ಕ್ರ.ಸಂ.
|
ಪೀಡೆ
|
ಲಕ್ಷಣಮತ್ತುಹಾನಿ
|
ನಿರ್ವಹಣಾಕ್ರಮಗಳು
|
ಕೀಟಗಳು
|
1.
|
ಅಗ್ರೋಮೈಜಿಡ್ ನೊಣ
|
ಇದು ಸಣ್ಣ ನೊಣ, ಎಳೆ ಭಾಗಗಳ ಮೇಲೆ ಇಟ್ಟು ಮೊಟ್ಟೆಯಿಂದ ಹೊರಬಂದ ಮರಿಗಳು ಕಾಂಡವನ್ನು ಕೊರೆಯುತ್ತವೆ. ಕೊರೆದ ಕಾಂಡ ಬಾಡುತ್ತದೆ.
|
ಮುಂಚಿತವಾಗಿ ಬಿತ್ತನೆ ಮಾಡುವುದು, ಬಾಡುತ್ತಿರುವ ಸಸಿಗಳನ್ನು ಕಿತ್ತು ನೆಲದ್ಲಲಿ ಹೂಳಿದರೆ ಮುಂದಿನ ಪೀಳಿಗೆಯನ್ನು ತಡೆಗಟ್ಟಬಹುದು. ಕೀಟನಾಶಕಗಳಾದರೆ ಪ್ರತಿ ಲೀಟರ್ ನೀರಿನಲ್ಲಿ 1.7 ಮಿ.ಲೀ. ಡೈಮಿಥೊಯೇಟ್ 30 ಇ.ಸಿ. ಅಥವಾ 0.5 ಮಿ.ಲೀ. ಫಾಸ್ಫಾಮಿಡಾನ್ 85 ಡಬ್ಲೂ.ಎಸ್.ಸಿ. ಅಥವಾ 0.20 ಗ್ರಾಂ ಥೈಯಾಮೆಥಾಕ್ಸಾಮ್ ಅಥವಾ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ ಬೆರೆಸಿ ಸಿಂಪಡಿಸಬೇಕು.
|
2.
|
ಸಸ್ಯ ಹೇನು
|
ಬೆಳೆಯ ಎಳೆಯ ಭಾಗದಿಂದ ಮರಿಗಳು ಮತ್ತು ಬೆಳೆದ ಹೇನುಗಳು (ಏಫಿಡ್) ರಸವನ್ನು ಹೀರಿ ಬೆಳೆಯನ್ನು ಕುಗ್ಗಿಸುತ್ತವೆ. ಸಿಹಿ ಅಂಟನ್ನು ವಿಸರ್ಜಿಸುವುದರಿಂದ ಕಪ್ಪು ಬೂಸ್ಟ್ ಬೆಳೆಯುತ್ತದೆ. ಚಿಗುರೆಲೆ ಮತ್ತು ಕಾಯಿಗಳಿಂದ ಕೊಡರಸ ಹೀರುತ್ತವೆ. ಕಾಯಿಗಳು ಜೊಳ್ಳಾಗುತ್ತವೆ.
|
1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ ಅಥವಾ 1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇಸಿ ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
|
3.
|
ಥ್ರಿಪ್ಸ್
|
ಚಿಗುರೆಲೆ ಮತ್ತು ಕಾಯಿಗಳಿಂದ ರಸ ಹೀರುತ್ತವೆ. ಕಾಯಿಗಳು ಜೊಳ್ಳಾಗುತ್ತವೆ.
|
ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ ಅಥವಾ 1 ಮಿ.ಲೀ. ಮೊನೊಕ್ರೋಟೋಫಾಸ್ 36 ಎಸ್.ಎಲ್. ಅಥವಾ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು 1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇಸಿ ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
|
4.
|
ಕಾಯಿ ಕೊರೆಯುವ ಹುಳು
|
ಈ ಹುಳು ಕಾಯಿಯಲ್ಲಿ ಬೆಳೆಯುತ್ತಿರುವ ಕಾಳಿನ ಪಕ್ಕದಲ್ಲಿ ರಂಧ್ರ ಕೊರೆದು ಮೊಟ್ಟೆಯನ್ನಿಡುತ್ತದೆ. ಮೊಟ್ಟೆಗಳಿಂದ ಹೊರಬಂದ ಹುಳುಗಳು ಹಸಿರು ಬೀಜವನ್ನು ತಿನ್ನುತ್ತವೆ. ಕಾಯಿಗಳ ಮೇಲೆ ರಂಧ್ರಗಳನ್ನು ಕಾಣಬಹುದು.
|
-ಸದರ-
|
5.
|
ಮೂತಿ ಹುಳು
|
ಮರಿ ಹುಳು ಕಾಳುಗಳನ್ನು ತಿನ್ನುವುದರಿಂದ ಇಳುವರಿ ಕಡಿಮೆ ಆಗುತ್ತದೆ.
|
-ಸದರ-
|