ಕಡಲೆ ಬೆಳೆಯಲ್ಲಿ ಗೆದ್ದಲು ಹುಳು ನಿಯಂತ್ರಣ
ಬಿತ್ತುವಾಗ ಸಾಲುಗಳ ನಡುವೆ ಥಿಮೇಟ್ 10 ಗ್ರಾಂ. ಅಥವಾ ಕಾರ್ಬೋಫ್ಯುರಾನ್ 3 ಗ್ರಾಂ. ಅಥವಾ ಕ್ಲೋರೊಪೈರೀಫಾಸ್ 20 ಇಸಿ 12.5 ಎಂ.ಎಲ್. ಪ್ರತಿ ಕೆಜಿ. ಬೀಜಗಳಿಗೆ ಬೀಜೋಪಚಾರ ಮಾಡಬೇಕು. ಬೀಜೋಪಚಾರ ಮಾಡುವ್ರದರಿಂದ ಬಿತ್ತಿದ 30 ದಿನಗಳ ವರೆಗೆ ರಕ್ಷಣೆ ಸಿಗುತ್ತದೆ. ಖುಷ್ಕಿಯ ಬೆಳೆಯಲ್ಲಿ ರಾಸಾಯನಿಕ ಉಪಯೋಗವ್ರ ಕಷ್ಟಕರ ಮತ್ತು ದುಬಾರಿಯಾಗುತ್ತದೆ. ಗೆದ್ದಲು ಹುಳಗಳ ಹುತ್ತಗಳನನು ಕೆಡಿಸಿ ನಂತರ ಅದಕ್ಕೆ ಪ್ರತಿ ಲೀಟರ್ ನೀರಿಗೆ 10 ಮಿ.ಲೀ. ಕ್ಲೋರೊಪೈರಿಫಾಸ್ ನಿಂದ ನೆನೆಸಿದರೆ ಹುತ್ತಗಳನ್ನು ನಾಶ ಮಾಡಬಹುದು. ಅಲ್ಲದೇ, ಗಿಡಗಳ ಅವಶೇಷವನ್ನು, ಕಸವನ್ನು ಹೊಲದ ಸುತ್ತಮುತ್ತಲಿರುವ ಗೆದ್ದಲು ಹುತ್ತವನ್ನು ನಾಶ ಮಾಡುವದರ ಮೂಲಕ ಗೆದ್ದಲಿನ ಸಮಸ್ಯೆ ಕಡಿಮೆ ಮಾಡಬಹುದು. ಸರಿಯಾದ ಸಮಯದಲ್ಲಿ ಕೊಯ್ಲು ಮಾಡವದು ಕೂಡ ಅಷ್ಟೇ ಅವಶ್ಯವಾಗಿದೆ.
Source: ICRISAT,Hyderabad & UAS, Dharwad
- Login to post comments
- 1449 reads