ಸಣಬು ಬೀಜೋತ್ಪಾದನೆ
ಸಣಬು ಮುಖ್ಯವಾದ ಹಸಿರೆಲೆ ಗೊಬ್ಬರದ ಬೆಳೆಯಾಗಿದ್ದು, ಇದನ್ನು ಮೇವಿಗಾಗಿ ಹಾಗೂ ಹಸಿರು ಗೊಬ್ಬರವಾಗಿ ವಿವಿಧ ಬೆಳೆಪದ್ಧತಿಯಲ್ಲಿ ತೋಟಗಾರಿಕೆ, ಹಣ್ಣಿನ ಬೆಳೆಗಳಲ್ಲಿ ಮತ್ತು ಗೋವಿನ ಜೋಳದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಬಹುಪಯೋಗಿ ಸಣಬಿನ ಬೀಜೋತ್ಪಾದನೆಯನ್ನು ಸಾಮಾನ್ಯವಾಗಿ ಎಲ್ಲಾ ವಿಧವಾದ ಮಣ್ಣಿನಲ್ಲಿ ಅದರಲ್ಲೂ ಕಪ್ಪು ಭೂಮಿ ಮತ್ತು ಚೆನ್ನಾಗಿ ನೀರು ಬಸಿಯುವ ಯಾವುದೇ ಮಣ್ಣಿನಲ್ಲಿ ಯಶಸ್ವಿಯಾಗಿ ಬೆಳೆಯಬಹುದು