ಕಡಲೆ ಬೆಳೆಯಲ್ಲಿ ತುಕ್ಕು ರೋಗ/ ಭಂಡಾರ ರೋಗ (ಯೂರೋಮೈಸಿಸ್ ಸೈಸರ್ ಎರಿಯಾಟಿನಿ)
ಇತ್ತೀಚಿನ ದಿನಗಳಲ್ಲಿ ಕಡಲೆಯಲ್ಲಿ ಕಂಡುಬರುವ ರೋಗಗಳಲ್ಲಿ ತುಕ್ಕು ರೋಗವ್ರ ಮುಖ್ಯವಾಗಿ ಕಾಣಿಸಿಕೊಂಡಿದೆ. ಈ ರೋಗವ್ರ ಗಾಳಿಯಿಂದ ಹರಡುವ ಶಿಲೀಂದ್ರದಿಂದ ಬರುತ್ತದೆ ಮತ್ತು ಬೆಳೆಯನ್ನು ಸಂಪೂರ್ಣವಾಗಿ ನಾಶಮಾಡಬಲ್ಲದು. ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಇರುವ ಪರಿಸ್ಥಿತಿಯಲ್ಲಿ ಈ ರೋಗವ್ರ ಎಲೆಯ ಕೆಳಭಾಗದಲ್ಲಿ ಸಣ್ಣ ಚುಕ್ಕೆಗಳಿಂದ ಪ್ರಾರಂಭವಾಗುತ್ತದೆ. ಕರಮೇಣವಾಗಿ ಈ ಚುಕ್ಕೆಗಳು ಕಣ್ಣಿನಾಕಾರದ ದೊಡ್ಡ ಚುಕ್ಕೆಗಳಾಗಿ ಮಾರ್ಪಾಡಾಗುತ್ತವೆ. ಈ ಹಂತದಲ್ಲಿ ಎಲೆಗಳ ಮೇಲೆ ಕೈಯಾಡಿಸಿದಾಗ ಕಂದುಬಣ್ಣದ ಪುಡಿಯು ಕೈಗೆ ಹತ್ತುತ್ತದೆ. ರೋಗದ ತೀವ್ರಾವಸ್ಥೆಯಲ್ಲಿ, ಬೆಳೆಯು ಸಂಪೂರ್ಣವಾಗಿ ಕಂದು ಬಣ್ಣದ ಭಂಡಾರದಿಂದ ಆವರಿಸಿಕೊಳ್ಳುತ್ತದೆ.
ತುಕ್ಕು ರೋಗ
Source:ICRISAT,Hyderabad & UAS,Dharwad
- Login to post comments
- 1697 reads