Submitted by naipagropediaraichur on Tue, 17/04/2012 - 15:58
Posted in
ದಾಳಿಂಬೆ ಬೆಳೆಯ ಸೊರಗು ರೋಗದ ನಿರ್ವಹಣಾ ಕ್ರಮಗಳು
- ದಾಳಿಂಬೆ ಸಸಿಗಳನ್ನು (4.5 ಥ 3.0 ಮೀ.) ಅಂತರದಲ್ಲಿ ನಾಟಿ ಮಾಡಬೇಕು.
- ರೋಗ ಪೀಡಿತ ಪ್ರತಿ ಗಿಡಕ್ಕೆ ನೆಲದಿಂದ ಮೇಲೆ ಎರಡು ಅಡಿ ಎತ್ತರದ ಕಾಂಡದ ಭಾಗದ ಸುತ್ತಲೂ 4 ಮಿ.ಲೀ. ಕ್ಲೋರಪೈರಿಫಾಸ್ 20 ಇ.ಸಿ. ಔಷಧದ ಜೊತೆಗೆ 2 ಗ್ರಾಂ ಕಾರ್ಬೆನ್‌ಡೆಜಿಮ್ 50 ಡಬ್ಲ್ಯೂ.ಪಿ. ಅಥವಾ 1 ಮಿ.ಲೀ. ಪ್ರೊಪಿಕೊನೋಜೋಲ್ 25 ಇ.ಸಿ. ಬೆರೆಸಿ ಕಾಂಡ ತೊಯ್ಯುವಂತೆ ಹಾಗೂ ಬುಡದ ಮಣ್ಣಿನಲ್ಲಿ ಸೇರುವಂತೆ ಚೆನ್ನಾಗಿ ಉಣಿಸಬೇಕು ಇದೇ ಉಪಚಾರವನ್ನು ಒಂದು ತಿಂಗಳ ನಂತರ ಮತ್ತೊಮ್ಮೆ ಕೊಟ್ಟು ಉಪಚರಿಸಬೇಕು ಹಾಗೂ ರೋಗ ಪೀಡಿತ ಗಿಡದ ಸುತ್ತಲಿರುವ ಆರೋಗ್ಯ ಪೂರ್ಣ ಗಿಡಗಳಿಗೂ ಹಾಕ ಬೇಕು.
- ಮೇಲಿನ ಕ್ರಮಗಳನ್ನು ಅನುಸರಿಸುವ ಪೂರ್ವದಲ್ಲಿ ಕನಿಷ್ಟ ಒಂದು ವಾರ ಮುಂಚೆ ಮತ್ತು ಉಪಚರಿಸಿದ ನಂತರ ಎರಡು ದಿನಗಳವರೆಗೆ ಗಿಡಗಳಿಗೆ ನೀರು ಉಣಿಸಬಾರದು.
- ಈ ಉಪಚಾರವನ್ನು ಬಾಧಿತ ಪ್ರದೇಶದಲ್ಲಿ ಮೇᆲಜೂನ್ ಹಾಗೂ ನವೆಂಬರᆲಡಿಸೆಂಬರ್ ತಿಂಗಳುಗಳಲ್ಲಿ ತಪ್ಪದೇ ಅನುಸರಿಸಬೇಕು.
- ಸಂಪೂರ್ಣವಾಗಿ ಒಣಗಿರುವ ಗಿಡಗಳನ್ನು ಬೇರುಸಹಿತ ಕಿತ್ತು ಸುಟ್ಟು ಹಾಕಬೇಕು.
- ರೋಗ ಪೀಡಿತ ಗಿಡಗಳನ್ನು ಕಿತ್ತು ಹಾಕಿದ ನಂತರ ರೋಗಪೀಡಿತ ಸಸ್ಯಗಳ ಭಾಗದಲ್ಲಿ ಫಾರ್ಮಾಲಿನ ದ್ರಾವಣವನ್ನು (300 ಮಿ.ಲೀ./10 ಲೀ. ನೀರಿಗೆ) ಪ್ರತಿ ಗಿಡಕ್ಕೆ ಹಾಕಿ ಪ್ಲಾಸ್ಟಿಕ್/ಪಾಲೀಥೀನ ಹಾಳೆಯಿಂದ ಗಟ್ಟಿಯಾಗಿ 15 ದಿನಗಳವರೆಗೆ ಮುಚ್ಚಿ ನಂತರ ರೋಗ ರಹಿತ ಸಸಿಗಳನ್ನು ನಾಟಿಮಾಡಬೇಕು.
- Login to post comments
- 827 reads