ಎರೆಗೊಬ್ಬರದ ವೈಶಿಷ್ಟೈಗಳು
ಪೋಷಕಾಂಶಗಳು : ಪ್ರತಿ ಕ್ವಿಂಟಾಲ್ ಎರೆಗೊಬ್ಬರವು ಸುಮಾರು 800-1000 ಗ್ರಾಂ ಸಾರಜನಕ, 800-1100 ಗ್ರಾಂ ರಂಜಕ ಮತ್ತು 500 ರಿಂದ 900 ಗ್ರಾಂ ಪೋಟ್ಯಾಷ್‍ನ್ನು ಹೊಂದಿರುತ್ತದೆ. ಇದನ್ನು ಸಗಣಿ ಗೊಬ್ಬರಕ್ಕೆ ಹೋಲಿಸಿದರೆ, ಎರೆಗೊಬ್ಬರ ಸಗಣಿ ಗೊಬ್ಬರಕ್ಕಿಂತ ಎರಡು ಪಟ್ಟು ಸಾರಜನಕ, 5 ಪಟ್ಟು ರಂಜಕ ಹಾಗು 5 ಪಟ್ಟು ಹೆಚ್ಚು ಪೋಟ್ಯಾಷ್‍ನ್ನು ಹೊಂದಿರುತ್ತದೆ. ಎರೆಗೊಬ್ಬರವು ಮೆಗ್ನೇಷಿಯಂ, ಕ್ಯಾಲ್ಸಿಯಂ, ಬೋರಾನ್, ಮೊಲಿಬ್ಡಿನಮ್, ಸತುವು ಮತ್ತು ಬೆಳೆವರ್ಧಕಗಳನ್ನು ಹೊಂದಿರುತ್ತದೆಯಲ್ಲದೇ ಸಸ್ಯ ಉಪಯೋಗಿ ಸೂಕ್ಷ್ಮಾಣುಜೀವಿಗಳನ್ನೂ ಹೊಂದಿರುತ್ತದೆ.
Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
- Login to post comments
- 1590 reads