ಕೃಷಿ ಲಾಭದಾಯಕವಾಗಿ ಮತ್ತು ನಿರಂತರವಾಗಿ ಸುಸ್ಥಿರವಾಗಬೇಕಾದರೆ ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಮತ್ತು ಮಣ್ಣಿನ ಭೌತಿಕ, ರಾಸಾಯನಿಕ, ಮತ್ತು ಜೈವಿಕ ಗುಣಧರ್ಮಗಳು ಉತ್ಪಾದಕತೆಗೆ ಪೂರಕವಾಗುವಂತೆ ಕಾಪಾಡಿಕೊಂಡು ಬರುವುದು ಅತೀ ಮುಖ್ಯ ಕೃಷಿ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಉತ್ಪಾದನಾ ಮಟ್ಟವನ್ನು ನಿರಂತರವಾಗಿ ಕಾಪಾಡಿಕೊಂಡು ಬರಲು ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳ ಬಳಕೆ ಅವಶ್ಯವೆಂದು ಕಂಡುಕೊಳ್ಳಲಾಗಿದೆ.
ಸಣಬು ಮುಖ್ಯವಾದ ಹಸಿರೆಲೆ ಗೊಬ್ಬರದ ಬೆಳೆಯಾಗಿದ್ದು, ಇದನ್ನು ಮೇವಿಗಾಗಿ ಹಾಗೂ ಹಸಿರು ಗೊಬ್ಬರವಾಗಿ ವಿವಿಧ ಬೆಳೆಪದ್ಧತಿಯಲ್ಲಿ ತೋಟಗಾರಿಕೆ, ಹಣ್ಣಿನ ಬೆಳೆಗಳಲ್ಲಿ ಮತ್ತು ಗೋವಿನ ಜೋಳದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಬಹುಪಯೋಗಿ ಸಣಬಿನ ಬೀಜೋತ್ಪಾದನೆಯನ್ನು ಸಾಮಾನ್ಯವಾಗಿ ಎಲ್ಲಾ ವಿಧವಾದ ಮಣ್ಣಿನಲ್ಲಿ ಅದರಲ್ಲೂ ಕಪ್ಪು ಭೂಮಿ ಮತ್ತು ಚೆನ್ನಾಗಿ ನೀರು ಬಸಿಯುವ ಯಾವುದೇ ಮಣ್ಣಿನಲ್ಲಿ ಯಶಸ್ವಿಯಾಗಿ ಬೆಳೆಯಬಹುದು
ಅಂತರ್ಜಲ ಮರುಪೂರಣ ಅಚನಾ ವಿಧಾನಗಳನ್ನು ಬಲಕೆಯಲ್ಲಿರುವ ಪದ್ಧತಿಯನುಸಾರ ನೇರ ಮತ್ತು ಬಳಸು ವಿಧಾನವೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿದೆ. ಬಳಕೆಯಲ್ಲಿರುವ ವಿವಿಧ ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.
1.ಇವು ದ್ವಿದಳ ಜಾತಿಗೆ ಸೇರಿರುವುದರಿಂದ ಸಾರಜನಕ ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.
2.ಸಾರಜನಕವಲ್ಲದೇ ಮಣ್ಣಿನಲ್ಲಿರುವ ಸಾವಯವದ ಅಂಶ ಹೆಚ್ಚಿಸಲು ಸಹಕಾರಿ ಮತ್ತು ಮಣ್ಣಿನ ಫಲವತ್ತತೆ, ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಧರ್ಮ ಸುಧಾರಿಸಿ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ.