ಕಡಲೆ ಬೆಳೆಯಲ್ಲಿ ತುಕ್ಕು ರೋಗ/ ಭಂಡಾರ ರೋಗ (ಯೂರೋಮೈಸಿಸ್ ಸೈಸರ್ ಎರಿಯಾಟಿನಿ) ನಿರ್ವಹಣೆ
ಈ ರೋಗದ ಹತೋಟಿಯು ಕೇವಲ ರಸಾಯನಿಕ ಶಿಲೀಂಧ್ರನಾಶಕಗಳಿಂದ ಮಾತ್ರ ಸಾಧ್ಯ. ಶಿಲೀಂಧ್ರನಾಶಕಗಳಾದ ಅಜಾಕ್ಷಿಸ್ ಸ್ಟೕಬಿನ್ (ಆಮಿಸ್ಟಾರ) 0.5 ಮೀ.ಲಿ. ಮತ್ತು ಹೆಗ್ಸಾಕ್ಲೊನೋಜಾಲ್ (ಟಿಲ್ಟ್) 2 ಮೀ.ಲಿ. ಸಿಂಪರಣೆಯಿಂದ ಈ ರೋಗವನ್ನು ಹತೋಟಿಗೆ ತರಬಹುದು.
ನಿರೋಧಕ ತಳಿಗಳನ್ನು ಉಪಯೋಗಿಸುವದು ಮತ್ತು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವದರಿಂದ ಹೂ ಬಿಡುವ ಕಾಲದಲ್ಲಿ ಉಂಟಾಗತಕ್ಕಂತಹ ಒತ್ತಡವನ್ನು ಕಡಿಮೆ ಮಾಡಿ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.
ಸಮಗ್ರ ಕೀಟ ನಿರ್ವಹಣೆ ರೋಧಕ ತಳಿಗಳು ಇಲ್ಲದ ಕಾರಣ ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಸಮಗ್ರ ಕೀಟ ನಿಯಂತ್ರಣವನ್ನು ಶಿಫಾರಸ್ಸು ಮಾಡಲಾಗಿದೆ. ಇದು ಪರಿಸರ ಸ್ನೇಹಿಯೂ ಆಗಿದೆ. ಇದರಿಂದ ಪರಿಸರದಲ್ಲಿರುವ ಹುಳುವಿನ ನೈಸರ್ಗಿಕ ವೈರಿಗಳನ್ನು ಕಾಪಾಡಿ ಹುಳದ ನಿಯಂತ್ರಣ ಮಾಡಬಹುದು. ಅಲ್ಲದೇ, ಕೀಟನಾಶಕಗಳನ್ನು ಉಪಯೋಗಿಸಬಹುದು.
ರಾಸಾಯನಿಕ ಕ್ರಮದಲ್ಲಿ ಭತ್ತದಲ್ಲಿ ಕಂದು ಜಿಗಿ ಹುಳು ನಿರ್ವಹಣೆ
ರಾಸಾಯನಿಕ ಕ್ರಮಗಳು: 0.3ಮಿ.ಲೀ. ಇಂಡಾಕ್ಸ್ ಕಾರ್ಬ್ 14.5 ಎಸ್.ಸಿ 2ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ. ಗದ್ದೆಯಲ್ಲಿರುವ ನೀರನ್ನು ಬಸಿದು ಯಾವುದಾದರೊಂದು ದ್ರಾವಣವನ್ನು ಕೊನೆ ಎಲೆ ಬಂದಾಗ ಸಿಂಪಡಿಸಬೇಕು