ದಾಳಿಂಬೆ ಬೆಳೆಯಲ್ಲಿ ಬರುವ ದುಂಡಾಣು ಅಂಗಮಾರಿ ರೋಗ
ಹಾನಿಯ ಲಕ್ಷಣಗಳು:
- ಈ ರೋಗವ್ರ ಎಲೆ, ಕಾಂಡ ಮತ್ತು ಕಾಯಿ (ಹಣ್ಣು) ಗಳ ಮೇಲೆ ಕಾಣಿಸಿಕೊಳ್ಳುತ್ತದೆ.
- ಎಲೆಯ ಮೇಲೆ ನೀರಿನಿಂದ ಕೂಡಿದ ಚುಕ್ಕೆಗಳು ಕಾಣಿಸುತ್ತವೆ. ನಂತರ ಈ ಚುಕ್ಕೆಗಳು ಕಪ್ಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ ನಂತರ ಎಲೆ ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ.
- ಈ ರೋಗವ್ರ ಕಾಂಡದ ಮೇಲೆ ಬಂದಾಗ ಕುಡಿಗಳು ಮೇಲಿನಿಂದ ಒಣಗಿ ಕಪ್ಪು ಮಚ್ಚೆಗಳು ಕಾಣುತ್ತವೆ. ರೋಗದ ತೀವ್ರತೆ ಹೆಚ್ಚಾದಂತೆ ಕಾಂಡದ ಭಾಗವ್ರ ಸೀಳುವದಲ್ಲದೆ ಇದರಿಂದ ರೋಗ ಪೀಡಿತ ಕಾಂಡ ಮುರಿದು ಬೀಳುತ್ತದೆ.
- ಹೂಗಳು ಉದುರಿ ಕೆಳಗೆ ಬೀಳುತ್ತವೆ.
- ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು ವೃದ್ಧಿಯಾಗಿ ಹಣ್ಣುಗಳ ಮೇಲ್ಮೈ ತುಂಬೆಲ್ಲಾ ಆವರಿಸಿ ಹಣ್ಣುಗಳು ಸೀಳುವಂತೆ ಹಾಗೂ ಹಣ್ಣುಗಳು ಕೊಳೆಯುವಂತೆ ಮಾಡುತ್ತದೆ.
ಎಲೆಗಳ ಮೇಲೆ ದುಂಡಾಣು ಅಂಗಮಾರಿ ರೋಗ ಲಕ್ಷಣ ರೋಗದ ತೀವ್ರತೆಯಿಂದ ಉದುರಿದ ಎಲೆಗಳು ಹೂವಿನ ಮೇಲೆ ದುಂಡಾಣು ಅಂಗಮಾರಿ ರೋಗ ಲಕ್ಷಣ
ಕಾಂಡದ ಭಾಗ ಕಪ್ಪಾಗುವುದು ವಿ ಅಥವಾ ವೈ ಆಕಾರದ ಚುಕ್ಕೆ ಹಾಗು ಬಿರುಕುಗಳು ರೋಗದ ಭಾದೆಯಿಂದ ಸೀಳಿದ ಹಣ್ಣುಗಳು
ಅನೂಕೂಲಕರ ವಾತಾವರಣ
1. ಕೀಟ ಬಾಧೆ ಹಾಗೂ ಉಷ್ಣ ಮಿಶ್ರಿತ ತೇವಾಂಶದ ವಾತಾವರಣವಿದ್ದಲ್ಲಿ ರೋಗ ತೀವ್ರವಾಗಿ ಹರಡಿ ಬಹಳ ಹಾನಿಯನ್ನುಂಟು ಮಾಡುತ್ತದೆ.
2. ಈ ರೋಗದ ತೀವ್ರತೆಯು ಮುಂಗಾರು ಹಂಗಾಮಿನ ಮಳೆಯನ್ನು ಅವಲಂಬಿಸಿದ್ದು ಜೂನ್ ನಿಂದ ಅಕ್ಟೋಬರ್ ಸಮಯದಲ್ಲಿ ಅಧಿಕವಾಗಿರುತ್ತದೆ.
3. ಹೆಚ್ಚು ಉಷ್ಣಾಂಶ ಮತ್ತು ಕಡಿಮೆ ತೇವಾಂಶ ಇದ್ದಂತಹ ವಾತಾವರಣದಲ್ಲಿ ರೋಗಾಣುಗಳು ವೃಧ್ದಿ ಹೊಂದುತ್ತವೆ.
4. ಗಾಳಿ ಮತ್ತು ಮಳೆಯ ಹನಿಗಳು ಬೀಳುವ ರಭಸಕ್ಕೆ ರೋಗಾಣುಗಳು ಚದುರುವ್ರದರಿಂದ ರೋಗದ ತೀವ್ರತೆ ಹೆಚ್ಚಾಗುತ್ತದೆ.
- Login to post comments
- 2098 reads