ಕಡಲೆ ಬೆಳೆಯಲ್ಲಿ ಕಾಯಿಕೊರಕ ಕೀಟದ ನಿರ್ವಹಣೆ
ಸಮಗ್ರ ಕೀಟ ನಿರ್ವಹಣೆ
ರೋಧಕ ತಳಿಗಳು ಇಲ್ಲದ ಕಾರಣ ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಸಮಗ್ರ ಕೀಟ ನಿಯಂತ್ರಣವನ್ನು ಶಿಫಾರಸ್ಸು ಮಾಡಲಾಗಿದೆ. ಇದು ಪರಿಸರ ಸ್ನೇಹಿಯೂ ಆಗಿದೆ. ಇದರಿಂದ ಪರಿಸರದಲ್ಲಿರುವ ಹುಳುವಿನ ನೈಸರ್ಗಿಕ ವೈರಿಗಳನ್ನು ಕಾಪಾಡಿ ಹುಳದ ನಿಯಂತ್ರಣ ಮಾಡಬಹುದು. ಅಲ್ಲದೇ, ಕೀಟನಾಶಕಗಳನ್ನು ಉಪಯೋಗಿಸಬಹುದು.ಹುಳುವಿನ ಸಂಖ್ಯೆ ನಿಯಂತ್ರಣ
ಪರಭಕ್ಷ ಕೀಟ ಬಲೆಯಿಂದ ಹುಳುವಿನ ಸಂಖ್ಯೆ ಗಮನಿಸಬಹುದು. ಬೆಳೆಯ ಸ್ಥಿತಿ ಮತ್ತು ಹುಳುವಿನ ಚಟುವಟಿಕೆಯ ಮೇಲೆ ಈ ಬಲೆಗಳನ್ನು ಬೇರೆ ಬೇರೆ ಎತ್ತರಗಳಲ್ಲಿ ಇಡಬಹುದು ಇಂತಹ ಬಲೆಗಳು ವಿವಿಧ ಆಕಾರ ಮತ್ತು ಬಣ್ಣಗಳಲ್ಲಿ ಸಿಗುತ್ತವೆ. ಈ ಬಲೆಗಳನ್ನು ಕಡಲೆಯಲ್ಲಿ ೧ ಮೀ ಎತ್ತರದಲ್ಲಿ ಬಿತ್ತಿದ ನಂತರ ಹೊಲದಲ್ಲಿ ಇಡಬೇಕು.
ಪ್ರತಿ ದಿನ ಹುಳುವಿನ ಸಂಖ್ಯೆಗಳ ಮೇಲೆ ಗಮನವಿಡಬೇಕು. ಥ್ರೆಶ್‌ಹೋಲ್ಡ್ ಮಟ್ಟವ್ರ ಪ್ರತಿ ಗಿಡಕ್ಕೆ ೧ᆲ೨ ಮರಿಹುಳಗಳನ್ನು ಎಣಿಸಲು, ಪ್ರತಿ ಹೇಕ್ಟೇರಿಗೆ ಅತ್ಯಾಧಿಕವಾಗಿ ೧೦ ಗಿಡಗಳನ್ನು ಪರಿಶೀಲಿಸಬೇಕು, ನಂತರ ಅದರ ಸರಾಸರಿ ತೆಗೆದು ಥ್ರೆಶ್‌ಹೋಲ್ಡ್ ಮಟ್ಟವನ್ನು ನಿರ್ಧರಿಸಬೇಕು.ಹತೋಟಿ ವಿಧಾನ
Source: ICRISAT, Hyderabad &UAS, Dharwad
- ಅಲ್ಪಾವಧಿ ತಳಿಗಳನ್ನು ಮುಂಚಿತವಾಗಿ ಬಿತ್ತನೆ ಮಾಡುವದರಿಂದ ಕಾಯಿ ಕೊರಕ ಹುಳುವಿನ ಬಾಧೆಯನ್ನು ಕಡಿಮೆ ಮಾಡಬಹುದು ಅಥವಾ ತಪ್ಪಿಸಬಹುದು.
- ಕೊತಂಬರಿಯನ್ನು ಕಡಲೆಯಲ್ಲಿ ಅಂತರ ಬೆಳೆಯಾಗಿ ಉಪಯೋಗಿಸಿದರೆ, ಕಾಯಿಕೊರಕ ಹುಳುವನ್ನು ನೈಸರ್ಗಿಕವಾಗಿ ಹತೋಟಿಯಲ್ಲಿಡಬಹುದು.
- ಹುಳುಗಳನ್ನು ತಿನ್ನುವ ಪಕ್ಷಿಗಳು ಬಂದು ಕೂಡಲು ಹೊಲದಲ್ಲಿ ಅಲ್ಲಲ್ಲಿ ಕವಲೊಡೆದು ಅಡ್ಡ ಕಂಬಗಳನ್ನು ನೆಡಬೇಕು.
- ಬೆಸಿಲಸ್ ಥುರಂಜೆನೆಸಿಸ್ (ಬಿ.ಟಿ.), ಎನ್.ಪಿ.ವಿ., ಮೇಟಾರೈಸಿಯಮ್ ಎನಿಸೋಪ್ಲಿಯಾ ಇತ್ಯಾದಿಗಳನ್ನು ಉಪಯೋಗಿಸುವದರಿಂದ ಹುಳುಗಳನ್ನು ಹತೋಟಿಯಲ್ಲಿಡಬಹುದು ಮತ್ತು ಇವ್ರ ಮಾನವರಿಗೂ ಮತ್ತು ಪರಿಸರಕ್ಕೂ ಹಾನಿಕಾರಕವಲ್ಲ.
- ಕಾಯಿಕೊರಕದ ನಿಯಂತ್ರಣಕ್ಕಾಗಿ ಬಿಟಿಯನ್ನು ಹೊಂದಿರುವ ರಸಾಯನಿಕವನ್ನು ಪ್ರತಿ ಹೆಕ್ಟೇರಿಗೆ ಒಂದು ಕೆಜಿಯಂತೆ ಸಿಂಪಡಿಸಬೇಕು.
- ಹುಳುವಿನ ಸಂಖ್ಯೆಯು ಥ್ರೆಶಹೋಲ್ಡ್ ಮಟ್ಟವನ್ನು ಮುಟ್ಟಿದಾಗ ಎನ್.ಪಿ.ವಿ. 250 ಎಲ್.ಇ. ಅಥವಾ ಸಸಿ ಹುಟ್ಟಿ 15 ದಿನಗಳ ನಂತರ 5% ಬೇವಿನ ಕಾಯಿ ರಸದಿಂದ ಸಿಂಪಡಿಸಿದರೆ, ಈ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
- ಮೇಲಿನ ಯಾವ್ರದೇ ವಿಧಾನಗಳು ಪರಿಣಾಮಕಾರಿಯಾಗದಿದ್ದಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಉಪಯೋಗಿಸಬಹುದು. ಇಂಡಾಕ್ಸಿಕಾರ್ಬ ಪ್ರತಿ ಹೆಕ್ಟೇರಿಗೆ 70 ಎಂ.ಎಲ್. ಎ.ಐ., ಸ್ಪಿನೋಸಾಡ 45 ಎಂ.ಎಲ್. ಎ.ಐ. ಪ್ರತಿ ಹೆಕ್ಟೇರಿಗೆ ಬಳಸಬೇಕು.
- Login to post comments
- 1428 reads