ಕಡಲೆಯಲ್ಲಿ ಗೊಬ್ಬರ ಅನ್ವಯಿಸುವಿಕೆ (ಅಪ್ಲಿಕೇಶನ್)
ಗೊಬ್ಬರ
ಪ್ರಾಥಮಿಕ ಪೋಷಕಾಂಶಗಳು :
ಗೊಬ್ಬರ ನೀಡುವ ಪ್ರಮಾಣ ಹೊಲದಿಂದ ಹೊಲಕ್ಕೆ ಬೇರೆಯಾಗಿರುತ್ತದೆ. ಮಣ್ಣಿನ ಪರೀಕ್ಷೆಯನ್ನು ಮಾಡಿಸಿದ ನಂತರ ಕ್ಷೇತ್ರಕ್ಕೆ ಬೇಕಾಗುವ ಗೊಬ್ಬರ ಪ್ರಮಾಣವನ್ನು ನಿರ್ದರಿಸಬಹುದು. ಸಾಮಾನ್ಯವಾಗಿ ಕಡಲೆಗೆ ಶಿಫಾರಸ್ಸು ಮಾಡಿದಂತೆ 20-30 ಕೆಜಿ ಸಾರಜನಕ, 40-60 ಕೆಜಿ ರಂಜಕ ನೀಡಬೇಕಾಗುತ್ತದೆ. ಪೊಟ್ಯಾಷ್ ಅಂಶ ಕಡಿಮೆ ಇರುವ ಮಣ್ಣಿಗೆ 17-25 ಕೆಜಿ ಪ್ರತಿ ಹೆಕ್ಟೇರಿಗೆ ಪೋಟ್ಯಾಷ್‌ನ್ನು ನೀಡಬೇಕು. ಮಣ್ಣಿನಲ್ಲಿ ಪೋಟ್ಯಾಷ್ ಪ್ರಮಾಣ ಹೆಚ್ಚಾಗಿದ್ದರೆ, ಪೋಟ್ಯಾಷಿಯಂ ನೀಡಿದಾಗ ಯಾವ್ರದೇ ರೀತಿಯ ಪ್ರತಿಕ್ರಿಯೆ ಇರುವದಿಲ್ಲ. ಎನ್.ಪಿ.ಕೆ ಗೊಬ್ಬರವನ್ನು ಮದೊಲನೆಯ ಹಂತದಲ್ಲಿಯೇ ಸಂಪೂರ್ಣವಾಗಿ ನೀಡಬೇಕು. ಕಡಲೆ ಹೂವಾಗುವ ಪ್ರಾರಂಭಿಕ ಹಂತದಲ್ಲಿ ಶೇ. 2 ಯೂರಿಯಾ ಸಿಂಪರಣೆ ಮಾಡುವದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಈ ಸಿಂಪರಣೆಯನ್ನು ಸಸ್ಯ ಸಂರಕ್ಷಣಾ ಕ್ರಮಗಳ ಜೊತೆಗೂ ಸಹ ಕೈಗೊಳ್ಳಬಹುದು.
ಲಘು ಪೋಷಕಾಂಶಗಳು
ಲಘು ಪೋಷಕಾಂಶಗಳನ್ನು ಹಾಕದೆ ಬಹುಬೆಳೆ ಪದ್ಧತಿಯಲ್ಲಿ ಬೆಳೆ ಬೆಳೆಯವದರಿಂದ ಹಾಗು ಜೈವಿಕ ಗೊಬ್ಬರ ಹಾಕದೇಯಿರುವದರಿಂದ ಮಣ್ಣಿನಲ್ಲಿ ಒಂದು ಅಥವಾ ಹೆಚ್ಚಿನ ಲಘು ಪೋಷಕಾಂಶಗಳ ಕೊರತೆಯುಂಟಾಗುತ್ತದೆ. ಪ್ರಮುಖವಾಗಿ ಸತುವ್ರ, ಕಬ್ಬಿಣ, ಬೋರಾನ್, ಮಾಲಿಬ್ಡಿನಂಗಳ ಅವಶ್ಯಕತೆ ಹೊಲದಿಂದ ಹೊಲಕ್ಕೆ ಬೇರೆಯಾಗಿರುತ್ತದೆ. ಇದನ್ನು ನಾವ್ರ ಮಣ್ಣಿನ ವಿಶ್ಲೇಷಣೆಯ ಮೂಲಕ ತಿಳಿಯಬಹುದಾಗಿದೆ.
ಗಂಧಕ (S)
ಗಂಧಕ ಕೊರತೆಯಿರುವಂತಹ ಮಣ್ಣಿಗೆ ಎಸ್‌ಎಸ್‌ಪಿ, ಜಿಪ್ಸ್‌ಂ ಅಥವಾ ಪೈರೆಟ ಮೂಲಕ 20 ಕೆ.ಜಿ. ಗಂಧಕವನ್ನು ಪ್ರತಿ ಹೆಕ್ಟೇರ್ ಮಣ್ಣಿನಲ್ಲಿ ಬೆರೆಸುವದರಿಮದ ಉತ್ತಮ ಫಲಿತಾಂಶ ದೊರಕುತ್ತದೆ ಹಾಗು ಇದು ಮಣ್ಣಿನಲ್ಲಿರುವ ಗಂಧಕದ ಕೊರತೆಯನ್ನು ನೀಗಿಸುತ್ತದೆ.
ಸತು (Zn)
ಸಾಮಾನ್ಯವಾಗಿ ಸತುವಿನ ಕೊರತೆಯು (PH) ಹೆಚ್ಚಿರುವ ಮಣ್ಣಿನಲ್ಲಿ ಮತ್ತು ಭತ್ತ-ಕಡಲೆ ಬೆಳೆ ಪದ್ಧತಿಯಲ್ಲಿ ಇರುತ್ತದೆ. ಉತ್ತರ ಭಾತರದ ಮರಳು ಮಿಶ್ರಿತ ಜೇಡಿಮಣ್ಣಿನಲ್ಲಿಯೂ ಸಹ ಸತುವಿನ ಕೊರತೆ ಸಾಮಾನ್ಯವಾಗಿರುತ್ತದೆ. ಸತುವನ್ನು ಹಾಕುವದರಿಂದ ಬೇರುಗಳ ಬೆಳವಣಿಗೆ , ಗ್ರಂಥಿಗಳ ಬೆಳವಣಿಗೆ ಮತ್ತು ಗ್ರಂಥಿಯಲ್ಲಿ ಸಾರಜನಕ ಶೇಖರಣೆ ಹೆಚ್ಚಾಗುತ್ತದೆ. ಎಲೆಗಳು ಹಳದಿ ವರ್ಣಕ್ಕೆ ತಿರುಗುವವ್ರ, ನಂತರ ಕಂಚಿನ ಬಣ್ಣಕ್ಕೆ ತಿರುಗುತ್ತವೆ ಮತ್ತು ಎಲೆಯ ಮಧ್ಯಭಾಗ ಹಾಗೂ ಕೆಳಗಿನ ಭಾಗವ್ರ ಒಣಗುವದು ಸತುವಿನ ಕೊರತೆಯ ಲಕ್ಷಣಗಳು ಸತುವಿನ ಕೊರತೆಯನ್ನು ತಡೆಗಟ್ಟಲು ಸತುವಿನ ಸಲ್ಫೇಟ್‌ನನ್ನು 10-15 ಕೆಜಿ ಪ್ರತಿ ಹೆಕ್ಟೇರ್‌ನಂತೆ ಮಣ್ಣಿಗೆ ಬೆರಸಬಹುದು ಮತ್ತು 0.5% ಸತುವಿನ ಸಲ್ಫೇಟ್‌ನನ್ನು 0.25% ಸುಣ್ಣದಲ್ಲಿ ಮಿಶ್ರಮಾಡಿ ದ್ರವ ರೂಪದಲ್ಲಿ ಎಲೆಗಳ ಮೇಲೆ ಸಿಂಪಡಿಸುವದು.
ಕಬ್ಬಿಣ (Fe)
ಕಬ್ಬಿಣದ ಕೊರತೆಯು PH ಹೆಚ್ಚಿರುವ ಸುಣ್ಣದ ಕಲ್ಲಿನಿಂದ ಕೂಡಿರುವ ಮಣ್ಣಿನಲ್ಲಿ ಕಂಡುಬರುತ್ತದೆ. ಕೊರತೆಯ ಲಕ್ಷಣಗಳು ಹಳದಿ ವರ್ಣದ ಎಲೆಗಳೂ, ಆಗತಾನೇ ಬೆಳೆದ ಚಿಗುರುಗಳು ಒಣಗಿ ಬೀಳುತ್ತವೆ. ಕೊರತೆಯನ್ನು ತಡೆಗಟ್ಟಲು ಕಬ್ಬಿಣದ ಸಲ್ಫೇಟ್‌ನನ್ನು (FeSO4) 0.5 % ದ್ರವವನ್ನು (W/V) ಎಲೆಗಳ ಮೇಲೆ ಸಿಂಪಡಿಸುವದರಿಂದ ಈ ಲಘು ಪೋಷಕಾಂಶದ ಕೊರತೆಯನ್ನು ನಿಗಿಸಬಹುದು.
ಬೋರಾನ್ (B)
ಬೋರಾನ್ ಕೊರತೆಯು ಭಾರತ ದೇಶದ ಓರಿಸ್ಸಾ, ಬಿಹಾರ, ಉತ್ತರ ಪ್ರದೇಶ ಮತ್ತು ಗುಜರಾತ ರಾಜ್ಯಗಳಲ್ಲಿ ವರದಿಯಾಗಿದೆ. ಸಾಮಾನ್ಯವಾಗಿ ಒರಟಾದ ಮತ್ತು ಆಳವಲ್ಲದ ಮಣ್ಣುಗಳಲ್ಲಿ ಬೋರಾನ್ ಕೊರತೆಯಿರುತ್ತದೆ. ಬೋರಾನ್ ಕೊರತೆಯ ಲಕ್ಷಣಗಳೆಂದರೆ ಎಲೆಗಳ ಬಣ್ಣ ಮಾಸುವದು, ಬೆಳ್ಳಗಾಗುವದು ಮತ್ತು ಎಲೆಗಳು ಒಣಗುವದು. ಬಿಗುರುಗಳು ತಿರುವಿದಂತಾಗಿ ಒಣಗುವ್ರದು, ಹೂಗಳ ಸಂಖ್ಯೆ ಕಡಿಮೆಯಾಗುವ್ರದಲ್ಲದೇ, ವರ್ಣರಹಿತವಾಗಿರುತ್ತವೆ. ಬೋರಾನ್ ಕೊರತೆ ನೀಗಿಸಲು ಮಣ್ಣಿಗೆ ಬೋರ್ಯಾಕ್ಸ್‌ನ್ನು 1-2.5 ಕೆಜಿ ಪ್ರತಿ ಹೆಕ್ಟೇರಿಗೆ ಹಾಕುವದರಿಂದ ಅಥವಾ ಎಲೆಗಳಿಗೆ 0.25 ಕೆ.ಜಿ ಬೋರ್ಯಾಕ್ಸ್ ಪ್ರತಿ ಹೆಕ್ಟೇರಿಗೆ ಸಿಂಪಡಿಸಬೇಕು.
ಮಾಲಿಬ್ಡಿನಂ (MO)
ಜೀಡಿಮಣ್ಣು ಮತ್ತು ಲ್ಯಾಟರೈಟ್ ಮಣ್ಣಿನಲ್ಲಿ ಮಾಲಿಬ್ಡಿನಂ ಅಂಶ ಕಡಿಮೆ ಇದ್ದು, ಲವಣಯುಕ್ತ ಮತ್ತು ಕ್ಷಾರದ ಗುಣವ್ರಳ್ಳ ಮಣ್ಣುಗಳಲ್ಲಿ ಇದರ ಅಂಶ ಹೆಚ್ಚಾಗಿರುತ್ತದೆ. ಹೀಗೆ ಮಾಲಿಬ್ಡಿನಂ ಕೊರತೆಯನ್ನೂ ಕಾಣಬಹುದು ಮತ್ತು ಹೆಚ್ಚಿನ ಪ್ರಮಾಣದಲ್ಲಿದ್ದರೆ ವಿಷಮಯವ್ರ ಆಗಿರುತ್ತದೆ. ಮೊದಲನೇ ಹಂತದಲ್ಲಿ ಮಾಲಿಬ್ಡಿನಂ ಕೊರತೆಯ ಲಕ್ಷಣಗಳಿಗಿಂತ (45 ದಿವಸ), ಹೆಚ್ಚುವರಿ ಪೂರೈಕೆಯ ಲಕ್ಷಣಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ (ಬಿತ್ತನೆ ಮಾಡಿದ 32 ದಿನಗಳ ನಂತರ). ಮಾಲಿಬ್ಡಿನಂ ಕೊರತೆಯಿಂದಾಗಿ ಹೂಗಳ ಗಾತ್ರ ಮತ್ತು ಸಂಖ್ಯೆ ಕಡಿಮೆಯಾಗುತ್ತದೆ, ಅಲ್ಲದೆ ಹೂಗಳು ಸಂಪೂರ್ಣವಾಗಿ ಪಕ್ವವಾಗದೆ ಉದುರಿಹೋಗುತ್ತವೆ ಇದರಿಂದಾಗಿ ಇಳುವರಿ ಕಡಿಮೆಯಾಗುತ್ತದೆ. ಕಡಲೆಯಲ್ಲಿ 3.5 ಗ್ರಾಂ ಸೋಡಿಯಂ ಮಾಲಿಬ್ಡೇಟ್ ನಿಂದ ಬೀಜೋಪಚಾರಣೆ ಮಾಡುವದು ಪರಿಣಾಮಕಾರಿಯಾಗಿದೆ. ಇದನ್ನು ರಂಜಕ ಮತ್ತು ರೈಜೋಬಿಯಂ ಜೊತೆಗೆ ಹಾಕುವದರಿಂದ ಒಳ್ಳೆಯ ಪ್ರತಿಕ್ರಿಯೆ ಉಂಟಾಗಿ ಹೆಚ್ಚಿನ ಇಳುವರಿ ಪಡೆಯಬಹುದು.
Source: ICRISAT, Hyderabad & UAs, Dharwad
- Login to post comments
- 1854 reads