ಯಾವುದೇ ಕೀಟ ಸೋಂಕಲಾರವು.

6.         ಹೆಸರು ಹೆಸರಿನ ಬೀಜಗಳನ್ನು ಬೂದಿಯ ಜೊತೆಗೆ ಮಿಶ್ರಣಮಾಡಿ ನಂತರ ಮಡಿಕೆಯನ್ನು ಸಗಣಿಯಿಂದ ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ ಸವರಿ ಗಾಳಿಯಾಡದಂತೆ ಮಾಡಿದರೆ ಬಹಳ ದಿನಗಳವರೆಗೆ ಕೆಡದಂತೆ ಇಡಬಹುದಾಗಿದೆ.

7.         ತೊಗರೆ     ತೊಗರಿ ಬೀಜಗಳನ್ನು ಗುಂಟುರ – ಮಣಸಿನಕಾಯಿ ಕಾರಪುಡಿಯೊಂದಿಗೆ ಮಿಶ್ರಣಮಾಡಿಟ್ಟರೆ ಕನಿಷ್ಟ ಒಂದು ವರುಷ ಕೆಡದಂತೆ ಇಡಬಹುದು.

8.         ಸೂರ್ಯಕಾಂತಿ     ಸೂರ್ಯಕಾಂತಿ ಬೀಜಗಳನ್ನು ಸೂರೆಕಾಯಿಯ ಒಣಗಿದ ಕಾಯಿಯಲ್ಲಿ ಶೇಖರಣೆ ಮಾಡಿದರೆ ಮುಂದಿನ ಬಿತ್ತನೆಯವರೆಗೆ ಕೆಡದಂತೆ ಇಡಬಹುದು.

 

ಕ್ರ.ಸಂ. ಬೆಳೆ  ಶೇಖರಣೆ / ಸಂರಕ್ಷಣಾ ವಿಧಾನ (ಧಾನ್ಯ)

1.          ದ್ವಿದಳಧಾನ್ಯಗಳು    ಕಾಳುಗಳನ್ನು ಕೊಯ್ಲಾದನಂತರ ಕಡು ಬಿಸಿಲಿನಲ್ಲಿ ಒಣಗಿಸಿ. ಪ್ಲಾಸ್ಟಿಕಿನ ಡ್ರಮ್ಮನಲ್ಲಿ ಶೇಖರಣೆ ಮಾಡಬೇಕು. ಪಾಸ್ಟಿಕಿನ ಡ್ರಮ್ಮಿನಲ್ಲಿ ಮೊದಲು ಮರಳಿನ ಪದರನ್ನು ಹಾಕಿ ನಂತರ ದಾನ್ಯ ಹಾಕಬೇಕು ಮೆಲೆ ದಪ್ಪನೆಯ ಮರಳಿನ ಪದರನ್ನು ಹಾಕಿ ಡ್ರಮ್ಮನ್ನು ಮುಚ್ಚಬೇಕು. ಕೀಟಗಳು ಮರಳನ್ನು ತೂರಿಹೋಗಲು ಇದರಿಂದ ಸಾಧ್ಯವಿಲ್ಲ. ಅಲ್ಲದೆ ಸಂತಾನ ಅಭಿವೃದ್ದಿ ಚಟುವಟಿಕೆ ಪೂರ್ತಿಯಾಗಿ ನಿಲ್ಲುತ್ತವೆ.

2.         ಗೋವಿನ ಜೋಳ, ಜೋಳ  ಗೋವಿನ ಜೋಳ ಅಥವಾ ಜೋಳದ ತೆನೆಗಳನ್ನು ಮನೆಯ ಗಾಳಿಯಾಡುವ ಪ್ರದೇಶದಲ್ಲಿ ಇಳಿಬಿಡಲಾಗುತ್ತದೆ. ಇದರಿಂದ ಬಹಳ ದಿವಸಗಳವರೆಗೆ ಧಾನ್ಯಗಳನ್ನು ಸಂರಕ್ಷಿಸಬಹುದು.

3.         ಜೋಳ / ರಾಗಿ ಮತ್ತು ದ್ವಿದಳ ಧಾನ್ಯಗಳು ಈಧಾನ್ಯಗಳನ್ನು ಬಿದಿರಿನಿಂದ ಮಾಡಿದ ಅಥವಾ ಮಡಿಕೆಗಳಲ್ಲಿ ಬೇವಿನ ಎಲೆಗಳ ಜೊತೆಗೆ ಇಟ್ಟರೆ ಬಹಳ ದಿವಸಗಳವರೆಗೆ ಸಂರಕ್ಷಣೆ ಮಾಡಬಹುದು (ಸಂಧೂಕ, ಕೊಠಿ, ಕಣಜಗಳನ್ನು ಇದಕ್ಕೆ ಬಳಸಬಹುದು)

4.         ಎಲ್ಲಾ ರೀತಿಯ ದಾನ್ಯಗಳು  ಈ ಧಾನ್ಯಗಳನ್ನು ಭೂಮಿಯಲ್ಲಿ ತೆಗ್ಗು ತೋಡಿ ಹಗೇವಿನಲ್ಲಿ ಸಂರಕ್ಷಿಸಬಹುದು. ಇಲ್ಲಿ ಧಾನ್ಯಗಳಿಗೆ ಯಾವುದೇ ರೀತಿಯ ಅಪಾಯವಾಗುವದಿಲ್ಲ. ಇಲ್ಲಿ ಗಾಳಿ ಮತ್ತು ತೇವಾಂಶ ನಿಯಂತ್ರಣದಲ್ಲಿರುತ್ತದೆ. ದಾನ್ಯಗಳನ್ನು ಇಟ್ಟು ಮಣ್ಣಿನಿಂದ ಗಾಳಿಬರದಹಾಗೆ ಮೆತ್ತಲಾಗುತ್ತದೆ.

5.         ಭತ್ತ ಅಥವಾ ಗೋಧಿ ‘ಕಛೇರಿ’ ಎಂಬ ಸಾಂಪ್ರದಾಯಕ ವಿಧಾನದಲ್ಲಿ ಭತ್ತ ಅಥವಾ ಗೋಧಿಯನ್ನು ಸಂರಕ್ಷಣೆ ಮಾಡಬಹುದು. ಇದರಲ್ಲಿ ಬತ್ತದ ಮೇವನ್ನು ಮಣ್ಣಿನಲ್ಲಿ ಕಲಸಿ ಮಡಿಕೆಯ ರೂಪ ಕೊಡಲಾಗುತ್ತದೆ. ಚೆನ್ನಾಗಿ ಗಾಳಿನಿಯಂತ್ರಣ ಮಾಡಿದರೆ ಬಹಳ ದಿವಸಗಳವರೆಗೆ ಧಾನ್ಯಗಳ ಸಂಗ್ರಹಣೆ ಸಾದ್ಯ.

6.         ದ್ವಿದಳ ಧಾನ್ಯಗಳು   ದ್ವಿದಳ ದಾನ್ಯಗಳನ್ನು ಸಾಸಿವೆ ಕಾಳಿನ ಎಣ್ಣೆಯಿಂದ ಸವರಿಟ್ಟರೆ ಧಾನ್ಯಗಳನ್ನು ಬಹಳದಿವಸಗಳವರೆಗೆ ಸಂಗ್ರಹಣೆ ಮಾಡಬಹುದು.

7.         ಗೋದಿ      ಗೋದಿಯ ಧಾನ್ಯಗಳಿರುವ ಚೀಲಗಳನ್ನು ಮೇವಿನ “ಖಣ”ದ  ಮದ್ಯ ಇಟ್ಟರೆ ಕೀಟಗಳ ಹಾವಳಿ ಕಡಿಮೆಯಾಗುತ್ತದೆ.

8.         ಜೋಳ ಜೋಳಗಳನ್ನು ಬಿಸಿಲಿಗೆ ಒಣಗಿಸದೆ ಬೆಳಗಿನ ಜಾವದ ಮುಂಜಾವಿನಲ್ಲಿ ಕಟ್ಟಿ ಚೀಲದಲ್ಲಿಟ್ಟರೆ ಕೀಟಗಳ ಬಾದೆಕಡಿಮೆ.

9.         ಎಲ್ಲ ಧಾನ್ಯಗಳು    ದಾನ್ಯಗಳನ್ನು ಭೂದಿಯ ಜೊತೆಗೆ ಮಿಶ್ರಣಮಾಡಿ ಸಂಗ್ರಹಣೆ ಮಾಡಬಹುದು.

10.         ಭತ್ತ  ಬತ್ತವನ್ನು ದೊಡ್ಡ-ಉಪ್ಪಿನ ಜೊತೆಗೆ ಮಿಶ್ರಣ ಮಾಡಿಟ್ಟರೆ ಬಹಳದಿವಸಗಳವರೆಗೆ ಸಂಗ್ರಹಣೆ ಮಾಡಬಹುದು.

11.         ಕಡಲೆ ಕಡಲೆಯನ್ನು ಧಾನ್ಯ ಮತ್ತು ಕಡಲೆ ಗಿಡಗಳ ಜೊತೆಗೆ ಸಂಗ್ರಹಣೆ ಮಾಡಿದಾಗ ಧಾನ್ಯದ ಬಣ್ಣ ಬದಲಾಗುವುಕೆಯನ್ನು ತಡೆಗಟ್ಟಬಹುದು.

 

0
Your rating: None

Please note that this is the opinion of the author and is Not Certified by ICAR or any of its authorised agents.