ಕಡಲೆ ಬೆಳೆ ಬೀಜೋಪಚಾರ
ಬೀಜ ಮತ್ತು ಮಣ್ಣಿನಲ್ಲಿರುವ ಶಿಲೀಂದ್ರ ರೋಗಾಣುಗಳನ್ನು ನಾಶ ಮಾಡಲು ಬೀಜಗಳನ್ನು (2 ಗ್ರಾಂ ಥೈರಾಮ್ 1 ಗ್ರಾಂ ಕಾರ್ಬನ್ಡೈಜಿಮ್ ಪ್ರತಿ ಒಂದು ಕೆಜಿ ಬೀಜಕ್ಕೆ) ಶೀಲಿಂಧ್ರನಾಶಕಗಳಿಂದ ಉಪಚರಿಸಬೇಕು. ಗಿಡಗಳಿಗೆ ರಂಜಕದ ಲಭ್ಯತೆ ಹೆಚ್ಚಿಸಲು ರಂಜಕ ಕರಗಿಸುವ ಅಣುಜೀವಿಗಳನ್ನು ಉಪಯೋಗಿಸಬೇಕು. ಹೊಲದಲ್ಲಿ ಮೊದಲನೆಯ ಬಾರಿಕೆ ಕಡಲೆಯನ್ನು ಬೆಳೆಯುತ್ತಿದ್ದರೆ, ರೈಜೋಬಿಯಂ ಜೀವಾಣುವನ್ನು ಶಿಫಾರಸ್ಸು ಮಾಡಿದಂತೆ ಬೀಜಗಳನ್ನು ಮೊದಲಿಗೆ ಶೀಲಿಂಧ್ರನಾಶಕಗಳಿಂದ ನಂತರ ಪಿಎಸ್ಬಿ ಮತ್ತು ರೈಜೋಬಿಯಂ ನಿಂದ ಉಪಚರಿಸಬೇಕು. ಜೀವಾಣುನಿಂದ ಉಪಚರಿಸಿದ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಆದಷ್ಟು ಬೇಗನೆ ಬಿತ್ತಬೇಕು. ಒಂದುವೇಳೆ ಬೀಜಗಳನ್ನು ಕೀಟನಾಶಕಗಳಿಂದ ಉಪಚರಿಸಬೇಕಾದಲ್ಲಿ ಮೊದಲಿಗೆ ಕೀಟನಾಶಕಗಳಿಂದ ನಂತರ ಶೀಲಿಂಧ್ರನಾಶಕಗಳಿಂದ ಮತ್ತು ಕೊನೆಗೆ ರೈಜೋಬಿಯಂ ಜೀವಾಣುನಿಂದ ಅಥವಾ ಪಿಎಸ್ಬಿ ನಿಂದ ಉಪಚರಿಸಬೇಕು. ಅಥವಾ ಬೀಜ ಚೀಲದ ಮೇಲಿರುವ ಸೂಚನೆಗಳನ್ನು ಪಾಲಿಸಬೇಕು.
Source: ICRISAT, Hyderabad & UAs, Dharwad
- Login to post comments
- 1388 reads