:
ಬೇಸಾಯ ಸಾಮಗ್ರಿಗಳು
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1. ಮೃದು ಕಾಂಡದ ತುಂಡುಗಳು ಅಥವಾ ಕಂದುಗಳು 60,000-1,00,000
ಬಿತ್ತನೆ ಕಾಲ
ತಂಪಾದ ವಾತಾವರಣ ಮತ್ತು 16-180 ಸೆಲ್ಸಿಯಸ್ ರಾತ್ರಿಯ ಉಷ್ಣಾಂಶವಿರುವ ಹವಾಮಾನ ಈ ಬೆಳೆಗೆ ಯೋಗ್ಯ. ಮುಖ್ಯ ಬೆಳೆಯ ಕಾಲ ಆಗಸ್ಟ್ನಿಂದ ನವೆಂಬರ್. ಬೆಳೆಯನ್ನು ಫೆಬ್ರವರಿ-ಮಾರ್ಚ್ ನಲ್ಲಿ ಪ್ರಾರಂಭಿಸಬಹುದು.
ಭೂಮಿಯನ್ನು ಆಳವಾಗಿ, ಮುರು ನಾಲ್ಕು ಸಲ ಉಳುಮೆ ಮಾಡಿ ಹದಗೊಳಿಸಬೇಕು. ಪ್ರತಿ ಹೆಕ್ಟೇರಿಗೆ 20 ಟನ್ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. ಏರು ಮಡಿಗಳನ್ನು 30-45 ಸೆಂ.ಮೀ. ಅಂತರದಲ್ಲಿ ತಯಾರಿಸಿ ಕಾಲುವೆಗಳಲ್ಲಿ ಪ್ರತಿ ಹೆಕ್ಟೇರಿಗೆ 40 ಕಿ.ಗ್ರಾಂ ಸಾರಜನಕ, 150 ಕಿ.ಗ್ರಾಂ ರಂಜಕ ಮತ್ತು 100 ಕಿ.ಗ್ರಾಂ ಪೊಟ್ಯಾಷ್ಯುಕ್ತ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಮಿಶ್ರಣಗೊಳಿಸಬೇಕು. ಮೃದು ಕಾಂಡದ ತುಂಡುಗಳನ್ನು ಇಲ್ಲವೆ ಕಂದುಗಳನ್ನು ಬದುಗಳ ಒಂದು ಬದಿಗೆ 30-40 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಸಸಿಗಳ ತುದಿಗಳನ್ನು ಚಿವ್ರಟಿದ ಸಮಯದಲ್ಲಿ ಪ್ರತಿ ಹೆಕ್ಟೇರಿಗೆ 40 ಕಿ.ಗ್ರಾಂ ಸಾರಜನಕ ಹಾಗೂ ಒಂದು ತಿಂಗಳ ನಮತರ 40 ಕಿ.ಗ್ರಾಂ ಸಾರಜನಕ ಗೊಬ್ಬರವನ್ನು ಮೇಲುಗೊಬ್ಬರ ರೂಪದಲ್ಲಿ ಬೆಳೆಗೆ ಒದಗಿಸಬೇಕು.