ಈಶಾನ್ಯ ಕರ್ನಾಟಕದ ಮೆಣಸಿನಕಾಯಿ ಬೆಳೆ ಉತ್ಪನ್ನಗಳ 2012-13 ನೇ ಸಾಲಿನ ಬೆಲೆಗಳ ಮುನ್ಸೂಚನೆ
ಮೆಣಸಿನಕಾಯಿ
ಭಾರತದ ಮೆಣಸಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯದ ಪಾಲು ಪ್ರತಿಶತ 9 ರಷ್ಟಾಗಿರುತ್ತದೆ. ಅಲ್ಲದೇ ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ನಂತರ ಮೂರನೇ ಪ್ರಮುಖ ರಾಜ್ಯವಾಗಿದೆ. ಕರ್ನಾಟಕದಲ್ಲಿ ಮೆಣಸಿನಕಾಯಿಗೆ ಬ್ಯಾಡಗಿ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ ಮತ್ತು ಗದಗ ಮಾರುಕಟ್ಟೆಗಳು ಪ್ರಮುಖವಾಗಿವೆ.
ಸಾಮಾನ್ಯವಾಗಿ ಜನೆವರಿ ತಿಂಗಳಿನಿಂದ ಮೇ ತಿಂಗಳವರೆಗೆ ಹೆಚ್ಚಿನ ಆವಕದಿಂದಾಗಿ ಮೆಣಸಿನಕಾಯಿ ಬೆಲೆಯಲ್ಲಿ ಇಳಿಮುಖವಾಗಿರುತ್ತದೆ. ಜೂನ್-ಜುಲೈ ತಿಂಗಳ ನಂತರ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಆವಕದಲ್ಲಿನ ಪ್ರಮಾಣ ಕಡಿಮೆಯಾಗುವ್ರದರಿಂದ, ಮೆಣಸಿನಕಾಯಿಯ ಬೆಲೆಯಲ್ಲಿ ಏರಿಕೆ ಕಂಡುಬರುವ್ರದು.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಮೆಣಸಿನಕಾಯಿ ಉತ್ಪಾದನೆಯಲ್ಲಿ ವೃದ್ಧಿಯಾಗುತ್ತಿರುವ್ರದರಿಂದ, 2012-13 ರ ಹಂಗಾಮಿನ ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ. 2012ರ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಮೆಣಸಿನಕಾಯಿ ಬೆಲೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಆದರೆ ಇದು ಧೀರ್ಘ ಅವಧಿಯವರೆಗೆ ಮುಂದುವರೆಯುವ ನಿರೀಕ್ಷೆ ಇಲ್ಲ. ಆದ್ದರಿಂದ ರೈತರು ಹೆಚ್ಚಿನ ಬೆಲೆಯಾದ ಪ್ರತಿ ಕ್ವಿಂಟಲ್‌ಗೆ ರೂ. 5,000/- ರಿಂದ ರೂ. 6,000/- ಪಡೆಯಲು ಹೊಸ ಬೆಳೆಯ ಆವಕದ ಆರಂಭದಲ್ಲಿ ಮಾರಾಟ ಮಾಡುವ್ರದು ಸೂಕ್ತ.
- Login to post comments
- 1179 reads