ಈಶಾನ್ಯ ಕರ್ನಾಟಕದ ¨sÀvÀÛ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನ
2011-12 ರ ನವೆಂಬರ್-ಡಿಸೆಂಬರ್ ಹಂಗಾಮಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಭತ್ತದ ಬೆಲೆಯಲ್ಲಿ ಇಳಿಮುಖವಾಗಿರುವ್ರದು ಕಂಡುಬಂದಿರುತ್ತದೆ. ಆದರೆ ಜನವರಿ ನಂತರ ಬಾಸುಮತಿಯೇತರ ಅಕ್ಕಿಯ ರಫ್ತು ಮೇಲಿನ ನಿಷೇಧವನ್ನು ಸಡಿಲಿಸಿದ್ದರಿಂದ ಮಾರುಕಟ್ಟೆಯಲ್ಲಿ ಆವಕದ ಪ್ರಮಾಣ ಕಡಿಮೆಯಾಯಿತು. ಇದರಿಂದ ಭತ್ತದ ಬೆಲೆಯಲ್ಲಿ ಸ್ವಲ್ಪಮಟ್ಟಿನ ಏರಿಕೆ ಕಂಡುಬಂದಿತು.
ಉತ್ತರ ಕರ್ನಾಟಕದಲ್ಲಿ ಪ್ರಮುಖ ಭತ್ತದ ಮಾರುಕಟ್ಟೆಗಳೆಂದರೆ ಸಿಂಧನೂರು, ರಾಯಚೂರು ಮತ್ತು ಗಂಗಾವತಿ. ಈ ಮಾರುಕಟ್ಟೆಗಳಲ್ಲಿ 2011-12ಆಕ್ಟೋಬರ್ᆲಡಿಸೆಂಬರ್ ತಿಂಗಳಿನಲ್ಲಿ ಭತ್ತದ ಬೆಲೆಯು ಪ್ರತಿ ಕ್ವಿಂಟಲ್‌ಗೆ ರೂ. 1,250/- ರಿಂದ ರೂ 1,450/- ಇತ್ತು. ಈಗಾಗಲೇ ಕೇಂದ್ರ ಸರಕಾರವ್ರ ಪ್ರತಿ ಕ್ವಿಂಟಾಲ್ ಭತ್ತಕ್ಕೆ ರೂ. 1,250/- ಮತ್ತು ರೂ. 1,280/- ಬೆಂಬಲ ಬೆಲೆಯನ್ನು ಕ್ರಮವಾಗಿ ಸಾಮಾನ್ಯ ಮತ್ತು "ಎ' ಗ್ರೇಡ್ ಭತ್ತಕ್ಕೆ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಬರುವ 2012-13 ರ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಲೆಯು ಪ್ರತಿ ಕ್ವಿಂಟಾಲ್‌ಗೆ ರೂ. 1,365/- ಮತ್ತು ರೂ 1,498/- ಕ್ರ್ರಮವಾಗಿ ಸಾಮಾನ್ಯ ಮತ್ತು "ಎ' ಗ್ರೇಡ್ ಭತ್ತಕ್ಕೆ ಇರುವದೆಂದು ವಿಶ್ಲೇಷಣೆಯಿಂದ ತಿಳಿದು ಬಂದಿದೆ.
- Login to post comments
- 1295 reads