ಕಡಲೆ ಕಾಯಿ ಕೊರಕ ಸಂರಕ್ಷಣಾ ಕ್ರಮಗಳು
ಬೇಸಾಯ / ಸಾಗುವಳಿ ಕ್ರಮಗಳು
- ಪ್ರತಿ ಎಕರೆಗೆ 2 ಮೋಹಕ ಬಲೆಗಳನ್ನು 10 ಮಿ. ಅಂತರದಲ್ಲಿ ನೆಡಬೇಕು
- 15 ದಿನಗಳಿಗೊಮ್ಮೆ ಲಿಂಗಾಕರ್ಶಕವನ್ನು ಬದಲಿಸಬೇಕು
ಜೈವಿಕ ಕ್ರಮಗಳು
- ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯವನ್ನು ಸಿಂಪಡಿಸಬೇಕು
- ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ ತಯಾರಿಸುವ ವಿಧಾನ:
- ಸಾಮಾಗ್ರಿಗಳು: 2.5 ಕಿ.ಗ್ರಾಂ. ಬೆಳ್ಳುಳ್ಳಿ + 250 ಮಿ.ಲೀ. ಸೀಮೆ ಎಣ್ಣೆ + 5 ಕಿ.ಗ್ರಾಂ ಮೆಣಸಿನಕಾಯಿ + 5 ಲೀ. ನೀರು.
ವಿಧಾನ: ಸೀಮೆ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ನೆನೆಸಿ ರುಬ್ಬಿ 2 ಲೀ. ದ್ರಾವಣ ಸೇರಿಸಬೇಕು.
ಮೆಣಸಿನಕಾಯಿ ರುಬ್ಬಿ 3 ಲೀಟರ್ ದ್ರಾವಣವನ್ನು ಸೇರಿಸಬೇಕು.
ಎರಡು ಭಾಗಗಳನ್ನು ಮಿಶ್ರಣ ಮಾಡಿ, ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಒಂದು ಎಕರೆಗೆ 400 ಲೀ. ಸಿಂಪರಣಾ ದ್ರಾವಣ ಬೇಕು.
ರಾಸಾಯನಿಕ ಕ್ರಮಗಳು (ಪ್ರತಿ ಎಕರೆಗೆ )
0.2 ಗ್ರಂ ಇಮಾಮೆಕ್ಟಿನ್ ಬೆಂಜೊಯೇಟ್ 5 ಎಸ್.ಜಿ.
ಅಥವಾ
0.1 ಮಿ.ಲೀ. ಸ್ಪೈನೋಸಡ್45 ಎಸ್.ಸಿ.
ಅಥವಾ
0.3 ಮಿ.ಲೀ. ಇಂಡಾಕ್ಸಿಕಾರ್ಬ್14.5 ಎಸ್.ಸಿ.
ಅಥವಾ
1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇಸಿ
ಅಥವಾ
2.0 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ.
ಅಥವಾ
3.0 ಮಿ.ಲೀ. ಪ್ರೋಫೇನೋಫಾಸ್ 50 ಇ.ಸಿ.
ಅಥವಾ
1 ಗ್ರಾಂ ಆಸಿಫೇಟ್ 75 ಎಸ್.ಪಿ.
- ಹೂ ಬಿಟ್ಟಾಗ ಮತ್ತು ಕಾಯಿ ಬಲಿಯುವ ಹಂತದಲ್ಲಿ ಮೀಟರಿಗೆ ಒಂದು ಕೀಡೆ ಅಥವಾ 10 ಗಿಡಗಳಿಗೆ 1 ಕೀಡೆ ಕಂಡು ಬಂದರೆ ಇದರಲ್ಲಿ ಯಾವುದಾದರೊಂದನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಹೂ ಬಿಡುವ ಮುಂಚೆ ಅಥವಾ ಭಾದೆ ಕಂಡು ಬಂದಲ್ಲಿ ಸಿಂಪಡಿಸಬೇಕು.
- Login to post comments
- 1846 reads