:
ಬಿತ್ತನೆಗೆ ಬೇಕಾಗುವ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ)
ಅ. ಬೀಜ
ಜೆಎಲ್-24, ಡಿಎಚ್3-30 ಮತ್ತು ಆರ್-8808 150 ಕಿ.ಗ್ರಾಂ
ಗೆಜ್ಜೆ ಶೇಂಗಾದ ಉಳಿದ ತಳಿಗಳು 125 ಕಿ.ಗ್ರಾಂ
ಹಬ್ಬು ಶೇಂಗಾ ತಳಿಗಳು 75 ಕಿ.ಗ್ರಾಂ
ಆ. ಸಾವಯವ ಗೊಬ್ಬರಗಳು
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 7.5 ಟನ್
ಇ. ಎರೆಹುಳು ಗೊಬ್ಬರ 1.0 ಟನ್
ಈ ಜೈವಿಕ ಗೊಬ್ಬರಗಳು
ರೈಜೋಬಿಯಂ ಅಣುಜೀವಿ ಗೊಬ್ಬರ 2.5 ಕಿ.ಗ್ರಾಂ
ರಂಜಕ ಕರಗಿಸುವ ಅಣುಜೀವಿ ಗೊಬ್ಬರ 2.5 ಕಿ.ಗ್ರಾಂ
ಉ.ರಾಸಾಯನಿಕ ಗೊಬ್ಬರಗಳು
ಸಾರಜನಕ
|
25 ಕಿ.ಗ್ರಾಂ
|
ರಂಜಕ
|
50 ಕಿ.ಗ್ರಾಂ
|
ಪೋಟ್ಯಾಷ್
|
25 ಕಿ.ಗ್ರಾಂ
|
ಜಿಪ್ಸಂ
|
500 ಕಿ.ಗ್ರಾಂ
|
ಸತುವಿನ ಸಲ್ಫೇಟ್
|
25 ಕಿ.ಗ್ರಾಂ
|
ಕಬ್ಬಿಣದ ಸಲ್ಫೇಟ್
|
25 ಕಿ.ಗ್ರಾಂ
|
ಸೂಚನೆ
• ಮಣ್ನು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು.
• ಹುಳಿ ಮಣ್ಣಿನ ಪ್ರದೇಶಕ್ಕೆ ಮಣ್ನು ಪರೀಕ್ಷೆಯ ಆಧಾರದ ಮೇಲೆ ಸುಣ್ಣವನ್ನು ಸೇರಿಸಬೇಕು.
• ಗೆಜ್ಜೆ ಶೇಂಗಾ ಬಿತ್ತಿದ 35 ರಿಂದ 45 ದಿನಗಳ ನಂತರ ಕೊನೆಯ ಎಡೆಕುಂಟೆ ಹೊಡೆಯುವಾಗ ಜಿಪ್ಸ್ಂ ಉಪ್ಪನ್ನು ಬೆಳೆಯ ಸಾಲಿನ ಎರಡೂ ಬದಿಗೆ (ಬಾರಂಗಿ ಬಿಡುವ ಪ್ರದೇಶಕ್ಕೆ) ಕೊಡಬೇಕು. ಹಬ್ಬು ಶೇಂಗಾಕ್ಕೆ ಜಿಪ್ಸ್ಂ ಉಪ್ಪನ್ನು ಬೀಜ ಬಿತ್ತುವ ಸಮಯದಲ್ಲಿಯೇ ಕೊಡುವುದು ಸೂಕ್ತ.
• ರಂಜಕ ಗೊಬ್ಬರವನ್ನು ಸೂಪರ್ ಫಾಸ್ಫೇಟ್ ಮುಖಾಂತರ ಕೊಡುವುದರಿಂದ ರಂಜಕದ ಜೊತೆಗೆ ಬೆಳೆಗೆ ಬೇಕಾಗುವ ಕ್ಯಾಲ್ಸಿಯಂ ಹಾಗೂ ಗಂಧಕ ಪೂರೈಸಿದಂತಾಗುತ್ತದೆ.
• ಅಧಿಕ ಸುನ್ಣಯುಕ್ತ (ಕ್ಯಾಲ್ಸಿಯಂ) ಕಪ್ಪು ಭೂಮಿ ಹಾಗೂ ಅಂತಹ ಭೂಮಿಯನ್ನು ನೀರಾವರಿಗೆ ಅಳವಡಿಸುವ ಸಂದರ್ಭಗಳಲ್ಲಿ ಕಬ್ಬಿಣದ ಕೊರತೆ ಕಂಡು ಬರುವುದು ಸಾಮಾನ್ಯ. ಇಂತಹ ಮಣ್ಣಿಗೆ ಕಬ್ಬಿಣದ ಸಲ್ಫೇಟ್ (25 ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ) ಕೊಡುವುದು ಸೂಕ್ತ.
• ಮರಳು ಮಿಶ್ರಿತ ಹಾಗೂ ಜೇಡಿಯುಕ್ತ ಮರಳು ಮಣ್ಣಿನಲ್ಲಿ ಸತುವಿನ ಕೊರತೆ ಕಂಡು ಬರುವುದು ಸಾಮಾನ್ಯ. ಇಂತಹ ಮಣ್ಣಿಗೆ ಸತುವಿನ ಸಲ್ಫೇಟ್ನ್ನು (25 ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ) ಕೊಡುವುದು ಸೂಕ್ತ.
• ಕಬ್ಬಿಣದ ಸಲ್ಫೇಟ್ ಮತ್ತು ಸತುವಿನ ಸಲ್ಫೇಟ್ ಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದಾದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಜೊತೆಗೆ ಬೀಜ ಬಿತ್ತುವ ಪೂರ್ವದಲ್ಲಿ ಕೊಡುವುದು ಸೂಕ್ತ.
• ಒಂದು ವೇಳೆ ಬೆಳೆಯ ಬೆಳವಣಿಗೆಯ ಹಂತದಲ್ಲಿ (ಬಿತ್ತಿದ 30 ರಿಂದ 50 ದಿವಸಗಳಲ್ಲಿ) ಅಧಿಕ ಪ್ರಮಾಣದ ಕಬ್ಬಿಣದ ಅಥವಾ ಸತುವಿನ ಕೊರತೆ ಕಂಡು ಬಂದಲ್ಲಿ, ಕ್ರಮವಾಗಿ ಶೇ. 0.5 ಕಬ್ಬಿಣದ ಸಲ್ಫೇಟ್ ಅಥವಾ ಶೇ. 0.5 ಸತುವಿನ ಸಲ್ಫೇಟ್ ದ್ರಾವಣವನ್ನು 15 ದಿನಗಳ ಅಂತರದಲ್ಲಿ 2 ರಿಂದ 3 ಬಾರಿ ಬಎಳೆಗೆ ಸಿಂಪಡಿಸುವುದು ಸೂಕ್ತ. ಬೆಳೆಯ ಮೇಲೆ ಕಬ್ಬಿಣದ ಸಲ್ಫೇಟ್ ಅಥವಾ ಸತುವಿನ ಸಲ್ಫೇಟ್ನಿಂದಾಗುವ ಹುಳಿಯ ದುಷ್ಪರಿಣಾಮಗಳನ್ನು ನಿಸ್ತೇಜನಗೊಳಿಸಲು ಸಿಂಪರಣಾ ದ್ರಾವಣಕ್ಕೆ ಶೇ. 0.5 ಸುಣ್ಣದ ತಿಳಿ ನೀರನ್ನು ಬೆರೆಸಬೇಕು.
• ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ ಜೊತೆಯಲ್ಲಿ ಪ್ರತಿ ಹೆಕ್ಟೇರಿಗೆ 1.0 ಟನ್ ಚಿನ್ನದ ಗಣಿ ತ್ಯಾಜ್ಯ ವಸ್ತುವನ್ನು ಮಣ್ಣಿಗೆ ಸೇರಿಸುವುದರಿಂದ ಇಳುವರಿ ಹೆಚ್ಚಾಗುವುದು ಮತ್ತು ಲಘುಪೋಷಕಾಂಶಗಳಾದ ತಾಮ್ರ, ಕಬ್ಬಿಣ, ಮ್ಯಾಂಗನೀಸ್ ಮತ್ತು ಸತುವು ಬೆಳೆಗೆ ದೊರೆಯುವುದು.
• ಶಿಫಾರಸು ಮಾಡಿದ ಶೇ. 75 ರಷ್ಟು ರಂಜಕ ಗೊಬ್ಬರದ ಜೊತೆಗೆ ಶೇ. 25 ರಷ್ಟು ರಂಜಕ ಭರಿತ ಜೈವಿಕ ಅನಿಲದ ರಾಡಿಯನ್ನು ಒದಗಿಸಬೇಕು.
ರಂಜಕ ಭರಿತ ಜೈವಿಕ ಅನಿಲದ ರಾಡಿಯ ಗೊಬ್ಬರದ ತಯಾರಿಕೆ ವಿಧಾನ
ಸೂಕ್ತವಾದ ತೊಟ್ಟಿಯಲ್ಲಿ 2000 ಲೀ. ಜೈವಿಕ ಅನಿಲದ ರಾಡಿಯನ್ನು ಹಾಕಿ 20 ಕಿ.ಗ್ರಾಂ ಶಿಲಾರಂಜಕ (ರಾಕ್ ಫಾಸ್ಫೇಟ್) ಮತ್ತು 2 ಕಿ.ಗ್ರಾಂ ರಂಜಕ ಕರಗಿಸುವ ಜೈವಿಕ ಗೊಬ್ಬರವನ್ನು (ಸೆರೆಶಿಯಾ ಮಾರ್ಸೆಸೆನ್ಸ್) ಮಿಶ್ರಣ ಮಾಡಬೇಕು. ರಾಡಿಯನ್ನು ಹೆಪ್ಪುಗಟ್ಟದಂತೆ ಎರಡು ದಿನಗಳಿಗೊಮ್ಮೆ ಕಲಸುತ್ತಿರಬೇಕು. ನಲವತ್ತು ದಿನಗಳ ನಂತರ ರಾಡಿಯ ತೇವಾಂಶ ಶೇ. 40 ರಷ್ಟು ಇರುವಾಗ ಒಂದು ಎಕರೆಗೆ ಉಪಯೋಗಿಸಬೇಕು. ಇದರಿಂದ ಬೆಳೆಗೆ ಶಿಫಾರಸು ಮಾಡಿರುವ ಶೇ. 25 ರಷ್ಟು ರಂಜಕ ರಸಗೊಬ್ಬರವನ್ನು ಕಡಿಮೆ ಮಾಡಬಹುದು.