ಜೈವಿಕ ಗೊಬ್ಬರಗಳು
ಬೆಳೆಗಳಿಗೆ ಪ್ರಯೋಜನಕಾರಿಯಾಗುವಂತಹ ಸೂಕ್ಷ್ಮಜೀವಿಗಳನ್ನು ಅಳವಡಿಸಿ ತಯಾರಿಸಿದಂತಹ ಗೊಬ್ಬರಗಳಿಗೆ ಜೈವಿಕ ಗೊಬ್ಬರಗಳೆನ್ನುವರು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ, ಸಾರಜನಕ ಸ್ಥಿರೀಕರಿಸುವ ಜೈವಿಕಗೊಬ್ಬರಗಳು, ರಂಜಕ ಕರಗಿಸುವ ಜೈವಿಕಗೊಬ್ಬರಗಳು, ಸಾವಯವ ಪದಾರ್ಥಗಳನ್ನು ಕಳಿಸುವ ಜೈವಿಕಗೊಬ್ಬರಗಳು ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋಧಿಸುವ ಜೈವಿಕಗೊಬ್ಬರಗಳು. ಸದ್ಯ ಪ್ರಚಲಿತದಲ್ಲಿರುವ ಜೈವಿಕಗೊಬ್ಬರಗಳು, ಅವುಗಳ ಮಹತ್ವ ಹಾಗೂ ಬಳಕೆ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.