:
ತಳಿಗಳು
1.ಈರನಗೆರೆ : ಇದು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಬಹಳ ವರ್ಷಗಳಿಂದ ಪ್ರಚಾರದಲ್ಲಿರುವ ಸ್ಥಳೀಯ ತಳಿ. ಹಸಿರು ಬಣ್ಣದ 15 ರಿಂದ 20 ಸೆಂ.ಮೀ. ಉದ್ದವಿರುವ ಕಾಯಿಗಳನ್ನು ಬಿಡುತ್ತದೆ.
2.ಕಂಗೇರಿ : ಬೆಂಗಳೂರು ಜಿಲ್ಲೆಯಲ್ಲಿ ಪ್ರಚಾರದಲ್ಲಿರುವ ಸ್ಥಳೀಯ ತಳಿ. ಕಂದು ಬಣ್ಣದ 15 ರಿಂದ 20 ಸೆಂ.ಮೀ. ಉದ್ದದ ಕಾಯಿಗಳು ಬಿಡುತ್ತವೆ.
3.ಅರ್ಕಾ ಶೀಲ್: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು, ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಮತ್ತು ಎಲೆಗಳು ಹಸಿರು ಬಣ್ಣದಿಂದ ಕೂಡಿರುತ್ತದೆ. ಬಎಳೆಯ ಅವಧಿ 150 ರಿಂದ 160 ದಿವಸಗಳು. ಇದರ ಕಾಯಿಗಳು ಮಧ್ಯಮ ಉದ್ದನಾಗಿದ್ದು ಹೊಳೆಯುವ ಕಡು ನೇರಳೆ ಬಣ್ಣದ ಸಿಪ್ಪೆಯನ್ನು ಹೊಂದಿರುತ್ತವೆ. ಒಂದು ಹೆಕ್ಟೇರಿಗೆ 38 ಟನ್ ಇಳುವರಿ ಪಡೆಯಬಹುದು.
4.ಅರ್ಕಾ ಶಿರೀಶ್: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ತೆ ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ, ಎಲೆಗಳು ಹಸಿರಾಗಿದ್ದು ಹೂವುಗಳ ಬಣ್ಣ ಬಿಳುಪಾಗಿರುತ್ತದೆ. ಈ ತಳಿಯ ಕಾಯಿಗಳು ಜಾಸ್ತಿ ಉದ್ದವಾಗಿದ್ದು, ಹಸಿರು ಬಣ್ಣವನ್ನು ಹೊಂದಿರುತ್ತವೆ. ಬೆಳೆಯ ಅವಧಿ 140-150 ದಿವಸಗಳು. ಒಂದು ಹೆಕ್ಟೇರಿಗೆ 39 ಟನ್ ಇಳುವರಿ ಪಡೆಯಬಹುದು.
5. ಅರ್ಕಾ ಕುಸುಮಾಕರ್: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಹರಡಿಕೊಂಡು ಬೆಳೆಯುತ್ತವೆ. ಎಲೆಗಳು ಮತ್ತು ಕಾಂಡದ ಭಾಗ ಹಸಿರಾಗಿರುತ್ತವೆ. ಹೂವಿನ ಬಣ್ಣ ಬಿಳುಪಾಗಿದ್ದು, ಕಾಯಿಗಳು ಹಸಿರಾಗಿದ್ದು, ಗೊಂಚಲಾಗಿರುತ್ತವೆ. ಬೆಳೆಯ ಅವಧಿ 140-150 ದಿವಸಗಳು. ಒಂದು ಹೆಕ್ಟೇರಿಗೆ 40 ಟನ್ ಇಳುವರಿ ಪಡೆಯಬಹುದು.
6.ಅರ್ಕಾ ನಿಧಿ: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಮತ್ತು ಪೊದೆಯಾಕಾರಾದಲ್ಲಿರುತ್ತವೆ. ಕಾಯಿಗಳು ಮಧ್ಯಮ ಉದ್ದವಿದ್ದು ಗೊಂಚಲಾಗಿರುತ್ತವೆ. ಕಾಯಿಗಳು ಹೊಳೆಯುವ ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿರುತ್ತವೆ. ಈ ತಳಿಯು ದುಂಡಾಣು ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. ಬೆಳೆಯ ಅವಧಿ 150 ದಿನಗಳು. ಒಂದು ಹೆಕ್ಟೇರಿಗೆ 48.5 ಟನ್ ಇಳುವರಿ ಪಡೆಯಬಹುದು.
7.ಅರ್ಕಾ ಕೇಶವ್: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿದ್ದು, ಹೆಚ್ಚಿನ ಸಂಖೈಯಲ್ಲಿ ಕವಲು ರೆಂಬೆಗಳನ್ನು ಹೊಂದಿರುತ್ತವೆ. ಕಾಯಿಗಳು ಉದ್ದವಾಗಿದ್ದು, ಗೊಂಚಲಾಗಿರುತ್ತವೆ. ಕಾಯಿಗಳ ಬಣ್ಣ ಹೊಳೆಯುವ ಕೆಂಪು ಮಿಶ್ರಿತ ನೇರಳೆ ಬಣ್ಣ ಹೊಂದಿರುತ್ತದೆ. ಈ ತಳಿಗೆ ದುಂಡಾಣು ಸೊರಗು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 150 ದಿವಸಗಳು, ಒಂದು ಹೆಕ್ಟೇರಿಗೆ 45 ಟನ್ ಇಳುವರಿ ಪಡೆಯಬಹುದು.
8. ಅರ್ಕಾ ನೀಲಕಂಠ್: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿದ್ದು, ಪೊದೆಯಾಕಾರದಲ್ಲಿರುತ್ತವೆ ಕಾಯಿಗಳು ಚಿಕ್ಕದಾಗಿದ್ದು, ಗೊಂಚಲಾಗಿರುತ್ತವೆ. ಕಾಯಿಗಳ ಬಣ್ಣ ಹೊಳೆಯುವ ನೀಲಿ ಮಿಶ್ರಿತ ನೇರಳೆ ಬಣ್ಣವನ್ನು ಹೊಂದಿರುತ್ತವೆ. ಈ ತಳಿಗೆ ದುಂಡಾಣು ಸೊರಗು ರೋಗವನ್ನು ನಿರೋಧಿಸುವ ಶ್ಕತಿ ಇದೆ. ಬೆಳೆಯ ಅವಧಿ 150 ದಿವಸಗಳು. ಒಂದು ಹೆಕ್ಟೇರಿಗೆ 43 ಟನ್ ಇಳುವರಿ ಪಡೆಯಬಹುದು.
9.ಪಂಜಾಬ್ ಮೋತಿ: ಈ ತಳಿ ಗಿಡ್ಡವಾಗಿದ್ದು. ಪೊದೆಯಾಕಾರದಲ್ಲಿ ಬೆಳೆಯುತ್ತವೆ. ಎಲೆ, ಕಾಂಡ ಮತ್ತು ಹೂ ನೇರಲೆ ಬಣ್ಣದ್ದಾಗಿರುತ್ತವೆ. ಕಾಯಿಗಳು (ನೇರಲೆ ಬಣ್ಣ, ಮಧ್ಯಮ ಗಾತ್ರ) ಅಂಡಾಕಾರವಾಗಿದ್ದು ಗೊಂಚಲಾಗಿರುತ್ತವೆ. ಮಳೆಯಾಶ್ರಯದಲ್ಲಿ ಬೆಳೆಯ ಅವಧಿ 115 ರಿಂದ 120 ದಿವಸಗಳು. ಒಂದು ಹೆಕ್ಟೇರಿಗೆ ಸುಮಾರು 8-10 ಟನ್ ಇಳುವರಿ ಪಡೆಯಬಹುದು. ಇದನ್ನು ವಲಯ 7ಕ್ಕೆ ಮಳೆಯಾಶ್ರಯದಲ್ಲಿ ಬೆಳೆಯಲು ಶಿಫಾರಸ್ಸು ಮಾಡಿದೆ.
ಬದನೆಯಾಯಿ ಸಂಕರಣ ತಳಿಗಳು
1.ಅರ್ಕಾ ನವನೀತ್: ಈ ಸಂಖರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇಲ್ಲಿಂದ ಅಭಿವೃದ್ಧಿಪಡಿಸಿದೆ. ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ಎಲೆಗಳೂ ಹಸಿರು ಬಣ್ಣದಿಂದ ಕೂಡಿರುತ್ತದೆ. ಕಾಯಿಗಳು ಅಂಡಾಕಾರವಾಗಿದ್ದು ಹೊಳೆಯುವ ಕಡು ನೇರಳೆ ಬಣ್ಣವನ್ನು ಹೊಂದಿರುತ್ತವೆ. ಒಂದು ಕಾಯಿಯ ಸರಾಸರಿ ತೂಕ 450 ಗ್ರಾ< ಬೆಳೆಯ ಅವದಿ 150-160 ದಿವಸಗಳು, ಒಂದು ಹೆಕ್ಟೇರಿಗೆ 65-70 ಟನ್ ಇಳುವರಿ ಬರುತ್ತದೆ.
2.ಅರ್ಕಾ ಅನಂದ್: ಮಳೆಗಾಲ ಹಾಗೂ ಚಳಿಗಾಲಕ್ಕೆ ಸೂಕ್ತ ಸಂಕರಣ ತಳಿಯಾಗಿದ್ದು, ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯನ್ನು ಪಡೆದಿದೆ. ಹಣ್ಣುಗಳೂ ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿರುತ್ತವೆ (22-24 ಸಎಂ.ಮೀ.) ಮತ್ತು ಗೊಂಚಲುಗಳಲ್ಲಿರುತ್ತವೆ. ಸುಮಾರು 60-65 ದಿನಗಳಲ್ಲಿ ಹಣ್ಣುಗಳೂ ಕೊಯ್ಲಿಗೆ ಬರುವ ಈ ತಳಿಯು ಪ್ರತಿ ಹೆಕ್ಟೇರಿಗೆ 60-65 ಟನ್ ಇಳುವರಿ ಕೊಡುತ್ತದೆ.
ಕರಾವಳಿ ಪ್ರದೇಶಕ್ಕೆ
1.ಮಟ್ಟಿಗುಳ್ಳ: ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತಮ ತಳಿ. ಹಸಿರು ಬಣ್ಣದ ಕಾಯಿಂದ ಕೂಡಿದ್ದು, ಎಲೆಗಳ ಮೇಲೆ ಮುಳ್ಳುಗಳಿರುತ್ತವೆ.
2.ವೆಸ್ಟ್ಕೋಸ್ಟ್ ಗ್ರೀನ್ರೌಂಡ್: ಇದೂ ಕೂಡಾ ಮಟ್ಟ ಗುಳ್ಳದಂತೆ ಕಾಯಿಗಳು ಗಾತ್ರದಲ್ಲಿ ದಪ್ಪವಿದ್ದು, ಗಿಡಗಳು ಮುಳ್ಳು ರಹಿತವಾಗಿರುತ್ತವೆ. ಇದು ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
ಗುಡ್ಡಗಾಡು ಪ್ರದೇಶಕ್ಕೆ
ಅರ್ಕಾ ಶೀಲ್, ಅರ್ಕಾ ಶಿರೀಶ್, ಅರ್ಕಾ ಕುಸುಮಾಕರ್, ಅರ್ಕಾ ನವನೀತ್, ಪೂಸಕ್ರಾಂತಿ, ಮಟ್ಟುಗುಳ್ಳ ತಳಿಗಳು ಸೂಕ್ತ.