Skip to main content

Please note that this site in no longer active. You can browse through the contents.

ಕಡಲೆ ಬೆಳೆಯ ಸುಧಾರಿತ ಬೀಜೋತ್ಪಾದನೆ ತಾಂತ್ರಿಕತೆಗಳು

ಕಡಲೆ ಬೆಳೆಯ ಸುಧಾರಿತ ಬೀಜೋತ್ಪಾದನೆ ತಾಂತ್ರಿಕತೆಗಳು

  • ಇದು ಚಳಿಗಾಲದ ಬೆಳೆಯಾಗಿದ್ದರಿಂದ ಅಕ್ಟೋಬರ್‌ ಮಧ್ಯ ಭಾಗವ್ರ ಬಿತ್ತನೆಗೆ ಸೂಕ್ತ  ಸಮಯ.
  • ಬಿತ್ತನೆಗೆ ದೇಶಿ ತಳಿಗಳಲ್ಲಿ 62.5 ಕಿ.ಗ್ರಾಂ ಮತ್ತು ಕಾಬೂಲಿ ತಳಿಗಳಲ್ಲಿ 75-85 ಕಿ.ಗ್ರಾಂ ಬೀಜವನ್ನು ಪ್ರತಿ ಹೇಕ್ಟರಿಗೆ ಉಪಯೋಗಿಸಬೇಕು.
  • ಬಿತ್ತುವ ಮುನ್ನ ಪ್ರತಿ ಕಿ.ಗ್ರಾಂ ಬೀಜಕ್ಕೆ 7.5 ಗ್ರಾಂ ರೈಜೊಬಿಯಂ ಮತ್ತು 7.5 ಗ್ರಾಂ  ರಂಜಕ ಕರಗಿಸುವ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
  • ಬಿತ್ತನೆಗೆ ಪ್ರತಿ ಹೇಕ್ಟರಿಗೆ 10 ಕಿ.ಗ್ರಾಂ ಸಾರಜನಕ ಮತ್ತು 25 ಕಿ.ಗ್ರಾಂ ರಂಜಕ  ಮಳೆಯಾಶ್ರಿತ ಬೆಳೆಗೆ ಮತ್ತು 25 ಗ್ರಾಂ ಸಾರಜನಕ ಮತ್ತು 50 ಕಿ.ಗ್ರಾಂ ರಂಜಕ ನೀರಾವರಿ ಬೆಳೆಗೆ ಉಪಯೋಗಿಸಬೇಕು.
  • ಬೇರೆ ತಳಿಗಳ ತಾPÀÄಗಳಿಂದ ಮೂಲ ಬೀಜೋತ್ಪಾದನೆಯಲ್ಲಿ 10 ಮೀಟರ್‌ ಮತ್ತು  ಪ್ರಮಾಣಿತ ಬೀಜೋತ್ಪಾದನೆ ಯಲ್ಲಿ 5 ಮೀಟರ್‌ ಗಳಷ್ಟು ಅಂತರ ಕಾಪಾಡಬೇಕು.
  • ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸಿ.
  • ಬೆಳೆಯಲ್ಲಿ ಕಂಡುಬರುವ ಬೆರೆಕೆ ಮತ್ತು ರೋಗ ಪೀಡಿತ ಗಿಡಗಳನ್ನು ವಿವಿಧ ಹಂತದಲ್ಲಿ ತಪ್ಪದೆ ಕಿತ್ತುಹಾಕಬೇಕು.
  • ಬೀಜಗಳು ಚೆನ್ನಾಗಿ ಬಲಿತ ಮೇಲೆ ಕಟಾವ್ರ ಮಾಡಬೇಕು.
  • ಬೀಜಗಳನ್ನು ಚೆನ್ನಾಗಿ ಒಣಗಿಸಿ, (ಶೇ. 8  ಕ್ಕಿಂತ ಕಡಿಮೆ ತೇವಾಂಶ ವಿರುವಂತೆ) 300 ಗೇಜಿನ ಪಾಲಿಧೀನ್‌ ಪದರವ್ರಳ್ಳ ಗೋಣಿ ಚೀಲಗಳಲ್ಲಿ ಶೇಖರಿಸುವ್ರದರಿಂದ ಬೀಜದ  ಗುಣಮಟ್ಟ ಉತ್ತಮವಾಗಿ ಕಾಪಾಡಬಹುದು.

  Source: ಡಾ. ಬಸವೇಗೌಡ ಮತ್ತು  ಶ್ರೀ.ಜಿ.ವೈ.ಲೋಕೇಶ್‌

              ಬೀಜ ಆಧಿಕಾರಿಗಳು  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ

0
Your rating: None