ಕಡಲೆ ಕಾಯಿ ಕೊರಕ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು
ಕೀಟದ ವಿವರ :
- ಹಳದಿ ಬಣ್ಣದ ಪತಂಗಗಳು
ರೆಕ್ಕೆ:
- ಮುಂದಿನ ರೆಕ್ಕೆಯಲ್ಲಿ "ಯು" ಆಕಾರದ ಕರಿ ಚುಕ್ಕೆ
- ಹಿಂದಿನ ರೆಕ್ಕೆ ಕರಿಯ ಅಂಚನ್ನು ಹೊಂದಿರುತ್ತದೆ
ತತ್ತಿ :
- ಸಂಖ್ಯೆ: 500-1000 ತತ್ತಿ (ಒಂದು ಹೆಣ್ಣು ಪತಂಗ)
- ಆಕಾರ: ಹಳದಿ ಬಣ್ಣ, ದುಂಡಾಗಿದ್ದು, ಸುತ್ತಲೂ ದಿಂಡುಗಳಿಂದ ಕೂಡಿರುತ್ತದೆ
- ಇಡುವ ಜಾಗ: ತತ್ತಿಯನ್ನು ಒಂದೊಂದಾಗಿ ಎಲೆ, ಮೊಗ್ಗು, ಕುಡಿ, ಹೂವು ಮತ್ತು ಎಳೆ ಕಾಯಿಗಳು
- ಕೋಶಾವಸ್ಥೆ: ಮಣ್ಣಿನಲ್ಲಿ
ತತ್ತಿ ಮರಿಹುಳು ಕೋಶಾವಸ್ಥೆ ಪತಂಗಗಳು
ಹಾನಿಯ ಲಕ್ಷಣಗಳು:
ಹಾನಿ:
- ಹಾನಿಯ ಹಂತ: ಮರಿಹುಳು
- ಮರಿಹುಳು ಪ್ರಾರಂಭದಲ್ಲಿ ಎಲೆ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ.
- ಹೂವು, ಮೊಗ್ಗು, ಮತ್ತು ಕಾಯಿಗಳನ್ನು ಕೊರೆಯುತ್ತದೆ.
- ಕೊನೆಯ ಮರಿಹುಳು ಕಾಯಿಗಳನ್ನು ಕೊರೆದು ಕಾಳನ್ನು ತಿನ್ನುತ್ತದೆ.
- ಮೊಗ್ಗು ಮತ್ತು ಹೂಗಳ ಉದುರುತ್ತದೆ.
- ಕಾಳುಕಟ್ಟುವುದು ಕಡಿಮೆ.
- ಶೇ 50-70 ರಷ್ಟು ಹಾನಿ ಮಾಡುವುದು.
ಎಲೆಗಳು ಬಿಳಿ ಬಣ್ಣಕ್ಕೆ ತಿರಿಗಿರುವುದು ಮರಿ ಹುಳು ಕಾಯಿಯನ್ನು ಕೊರೆಯುತ್ತಿರುವುದು ಕಾಯಿಯ ಮೇಲೆ ರಂಧ್ರಗಳು
ಲಕ್ಷಣಗಳು:
- ಕೊರೆಯುವ ಹುಳುವಿನ ದೇಹದ ಅರ್ಧಭಾಗ ಕಾಯಿಯೊಳಗೆ ಮತ್ತರ್ಧಭಾಗ ಕಾಯಿಯ ಹೊರಭಾಗದಲ್ಲಿ ಇರುತ್ತದೆ
- ಕಾಯಿಯ ಮೇಲೆ ರಂಧ್ರಗಳು
- Login to post comments
- 4359 reads