ಗೂಡು ಮಾರು ಹುಳು ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು
ಕೀಟದ ವಿವರ
ತತ್ತಿ: 50ತತ್ತಿಗಳನ್ನು ಒಂದೊಂದಾಗಿ ಅಥವಾ ಗುಂಪಾಗಿ ಎಲೆಯ ಹಿಂಭಾಗ ಅಥವಾ ಕಳೆಗಳ ಮೇಲೆ ಇಡುತ್ತವೆ.
ಮರಿಹುಳು: ಹಸಿರು ಬಣ್ಣ ಹೊಂದಿರುತ್ತದೆ.
ಕೋಶಾವಸ್ಥೆ:ಎಲೆಯ ಕೊಳವೆಯಲ್ಲಿ ಕೋಶವನ್ನು ಇಡುತ್ತದೆ.
ಪ್ರೌಢ: ಪ್ರೌಢ ಪತಂಗವು ಬಿಳಿ ಬಣ್ಣದ ದೇಹ ಹೊಂದಿದ್ದು, ರೆಕ್ಕೆಗಳ ಮೇಲೆ ಕಂದು ಬಣ್ಣದ ಗೆರೆಗಳಿರುತ್ತೆ.
ಜೀವನ ಚಕ್ರ :18-20 ದಿನ
ಮರಿ ಹುಳು ಅಪ್ಸರೆ ಕೀಟ
ಹಾನಿ ಮತ್ತು ಲಕ್ಷಣಗಳು
ಹಾನಿಯ ಹಂತ: ಮರಿಹುಳು- ಎಲೆಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆ ಮಾಡುತ್ತವೆ.
ಅದರೊಳಗಿನ ಎಲೆಯ ಕೆಳಭಾಗದ ಹಸಿರು ಭಾಗವನ್ನು ಕೆರೆದು ತಿನ್ನುವುದು.
ಲಕ್ಷಣ:
ಗರಿಗಳ ಕೊಳವೆಗಳು ನೀರಿನಲ್ಲಿ ತೇಲುವುದು
ಗರಿಗಳ ಮೇಲೆ ಏಣಿಯಾಕಾರದ ಬಿಳಿ ಮಚ್ಚೆಗಳು.
ಕೆಲವೊಮ್ಮೆ ಗರಿಗಳ ನಡುದಿಂಡು ಮಾತ್ರ ಉಳಿದಿರುತ್ತವೆ.
ಏಣಿಯಾಕಾರದ ಬಿಳಿ ಮಚ್ಚೆಗಳು ಗರಿಗಳ ಕೊಳವೆ
- Login to post comments
- 1858 reads