1. ಪ್ರಮುಖರಸಹೀರುವಕೀಟಗಳು
|
ಜಿಗಿಹುಳು
|
ಥ್ರಿಪ್ಸ್ನುಸಿ
|
ಹೇನು
|
ಬಿತ್ತಿದ 15-20 ದಿನಗಳಲ್ಲಿ ಕಂಡು ಬರುವುದು. ಎಲೆಗಳ ಕೆಳಗೆ ಅಡ್ಡಡ್ಡವಾಗಿ ಹರಿದಾಡುವ ಈ ಕೀಟದ ಫ್ರೌಢ ಮತ್ತು ಮರಿ ಹುಳುಗಳು ರಸ ಹೀರುವುದರಿಂದ ಎಲೆಯ ಅಂಚುಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಕೆಂಪಾಗುತ್ತವೆ. ಬಾಧೆ ಹೆಚ್ಚಾದಲ್ಲಿ ಎಲೆಗಳು ಒಣಗುತ್ತವೆ.
|
ಚಿಕ್ಕ ಗಾತ್ರದ ಪ್ರೌಢ ಮತ್ತು ಮರಿ ಥ್ರಿಪ್ಸ್ ನುಸಿಗಳು ಎಲೆಯ ಕೆಳಗಡೆಯಿಂದ ರಸ ಹೀರುವುದರಿಂದ ಎಲೆಗಳು ಮೊದಲು ಬಿಳಿ ವರ್ಣಕ್ಕೆ ತಿರುಗುತ್ತವೆ. ಬಾಧೆ ಹೆಚ್ಚಾದಂತೆ ಎಲೆಗಳು ಬಿರುಸಾಗಿ ಹರಿಯುವುದು ತೀವ್ರವಾದ ಬಾಧೆಯ ಲಕ್ಷಣವಾಗಿರುತ್ತದೆ.
|
ಬೆಳೆಯು ಚಿಕ್ಕದಿರುವಾಗ ಈ ಕೀಟಗಳ ಬಾಧೆಯು ಪ್ರಾರಂಭವಾಗುತ್ತದೆ. ಪ್ರೌಢ ಮತ್ತು ಮರಿ ಹೇನುಗಳು ಎಲೆಗಳ ಕೆಳಗಡೆ ರಸ ಹೀರಿ ಸಿಹಿ ಪದಾರ್ಥಗಳನ್ನು ಎಲೆಯ ಮೇಲೆ ಸ್ರವಿಸುವುದರಿಂದ ಕಪ್ಪು ಬೂಷ್ಟು ಬೆಳೆದು ಎಲೆಪೂರ್ತಿ ಕಪ್ಪಾಗುತ್ತವೆ. ಇದರ ಬಾಧೆ ತಂಪು ವಾತಾವರಣದಲ್ಲಿ (ನವ್ಹೆಂಬರ್/ಡಿಸೆಂಬರ್) ಇನ್ನಷ್ಟು ತೀವ್ರವಾಗುತ್ತದೆ.
|
ನಿರ್ವಹಣಾಕ್ರಮಗಳು
ಬೀಜೋಪಚಾರ
ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬೀಜವನ್ನು 10 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲೂ.ಎಸ್. ಅಥವಾ 5 ಗ್ರಾಂ. ಥಯಾಮಿಥಾಕ್ಸಾಮ್ 70 ಡಬ್ಲೂ.ಎಸ್ ದಿಂದ ಬೀಜೋಪಚಾರ ಮಾಡುವುದರಿಂದ ಮೊದಲ ಹಂತದಲ್ಲಿ ಬರುವ ರಸ ಹೀರುವ ಕೀಟಗಳನ್ನು 35-40 ದಿನಗಳವರೆಗೆ ನಿಯಂತ್ರಿಸಬಹುದು.
|
ಕೀಟನಾಶಕಸಿಂಪರಣೆ
ಕೀಟನಾಶಕಗಳ ಸಿಂಪರಣೆ: ಅವಶ್ಯವಿದ್ದಲ್ಲಿ ರಸಹೀರುವ ಕೀಟಗಳ ಗರಿಷ್ಠ ಆರ್ಥಿಕ ಸಂಖ್ಯೆಯನ್ನು (ಇಟಿಎಲ್) ಆಧರಿಸಿ ಶೇ. 5ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ ಅಂತರ್ವ್ಯಾಪಿ ಕೀಟನಾಶಕಗಳಾದ 0.10 ಗ್ರಾಂ ಫಿಪ್ರೋನಿಲ್ 80 ಡಬ್ಲು. ಈ ಅಥವಾ 0.075 ಗ್ರಾಂ ಕ್ಲೋಥೈನಿಡಿಯಾನ್ 50 ಡಬ್ಲು. ಖಜಿ ಅಥವಾ 1.5 ಮಿ.ಲೀ> ಆಕ್ಸಿಡೆಮೆಟಾನ್ ಮೀಥೈಲ್ 25 ಇ.ಸಿ. ಅಥವಾ 2.0 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಅಥವಾ 0.2 ಗ್ರಾಂ ಅಸಿಟಾಮಿಪ್ರಿಡ್ 20 ಎಸ್.ಪಿ ಅಥವಾ 0.2 ಗ್ರಾಂ ಥೈಯಾಮೆಥಾಕ್ಸಾಮ್ 25 ಡಬ್ಲೂಜಿ ಒಂದು ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಕ್ಟೇರಿಗೆ 400-500 ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ. ಅಥವಾ 1.0 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಕೀಟನಾಶಕವನ್ನು 20 ಮಿ.ಲೀ. ನೀರಿನಲ್ಲಿ ಬೆರೆಸಿದ ಸಸ್ಯದ ಕುಡಿಯ ಭಾಗದ ಕಾಂಡಕ್ಕೆ ಒಂದು ಅಂಗುಲದಷ್ಟು ಲೇಪನ ಮಾಡಬೇಕು. ಒಂದು ಹೆಕ್ಟೇರಿಗೆ 30-40 ಮಿ.ಲೀ. ಕೀಟನಾಶಕವು ಬೇಕಾಗುತ್ತದೆ.
|
2. ಇತರೆರಸಹೀರುವಕೀಟಗಳು
|
ಎಲೆ ಸುರಂಗ ಕೀಟ
|
ಬೆಳೆಯು 2-3 ಎಲೆಗಳ ಹಂತದಲ್ಲಿ ಇದ್ದಾಗ ಹಾನಿಯು ಪ್ರಾರಂಭವಾಗುತ್ತದೆ. ಕೀಟವು ಹಾವಿನ ಆಕಾರದಲ್ಲಿ ಸುರಂಗ ಕೊರೆಯುವುದರಿಂದ ಎಲೆಗಳು ಬೆಳ್ಳಗೆ ಕಾಣುತ್ತವೆ. ಬೆಳೆಯು 40-50 ದಿನಗಳವರೆಗೆ ಈ ಕೀಟದ ಬಾಧೆ ಕಾಣಿಸಿಕೊಳ್ಳುತ್ತದೆ.
|
ಬಾಧೆ ತೀವ್ರವಾಗಿದ್ದಲ್ಲಿ ಮೇಲೆ ನಮೂದಿಸಿದ ಯಾವುದಾದರೊಂದು ಅಂತರವ್ಯಾಪಿ ಕೀಟನಾಶಕವನ್ನು ಉಪಯೋಗಿಸಬಹುದು.
|
ಬಿಳಿ ನೋಣ
|
ಬೆಳೆಯ 50 ದಿನಗಳಿಂದ ಪ್ರಾರಂಭವಾಗುತ್ತದೆ. ಪ್ರೌಢ ಕೀಟಗಳು ಎಲೆಯ ಕೆಳಭಾಗದಲ್ಲಿ ಮತ್ತು ಮರಿ ಕೀಟಗಳು ಮಧ್ಯಭಾಗದಿಂದ ರಸ ಹೀರುವುದರಿಂದ ಎಲೆಗಳೂ ಹಳದಿಯಾಗುತ್ತವೆ.
ಕೀಟಗಳು ಸಿಹಿ ಪದಾರ್ಥವನ್ನು ಎಲೆಗಳ ಮೇಲೆ ಸ್ರವಿಸುವುದರಿಂದ ಕಪ್ಪು ಬೂಷ್ಟು ಬೆಳೆದು ಎಲೆಗಳಲ್ಲಿ ಆಹಾರ ಉತ್ಪಾದನೆ ಕಡಿಮೆ ಆಗುತ್ತದೆ. ಇದರಿಂದ ಮೊಗ್ಗು ಮತ್ತು ಸಣ್ಣ ಕಾಯಿಗಳು ಉದುರುತ್ತವೆ.
|
ಪ್ರತಿ ಎಕರೆಗೆ 20 ರಂತೆ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆಯ ಎತ್ತರಕ್ಕೆ ನೆಡಬೇಕು. ಶೇ. 5ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ 1.5 ಮಿ.ಲೀ. ಟ್ರೈಜೋಫಾಸ್ 40 ಇ.ಸಿ. ಕೀಟನಾಶಕಗಳನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಆರ್ಥಿಕ ಗರಿಷ್ಠ ಮಿತಿ ಆಧರಿಸಿ ಸಿಂಪರಿಸಬೇಕು.
|
ಮೈಟ ನುಶಿ
|
ಮೈಟನುಶಿಗಳು ಸಾಮಾನ್ಯವಾಗಿ ಬೆಳೆಯ ಕೊನೆಹಂತದಲ್ಲಿ ಬರುತ್ತವೆ. ಇವು ಕೆಂಪಾಗಿದ್ದು ಎಲೆಗಳ ಕೆಳಗಡೆ ಉಚ್ಚಿ ರಸ ಹೀರುವುದರಿಂದ. ಬಾಧೆ ಹೆಚ್ಚಾದಲ್ಲಿ ಇಳುವರಿ ಮತ್ತು ಗುಣಮಟ್ಟ ಕಡಿಮೆ ಆಗುತ್ತದೆ.
|
ಪ್ರತಿ ಲೀ. ನೀರಿಗೆ 2.50 ಗ್ರಾಂ ಡಐಕೋಫಾಲ್ 18.5 ಇ.ಸಿ. ಬೆರೆಸಿ ಸಿಂಪಡಿಸಬೇಕು.
|
ಮಿರಿಡ್ ತಿಗಣೆ
|
ಪ್ರೌಢ ಮತ್ತು ಮರಿ ತಿಗಣೆಗಳು ಗಿಡದ ತುದಿ, ಮೊಗ್ಗು, ಎಳೆಯ ಎಲೆ ಮತ್ತು ಚಿಕ್ಕ ಗಾತ್ರದ ಕಾಯಿಗಳಿಂದ ರಸ ಹೀರುತ್ತವೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಗ್ಗು ಹಾಗೂ ಸಣ್ಣ ಕಾಯಿಗಳು ಉದುರುತ್ತವೆ. ಬಾಧಿತ ಕಾಯಿಗಳ ಮೇಲೆ ಕಪ್ಪು ಕಲೆಗಳು ಕಂಡು ಬಂದು, ಗಿಣಿ ಮೂಗಿನ ಆಕಾರ ಹೊಂದುತ್ತವೆ. ಕಾಯಿಗಳು ಇರುಕಲಾಗುತ್ತವೆ. ಬೆಳೆಯ 55-120 ದಿನಗಳವರೆಗು ಕಂಡುಬರುತ್ತದೆ.
|
1.0 ಗ್ರಾಂ ಅಸಿಫೇಟ್ 75 ಎಸ್.ಪಿ ಅಥವಾ 1.0 ಮಿ.ಲೀ. ಪಿಪ್ರೋನಿಲ್ 5 ಎಸ್.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
|
ಕೆಂಪು ತಿಗಣೆ ಹಾಗೂ ಬೂದು ಬಣ್ಣದ ತಿಗಣೆ
|
ಬೆಳೆಯ ಕೊನೆ ಹಂತದಲ್ಲಿ ಕಾಣಿಸಿಕೊಂಡು ಕಾಯಿಗಳಿಂದ ರಸ ಹೀರುವುದರಿಂದ ಕಾಯಿ ಸರಿಯಾಗಿ ಒಡೆಯುವುದಿಲ್ಲ ಹತ್ತಿಯು ಕಲೆಯಾಗಿ, ಹತ್ತಿ ಮತ್ತು ಬೀಜದ ಗುಣಮಟ್ಟ ಕಡಿಮೆಯಾಗುತ್ತದೆ.
|
ಮೇಲೆ ತಿಳಿಸಿದ ಯಾವುದಾದರೂ ಸಂಪರ್ಕ ಕೀಟನಾಶಕವನ್ನು ಬಳಸಿ ಹತೋಟಿ ಮಾಡಬಹುದು.
|
ಹಿಟ್ಟು ತಿಗಣೆ
|
ಅಪ್ಸರೆ ಮತ್ತು ಪ್ರೌಢ ಕೀಟಗಳು ಇಲೆ, ಕಾಯಿ, ದೇಟು ಮುಂತಾದ ಭಾಗಗಳಿಂದ ರಸ ಹೀರುವುದಲ್ಲದೆ ತಮ್ಮ ದೇಹದಿಂದ ಸಿಹಿ ಪದಾರ್ಥವನ್ನು ಸ್ರವಿಸುವುದರಿಂದ ಕಪ್ಪಾದ ಶಿಲೀಂಧ್ರದ ಬೂಸ್ಟ್ ಬೆಳೆದು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ವ್ಯತ್ಯಯವಾಗಿ ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
|
ಹಿಟ್ಟು ತಿಗಣೆಯ ಹತೋಟಿಗಾಗಿ 1.0 ಮಿ.ಲೀ. ಬುಪ್ರೊಫೆಜಿನ್ 25 ಎಸ್.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
|
3. ಕಾಯಿಕೊರಕಗಳಬಾಧೆಯಲಕ್ಷಣಗಳುಹಾಗೂನಿರ್ವಹಣಾಕ್ರಮಗಳು
|
ಕೀಟ ಕಾಂಡ ಕೊರೆಯುವ ಮೂತಿಹುಳು
|
ಪ್ರೌಢ ದುಂಬಿಗಳು ಕಾಂಡದ ಮೇಲೆ ಮೊಟ್ಟೆ ಇಡುತ್ತವೆ. ಮರಿ ಹುಳುಗಳು ಕಾಂಡ ಕೊರೆದು ಒಳಗೆ ಸೇರಿ ಕಾಂಢದ ತಿರುಳನ್ನು ತಿಂದು ಅಲ್ಲಿಯೇ ಕೋಶಾವಸ್ಥೆ ಹಾಗೂ ಪ್ರೌಢಾವಸ್ಥೆ ಹಂತ ತಲುಪುತ್ತದೆ. ಬಾಧೆಗೊಳಗಾದ ಗಿಡಗಳ ಕಾಂಡವು ಟೊಳ್ಳಾಗುವುದರಿಂದ ಗಿಡಗಳು ಮುರಿದು ಬೀಳುತ್ತವೆ.
|
ಪ್ರತಿ 20 ಸಾಲು ಹತ್ತಿಗೆ ಒಂದು ಸಾಲು ಬೆಂಡೆಯನ್ನು ಬಿತ್ತಬೇಕು. ಮುಂಜಾನೆ ವೇಳೆಯಲ್ಲಿ ಬೆಂಡಿ ಗಿಡಗಳ ಮೇಲೆ ಕಂಡು ಬರುವ ಪ್ರೌಢಮೂತಿ ಹುಳುಗಳನ್ನು ಆರಿಸಿ ನಾಶಪಡಿಸಬೇಕು.
|
4. ಕಾಯಿಕೊರಕಗಳಬಾಧೆಯಲಕ್ಷಣಗಳುಹಾಗೂನಿರ್ವಹಣಾಕ್ರಮಗಳು
|
ಚುಕ್ಕೆಕಾಯಿಕೊರಕ
|
ಹಿಲಿಯೋಥಿನ್ಅಥವಾಹೆಲಿಕೋವರ್ಪಕಾಯಿಕೊರಕ
|
ಗುಲಾಬಿಕಾಯಿಕೊರಕ
|
ಬೆಳೆಯು 35-40 ದಿನಗಳಾದ ಕೀಟಗಳು ಸಸ್ಯದ ಕುಡಿಯನ್ನು ಕೊರೆಯುವುದರಿಂದ ಕುಂಠಿತವಾಗಿ ಕವಲುಗಳ ಸಂಖ್ಯೆ ಹೆಚ್ಚಾಗುತ್ತದೆ. ನಂತರ ಕೀಡೆಗಳು ಹೂ, ಮೊಗ್ಗು ಮತ್ತು ಕಾಯಿಗಳಲ್ಲಿ ರಂಧ್ರ ಕೊರೆದು ತಿಂದು ನಾಶಪಡಿಸುತ್ತವೆ. ಇದರಿಂದಾಗಿ ಮೊಗ್ಗಿನ ಪಕಳೆಗಳು ಅಗಲವಾಗಿ ನಂತರ ಉದುರುತ್ತವೆ.
|
ಕೀಡೆಗಳು ಹತ್ತಿ ಮೊಗ್ಗು ಮತ್ತು ಬೆಳವಣಿಗೆ ಹಂತದ ಕಾಯಿಗಳಲ್ಲಿ ರಂಧ್ರಗಳಣ್ನು ಕೊರೆದು ಶರೀರದ ಅರ್ಧ ಭಾಗವನ್ನು ರಂಧ್ರದಲ್ಲಿ ತೂರಿಸಿ ತಿರುಳನ್ನು ತಿಂದು ನಾಶಪಡಿಸುತ್ತದೆ. ಬಾಧಿತ ಮೊಗ್ಗಿನ ಪಕಳೆಗಳು ಅಗಲವಾಗಿ ನಂತರ ಉದುರುತ್ತವೆ.
|
ಗುಲಾಬಿ ವರ್ಣದ ಮರಿಹುಳು, ಮೊಗ್ಗು ಹೂ ಮತ್ತು ಬೆಳೆಯುವ ಹಂತದ ಕಾಯಿಗಳನ್ನು ಬಾಧಿಸುತ್ತವೆ. ಬಾಧಿತ ಹೂಗಳು ಬುಗರಿಯ ಆಕಾರಕ್ಕೆ ತಿರುಗುತ್ತವೆ. ಈ ಕೀಟವು ಎಳೆಯ ಕಾಯಿಗಳಲ್ಲಿ ಸೇರಿಕೊಂಡು ಬೀಜಗಳನ್ನು ತಿನ್ನುತ್ತವೆ. ಕಾಯಿಒಡೆದ ನಂತರ ಮಾತ್ರ ಬಾಧೆಗೊಳಗಾದ ಕಾಯಿಗಳು ಇರುಕಲಾಗಿ ಒಡೆಯುತ್ತವೆ.
|
ನಿರ್ವಹಣಾಕ್ರಮಗಳು
|
* ಕಾಯಿಕೊರಕ ಕೀಟಗಳ ಸಮೀಕ್ಷೆ ಮಾಡಲು 40 ದಿನದ ಬೆಳೆಯಲ್ಲಿ ಪ್ರತಿ ಹೆಕ್ಟೇರಿಗೆ ಐದು ಮೋಹಕ ಬಲೆಗಳನ್ನು 50 ಮೀಟರ್ ಅಂತರದಲ್ಲಿ ನೆಡಬೇಕು. ಹದಿನೈದು ದಿನಕ್ಕೊಮ್ಮೆ ಲಿಂಗಾಕರ್ಷಕ ವಸ್ತುವನ್ನು (ಲೂರ್) ಬದಲಾಯಿಸಬೇಕು
|
* ಕಾಯಿಕೊರಕ ತತ್ತಿ ಸಂಖ್ಯೆ ಆಧರಿಸಿ ತತ್ತಿ ನಾಸಕಗಳಾದ 2.0 ಮಿ.ಲೀ. ಪ್ರೋಫೆನ್ಫಾಸ್ 50 ಇ.ಸಿ ಅಥವಾ 1.0 ಗ್ರಾಂ ಥೈಯೋಡಿಕಾರ್ಬ್ 75 ಡಬ್ಲೂಪಿ ಯನ್ನು ಪ್ರತಿ ಲೀ. ನೀರಿನಲ್ಲಿ ಕರಗಿಸಿ ಸಿಂಪರಿಸಬೇಕು. ನೀರಾವರಿ ಹತ್ತಿಯಲ್ಲಿ 0.6 ಗ್ರಾಂ ಮಿಥೋಮಿಲ್ 40 ಎಸ್.ಪಿ ಯನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು.
|
* ಹಿಲಿಯೋಥಿಸ್ ಕೀಡೆ ಸಣ್ಣದಿದ್ದಾಗ ಪ್ರತಿ ಹೆಕ್ಟೇರಿಗೆ 500 ಎಲ್.ಇ.ಎನ್.ಪಿ.ವ್ಹಿ. ನಂಜಾಣುವಿನ ಜೊತೆಗೆ ಶೇ. 5ರ ಬೆಲ್ಲದ ನೀರು ಮತ್ತು ಶೇ. 0.1 ಬೋರಿಕ್ ಆಮ್ಲ ಕೂಡಿಸಿ ಸಿಂಪರಿಸಬೇಕು. ಎನ್.ಪಿ.ವಿ.ಯನ್ನು ತಂಪು ವಾತಾವರಣವಿದ್ದಾಗ ಸಿಂಪರಣೆ ಮಾಡಿದರೆ ಹತೋಟಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
|
* ಬೆಳೆಯ 80-90 ಕಾಲಾವಧಿಯಲ್ಲಿ ಕುಡಿ ಚಿವುಟಿ ತೆಗೆಯುವುದರಿಂದ ಕಾಯಿಕೊರಕಗಳ ಪತಂಗಗಳು ಮೊಟ್ಟೆ ಇಡುವುದನ್ನು ಕಡಿಮೆಗೊಳಿಸಿ ಕೀಟದ ಹಾವಳಿಯನ್ನು ನಿಯಂತ್ರಿಸಬಹುದು.
|
* ಹಿಲಿಯೋಥಿಸ್ ಕೀಟದ ನಿರೋಧಕ ಶಕ್ತಿಯನ್ನು ತಡೆಯಲು ನೂತನ ಗುಂಪಿಗೆ ಸೇರಿದ 0.5 ಮಿ.ಲೀ. ಇಂಡಾಕ್ಸಕಾರ್ಬ್ 14.5 ಎಸ್.ಸಿ ಅಥವಾ 0.2 ಮಿ.ಲೀ. ಸ್ಪೈನೋಸ್ಯಾಡ್ 48 ಎಸ್.ಸಿ ಅಥವಾ 0.25 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಇತರೆ ಕೀಟನಾಶಕಗಳಾದ 3 ಗ್ರಾಂ ಕಾರ್ಬರಿಲ್ 50 ಡಬ್ಲುಪಿ ಅಥವಾ 2.5 ಮಿ.ಲೀ. ಮೊನೊಕ್ರೋಟೋಫಾಸ್ 36 ಎಸ್.ಎಲ್. ಅಥವಾ 2 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ. ಅಥವಾ 2.5 ಮಿ.ಲೀ. ಕ್ಲೋರ್ಪೈರಿಫಾಸ್ 20 ಇಸಿ ಯನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬಹುದು.
|
* ಪೈರಿಥ್ರಾಯಿಡ್ ಕೀಟನಾಶಕಗಳಾದ 0.5 ಮಿ.ಲೀ. ಡೆಕಾಮೆತ್ರಿನ್ 2.8 ಇ.ಸಿ. ಅಥವಾ 0.5 ಮಿ.ಲೀ. ಸೈಪರಮೆಥ್ರಿನ್ 10 ಇ.ಸಿ. ಅಥವಾ 0.5 ಮಿ.ಲೀ. ಫೆನವಲರೇಟ್ 10 ಇ.ಸಿ. ಅಥವಾ 0.5 ಮಿ.ಲೀ. ಬೀಟಾಸೈಪ್ಲೋಥ್ರಿನ್ 25 ಇ.ಸಿ. ಪ್ರತಿ ಲೀ. ನೀರಿನಲ್ಲಿ ಬೆರೆಸಿ ಬಿತ್ತನೆಯಾದ 100 ದಿನಗಳ ನಂತರ ಅವಶ್ಯಕತೆಗನುಸಾರವಾಗಿ ಸಿಂಪಡಿಸಬೇಕು. ಸಿಂಥೆಟಿಕ್ ಪೈರಿಥ್ರಾಯಿಡ್ ಕೀಟನಾಶಕಗಳನ್ನು ಕೇವಲ ಒಂದು ಅಥವಾ ಎರಡು ಸಲ ಮಾತ್ರ 15-20 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 1000-1250 ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ.
|
ಗುಲಾಬಿಕಾಯಿಕೊರಕದನಿರ್ವಹಣೆಗಾಗಿ ವಿಶೇಷಕ್ರಮಗಳು
|
* ಈ ಕೀಟದ ಸಮೀಕ್ಷೆಗಾಗಿ ಪ್ರತಿ ಹೆಕ್ಟೆರಿಗೆ 5 ರಂತೆ ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು. ಇಪ್ಪತ್ತು ದಿವಸಕ್ಕೊಮ್ಮೆ ಲೂರ್ಗಳನ್ನು ಬದಲಾಯಿಸಬೇಕು. ಕೀಟ ನಿಯಂತ್ರಣಕ್ಕಾಗಿ ಹತ್ತಿ ಬಎಳೆಯು 35-40 ದಿನಗಳಾದಾಗ ಪ್ರತಿ ಹೆಕ್ಟೇರಿಗೆ 200 ರಂತೆ ಪಿ.ಬಿ.ರೊಪೆಲ್ ತಂತಿಗಳನ್ನು ಕಾಂಡಕ್ಕೆ ಕಟ್ಟಬೇಕು. ಪ್ರತಿ 50 ಚದರ ಮೀಟರಿಗೆ ಒಂದು ತಂತಿ ಬರುವಂತೆ ಸಮನಾಗಿ ಕಟ್ಟಬೇಕು. ಈ ಕೀಟದ ಗಂಡು ಪತಂಗಗಳನ್ನು ಸಾಮೂಹಿಕವಾಗಿ ಆಕರ್ಷಿಸಿ ನಾಶಪಡಿಸಲು ಪ್ರತಿ ಹೆಕ್ಟೇರಿಗೆ 30 ರಂತೆ ಮೋಹಕ ಬಲೆಗಳನ್ನು ಸಮಾನಾಂತರವಾಗಿ ಅಳವಡಿಸಬೇಕು. ಬಲೆಗೆ ಬಿದ್ದ ಪತಂಗಗಳನ್ನು ಸಾಯಿಸಲು ಡಿ.ಡಿ.ವಿ.ಪಿ ಕೀಟನಾಶಕದಲ್ಲಿ ಅದ್ದಿದ ಅರಳೆಯನ್ನು ಬಲೆಯಲ್ಲಿ ಇಡಬೇಕು. ಮೋಹಕ ಬಲೆಗಳು ಬೆಳೆಯ ಮಟ್ಟದಿಂದ 15 ಸೆಂ.ಮೀ. ಎತ್ತರದಲ್ಲಿರಬೇಕು. ಪ್ರತಿ 20 ದಿನಗಳಿಗೊಮ್ಮೆ ಲೂರ್ಗಳನ್ನು ಬದಲಾಯಿಸಬೇಕು. ಈ ರೀತಿಯ ಸಮೂಹನಾಶಕ ಕ್ರಮವು ಎಲ್ಲ ಕಾಯಿಗಳು ಬಲಿಯುವ ಹಂತದವರೆಗೆ ನಿರಂತರವಾಗಿರಬೇಕು.
|