Submitted by naipagropediaraichur on Thu, 18/10/2012 - 10:59
Posted in
ತೊಗರಿ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಸುಧಾರಿತ ಕ್ರಮಗಳು
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್ ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
- ಚೆನ್ನಾಗಿ ನೀರು ಬಸಿದು ಹೋಗುವಂತಹ ಕಪ್ಪು ಭೂಮಿ ತುಂಬ ಸೂಕ್ತ.
- ಜೂನ್ ಜುಲೈ ತಿಂಗಳು ಬಿತ್ತನೆಗೆ ಒಳ್ಳೆಯದು.
- ಬೇರೆ ತಳಿಗಳಿಂದ ಮೂಲ ಬೀಜೋತ್ಪಾದನೆಗೆ 300 ಮೀಟರ್ ಮತ್ತು ಪ್ರಮಾಣಿತ ಬೀಜೋತ್ಪಾದನೆಗೆ 200 ಮೀಟರ್ ನಷ್ಟು ಅಂತರ ಕಾಪಾಡಬೇಕು.
- ಪ್ರತಿ ಹೇಕ್ಟರಿಗೆ 25 ಕಿ.ಗ್ರಾಂ ಸಾರಜನಕ, 50 ಕಿ.ಗ್ರಾಂ ರಂಜಕ 20 ಕಿ.ಗ್ರಾಂ ಗಂಧಕ ಮತ್ತು 15 ಕಿ.ಗ್ರಾಂ ಸತು ಒದಗಿಸುವ ಗೊಬ್ಬರ ಕೊಡಬೇಕು.
- ಬಿತ್ತುವ ಮುನ್ನ ಪ್ರತಿ ಕಿ.ಗ್ರಾಂ ಬೀಜವನ್ನು ಶೇ. 2 ರ ಸುಣ್ಣದ ಕ್ಲೋರೈಡ್ ದ್ರಾವಣದಲ್ಲಿ (20 ಗ್ರಾಂ/ಲೀಟರ್) ಒಂದು ಗಂಟೆ ಕಾಲ ನೆನಸಿ, ನಂತರ 7-8 ಗಂಟೆ ನೆರಳಿನಲ್ಲಿ ಒಣಗಿಸಿಬೇಕು ನಂತರ ಬೀಜಗಳನ್ನು ರೈಜೋಬಿಯಂ ಎಂಬ ಅಣುಜೀವಿ ಗೊಬ್ಬರ (375 ಗ್ರಾಂ/ಹೇಕ್ಟರ್ ಬೀಜಕ್ಕೆ) ರಂಜಕ ಕರಗಿಸುವ ಗೊಬ್ಬರ (375 ಗ್ರಾಂ/ಹೇಕ್ಟರ್) ಬೀಜೋಪಚಾರ ಮಾಡಬೇಕು. ನೆಟೆ ರೋಗ ಬರುವ ಜಮೀನಿನಲ್ಲಿ ಟ್ರೈಕೋಡರ್ಮ ಎಂಬ ಶಿಲಿಂದ್ರ ನಾಶಕದಿಂದ (4 ಗ್ರಾಂ/ಪ್ರತಿ ಕಿ.ಗ್ರಾಂ) ಬೀಜೋಪಚಾರ ಮಾಡಿ ಬಿತ್ತುವ್ರದು ಉತ್ತಮ.
- ಬೀಜ ಮತ್ತು ರಸ ಗೊಬ್ಬರಗಳನ್ನು ಏಕಕಾಲಕ್ಕೆ ಕೂರಿಗೆಯಿಂದ ಬೀಜೋಪಚಾರ ಮಾಡಿದ ಬೀಜಗಳನ್ನು ಬಿತ್ತಬೇಕು.
- ತೊಗರಿಯನ್ನು ತಳಿ ಮತ್ತು ಮಣ್ಣಿನ ಆದಾರದ ಮೇಲೆ 4-6 ಅಡಿಗಳ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಲ್ಲಿ ಬಿತ್ತಬೇಕು.
- ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ಪದ್ದತಿಗಳನ್ನು ಅನುಸರಿಸುವ್ರದು.
- ಬೆಳೆಯ ವಿವಿಧ ಹಂತಗಳಲ್ಲಿ ತಾಕಿನಲ್ಲಿ ಕಂಡುಬರುವ ಬೆರೆಕೆ ಗಿಡಗಳನ್ನು ಅವ್ರ ಹೂ ಬಿಡುವ ಮೊದಲ ಅಥವಾ ಹೂ ಬಿಟ್ಟ ತಕ್ಷಣ ಗುರುತಿಸಿ ಕಿತ್ತು ಹಾಕಬೇಕು.
- ಬಿತ್ತನೆ ಮಾಡಿದ 50 ದಿನಗಳ ನಂತರ ಗಿಡದ ಮೇಲಿನ 2 ಇಂಚು ಕುಡಿಯನ್ನು ಚಿವ್ರಟುವ್ರದರಿಂದ ಹೆಚ್ಚು ಕವಲುಗಳು ಬರುವ್ರದರಿಂದ ಅಧಿಕ ಇಳುವರಿ ಪಡೆಯಬಹುದು.
- ಬೆಳೆಯನ್ನು ಯಂತ್ರದಿಂದ ಕಟಾವ್ರ ಮಾಡುವ ಮೊದಲು ಯಂತ್ರವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಬೀಜಕ್ಕೆ ಯಾವ್ರದೇ ಗಾಯವಾಗದಂತೆ ಎಚ್ಚರವಹಿಸಬೇಕು.
- Login to post comments
- 1539 reads