ಕಡಲೆ ಬೆಳೆಯಲ್ಲಿ ಬೆರಕೆ ತೆಗೆಯುವಿಕೆ
ಬೀಜೋತ್ಪಾದನೆ ಕ್ಷೇತ್ರಗಳನ್ನು ಸರಿಯಾಗಿ ಸಮೀಕ್ಷಿಸಿ ಬೇಡವಾದ ಗಿಡಗಳನ್ನು ತೆಗೆದುಹಾಕುವ್ರದಕ್ಕೆ ಬೆರಕೆ ತೆಗೆಯುವಿಕೆ ಎನ್ನುವರು. ಇದನ್ನು ಮಾಡುವ್ರದರಿಂದ ತಳಿಯ ಶುದ್ಧತೆ ಕಾಪಾಡುವ್ರದಷ್ಟೇ ಅಲ್ಲದೇ ಬೀಜಗಳಿಂದ ಬರತಕ್ಕಂತಹ ರೋಗಗಳನ್ನು ತಡೆಗಟ್ಟಬಹುದು. ಬೇರೆ ಬೆಳೆಯ ಗಿಡಗಳನ್ನು, ಕಳೆಯನ್ನು, ರೋಗ ತಗುಲಿದ ಗಿಡಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಹಾಕಬೇಕು.
ಭೌತಿಕ ವ್ಯತ್ಯಾಸಗಳ ಆಧಾರದ ಮೇಲೆ ಉತ್ತಮ, ಮಧ್ಯಮ ಮತ್ತು ಬೇಡವಾದ ಬೀಜಗಳೆಂದು ವರ್ಗೀಕರಿಸಲಾಗುತ್ತದೆ. ಮೊದಲಿಗೆ ಬೀಜಗಳನ್ನು ತೂರುವದು/ ಕೇರುವ್ರದರ ನಂತರ ಸಾಣಿಗೆ ಹಿಡಿಯುವದರ ಮೂಲಕ ಸ್ವಚ್ಛಗೊಳಿಸಿ ವರ್ಗೀಕರಿಸಬೇಕು.
Source:ICRISAT,Hyderabad & UAS,Dharwad
- Login to post comments
- 1046 reads