ಈಶಾನ್ಯ ಕರ್ನಾಟಕದ ಮೆಕ್ಕೆಜೋಳ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ
ಭಾರತದಲ್ಲಿ ನಿಜಾಮಬಾದ್ ಮತ್ತು ದಾವಣಗೆರೆ ಮಾರುಕಟ್ಟೆಗಳು ಮೆಕ್ಕೆಜೋಳದ ವಹಿವಾಟಿನಲ್ಲಿ ಪ್ರಮುಖ ಮಾರುಕಟ್ಟೆಗಳಾಗಿರುತ್ತವೆ. ಬೆಲೆ ವಿಶ್ಲೇಷಣೆ ಮಾಡಲು ದಾವಣಗೆರೆ, ಕೊಪ್ಪಳ ಮತ್ತು ಕೊಟ್ಟೂರು ಮಾರುಕಟ್ಟೆಗಳ ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ವಿಶ್ಲೇಷಣೆಯಿಂದ ತಿಳಿದುಬಂದಿರುವ್ರದೇನೆಂದರೆ, ಈ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳದ ಬೆಲೆಯು ಜುಲೈ-ಆಗಸ್ಟ್ ತಿಂಗಳಿನಲ್ಲಿ ಗರಿಷ್ಟ ಇರುತ್ತದೆ. ಅದೇ ರೀತಿಯಾಗಿ ಸೆಪ್ಟೆಂಬರ್ ತಿಂಗಳಿನ ನಂತರ ಹೊಸ ಆವಕದಿಂದಾಗಿ ಬೆಲೆಯು ಇಳಿಮುಖವಾಗುತ್ತದೆ.
ಕರ್ನಾಟಕದಲ್ಲಿ ಶೇಕಡ 70 ರಷ್ಟು ಮೆಕ್ಕೆಜೋಳದ ಉತ್ಪಾದನೆಯು ಮುಂಗಾರು ಹಂಗಾಮಿನಲ್ಲಿ ಬರುತ್ತದೆ. ಈ ಮೇಲ್ಕಂಡ ಅಂಶಗಳನ್ನು ಪರಿಗಣಿಸಲಾಗಿ ಮೆಕ್ಕೆಜೋಳದ ನಿರೀಕ್ಷಿತ ಬೆಲೆಯು ೨೦೧೨ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ರೂ. 1,240/- ರಿಂದ ರೂ. 1,473/- ಪ್ರತಿ ಕ್ವಿಂಟಾಲ್‌ಗೆ ಇರುವ್ರದೆಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರವ್ರ 2012-13 ರ ಮುಂಗಾರು ಹಂಗಾಮಿಗೆ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ರೂ. 1,175/- ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿದೆ.
- Login to post comments
- 1189 reads