Skip to main content

Please note that this site in no longer active. You can browse through the contents.

ಈಶಾನ್ಯ ಕರ್ನಾಟಕದ ತೊಗರಿ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಈಶಾನ್ಯ ಕರ್ನಾಟಕದ  ತೊಗರಿ   ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

     ತೊಗರಿಯ ಮಾರುಕಟ್ಟೆ ಬೆಲೆಯಲ್ಲಿ ಗಣನೀಯವಾದ ಏರಿಕೆ 2007 ರಿಂದ 2009ರ ವರೆಗೆ ಕಂಡುಬಂದಿತು, ಆದರೆ 2010-11 ರಲ್ಲಿ ಉತ್ಪಾದನೆಯಲ್ಲಿನ ಅಲ್ಪಮಟ್ಟಿನ ಏರಿಕೆಯಿಂದ ತೊಗರಿ ಬೆಲೆಯು ಇಳಿಮುಖವಾಯಿತು.  ಅದೇ ರೀತಿ 2011-12  ರಲ್ಲಿಯೂ ಸಹ ಬೆಲೆಯಲ್ಲಿ ಇಳಿಕೆ ಕಂಡುಬಂದಿತು.

     ಸಾಮಾನ್ಯವಾಗಿ ತೊಗರಿಯ ಹೊಸ ಉತ್ಪಾದನೆಯು ಪ್ರತಿ ವರ್ಷ ಡಿಸೆಂಬರ್‌/ಜನವರಿ ತಿಂಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟಕ್ಕೆ ಬರುವ್ರದರಿಂದ ಈ ಅವಧಿಯಲ್ಲಿ ಆವಕದ ಒತ್ತಡದಿಂದ ಬೆಲೆಯ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಈಗಾಗಲೇ ಕೇಂದ್ರ ಸರ್ಕಾರವ್ರ ತೊಗರಿಗೆ ರೂ. 3,200/- ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿದೆ.

    ಇದಲ್ಲದೇ, ಖಾಸಗಿ ಸಂಸ್ಥೆಗಳ ಖರೀದಿ, ಸರಕಾರದ ನೀತಿ, ಹಣದುಬ್ಬರ, ವಿನಿಮಯ ದರ, ಮಾರಾಟದೊತ್ತಡ ಹಾಗೂ ಬ್ಯಾಂಕಿನ ಬಡ್ಡಿಯ ದರ ಪರಿಷ್ಕರಣೆ ಅಂಶಗಳು ಬಹಳಷ್ಟು ಮಟ್ಟಿಗೆ ಬರುವ ವರ್ಷದಲ್ಲಿ ತೊಗರಿ ಬೆಲೆಯನ್ನು ನಿರ್ಧರಿಸುತ್ತವೆ. ಅಂತೆಯೇ, 2012-13ರ ಹಂಗಾಮಿನಲ್ಲಿ, ತೊಗರಿ ಬೆಲೆಯು ರೂ. 3,600/- ರಿಂದ ರೂ. 3,850/- ಪ್ರತಿ ಕ್ವಿಂಟಲ್‌ಗೆ ಇರುವ್ರದೆಂದು ಅಂದಾಜಿಸಲಾಗಿದೆ.

0
Your rating: None